ಬೆಂಗಳೂರು : ತಿರುಪತಿಯ ವೆಂಕಟೇಶ್ವರ ದೇಗುಲಕ್ಕೆ (Tirutpati Temple) ಕಳೆದ ನವೆಂಬರ್ ತಿಂಗಳಲ್ಲಿ ದಾಖಲೆಯ ೧೨೭ ಕೋಟಿ ರೂಪಾಯಿ ಆದಾಯ ಹರಿದು ಬಂದಿದೆ. ಕೊರೊನಾ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿದ್ದ ಆದಾಯದಲ್ಲಿ ಚೇತರಿಕೆ ಕಂಡಿದೆ. ಕೊರೊನಾ ನಿರ್ಬಂಧಗಳು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಭಕ್ತರು ತಿರುಪತಿಗೆ ಸತತವಾಗಿ ಭೇಟಿ ನೀಡುತ್ತಿರುವ ಕಾರಣ ಆದಾಯದಲ್ಲಿ ಏರಿಕೆ ಕಂಡಿದೆ.
ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಕಾರ್ಯನಿರ್ವಹಣಾಧಿಕಾರಿ ಎ. ವಿ ಧರ್ಮಾರೆಡ್ಡಿ ಅವರು ಈ ಮಾಹಿತಿಯನ್ನು ನೀಡಿದ್ದಾರೆ. ಈ ವೇಳೆ ಅವರು ನವೆಂಬರ್ ತಿಂಗಳಲ್ಲಿ ಒಟ್ಟಾರೆ ೨೨.೭೭ ಲಕ್ಷ ಮಂದಿ ದೇಗುಲದಲ್ಲಿ ದೇವರ ದರ್ಶನ ಮಾಡಿದ್ದಾರೆ ಎಂಬುದಾಗಿ ಹೇಳಿದ್ದಾರೆ.
ನವೆಂಬರ್ ತಿಂಗಳಲ್ಲಿ ಭಾರೀ ಆದಾಯ ಸಂಗ್ರಹಗೊಂಡಿದೆ. ಶ್ರೀವಾರಿ ಹುಂಡಿಯಲ್ಲಿ ೧೨೭. ೩೧ ಕೋಟಿ ರೂಪಾಯಿ ಕಾಣಿಕೆ ಬಿದ್ದಿದೆ. ಲಾಡು ಪ್ರಸಾದದಿಂದ ೧.೦೩ ಕೋಟಿ ರೂಪಾಯಿ ಸಂಗ್ರಹವಾಗಿದೆ. ನವೆಂಬರ್ ತಿಂಗಳಲ್ಲಿ ೪೩. ೧೩ ಲಕ್ಷ ಮಂದಿ ಅನ್ನು ಪ್ರಸಾದ ಸ್ವೀಕಾರ ಮಾಡಿದ್ದು, ೮.೯೧ ಲಕ್ಷ ಮಂದಿ ಮುಡಿ ಕೊಟ್ಟಿದ್ದಾರೆ ಎಂಬುದಾಗಿ ಅವರು ಹೇಳಿದರು.
ಕಳೆದ ಫೆಬ್ರವರಿ ತಿಂಗಳಲ್ಲಿ ೭೯.೩೪ ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿತ್ತು. ಮಾರ್ಚ್‌ನಲ್ಲಿ ಅದು ೧೨೮.೬೦ ಕೋಟಿ ರೂಪಾಯಿಗೆ ಏರಿಕೆಯಾಗಿತ್ತು. ಏಪ್ರಿಲ್‌ನಲ್ಲಿ ೧೨೭ ಕೋಟಿ ರೂಪಾಯಿ, ಮೇ ತಿಂಗಳಲ್ಲಿ ೧೩೦.೨೯ ಕೋಟಿ ರೂಪಾಯಿ ಗಳಿಸಿತ್ತು. ಬಳಿಕ ಆದಾಯದಲ್ಲಿ ಇಳಿಕೆ ಕಂಡಿತ್ತು. ಇದೀಗ ಮತ್ತೆ ಏರಿಕೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ | Amulya Jagadish | ತಿರುಪತಿ ತಿಮ್ಮಪ್ಪನಿಗೆ ಅವಳಿ ಮಕ್ಕಳ ಮುಡಿ ಅರ್ಪಿಸಿದ ನಟಿ ಅಮೂಲ್ಯಾ-ಜಗದೀಶ್ ದಂಪತಿ