ಹಾಸನ: ಹಾಸನಾಂಬೆ ದೇವಿ ಮತ್ತು ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ (Hasanamba Temple) ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ ಟಿ. ಎ. ಶರವಣ ಅವರು ನಗರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಹಾಸನಾಂಬೆ ಮತ್ತು ಸಿದ್ದೇಶ್ವರ ಸ್ವಾಮಿ ದರ್ಶನ ಪಡೆದ ಅವರು, ರಾಜ್ಯದಲ್ಲಿ ಸುಭಿಕ್ಷವಾಗಿ ಮಳೆಯಾಗಿ, ರೈತಾಪಿ ವರ್ಗದವರ ಬಾಳಲ್ಲಿ ಬೆಳಕು ಮೂಡಲಿ ಎಂದು ಪ್ರಾರ್ಥನೆ ಸಲ್ಲಿಸಿದರು.
ದೀಪಾವಳಿಯ ಪ್ರಯುಕ್ತ ವರ್ಷಕ್ಕೊಮ್ಮೆ ಶ್ರೀ ಹಾಸನಾಂಬೆ ದೇವಾಲಯದ ಬಾಗಿಲು ತೆರೆಯಲಾಗುತ್ತದೆ. ಈ ಬಾರಿ ನವೆಂಬರ್ 2 ರಿಂದ 15 ರವರೆಗೆ ಹಾಸನಾಂಬೆ ದೇವಿ ದೇವಸ್ಥಾನ ತೆರೆದಿರುತ್ತದೆ. ಹೀಗಾಗಿ ರಾಜ್ಯದ ವಿವಿಧೆಡೆಯಿಂದ ಸಾವಿರಾರು ಭಕ್ತರು ನಿತ್ಯವೂ ಆಗಮಿಸಿ ದರ್ಶನ ಪಡೆಯುತ್ತಿದ್ದಾರೆ.
ಇದನ್ನೂ ಓದಿ | Deepavali 2023: ದೀಪಾವಳಿಯಂದು ಯಾವಾಗ ದೀಪ ಬೆಳಗಬೇಕು? ಇಲ್ಲಿದೆ ಮಾಹಿತಿ
ಹಾಸನಾಂಬೆ ದೇಗುಲದ ಪಕ್ಕದಲ್ಲಿರುವ ಶ್ರೀ ಸಿದ್ಧೇಶ್ವರ ಸ್ವಾಮಿಗೂ ಅಪಾರ ಭಕ್ತರು ಇದ್ದಾರೆ. ಹಾಸನಾಂಬೆ ದೇವಿ ಮತ್ತು ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ವಿವಿಧೆಡೆಯಿಂದ ಭಕ್ತರು ಆಗಮಿಸಿ ದರ್ಶನ ಪಡೆಯುತ್ತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ