Site icon Vistara News

Tirupati Temple | ತಿರುಪತಿಯಲ್ಲಿ ಡಿ.27 ರಂದು ವಿಐಪಿಗಳಿಗೆ ವಿಶೇಷ ದರ್ಶನವಿಲ್ಲ

Tirupati Temple Since it takes 40 hours for darshan in Tirupati a new rule has been implemented here are the details

ಕೋಲಾರ: ತಿರುಪತಿಯ ಪ್ರಸಿದ್ಧ ವೆಂಕಟೇಶ್ವರ ದೇವಸ್ಥಾನಕ್ಕೆ (Tirupati Temple) ನಿತ್ಯ ಲಕ್ಷಾಂತರ ಯಾತ್ರಾರ್ಥಿಗಳು ಭೇಟಿ ನೀಡುತ್ತಾರೆ. ಹೀಗೆ ತಿರುಮಲನ ದರ್ಶನಕ್ಕೆ ಬರುವ ವಿಐಪಿಗಳು ಡಿಸೆಂಬರ್‌ 27 ರಂದು ಸರತಿ ಸಾಲಿನಲ್ಲಿಯೇ ತಿರುಮಲನ ದರ್ಶನ ಪಡೆಯಬೇಕಿದೆ. ಅಂದು ವಿಐಪಿಗಳಿಗೆ ವಿಶೇಷ ದರ್ಶನವಿರುವುದಿಲ್ಲ. ಯಾವುದೇ ಶಿಫಾರಸು ಪತ್ರಗಳನ್ನು ನೀಡಿದರೂ ಪ್ರಯೋಜನವಿಲ್ಲ.

ತಿರುಪತಿಯಲ್ಲಿ ಜನವರಿ 2 ರಂದು ವೈಕುಂಠ ಏಕಾದಶಿ ಇರುವ ಹಿನ್ನೆಲೆಯಲ್ಲಿ ಡಿಸೆಂಬರ್ 27 ರಂದು ದೇವಾಲಯದ ಶುದ್ದೀಕರಣ ನಡೆಯಲಿದೆ. ಹೀಗಾಗಿ ವಿಐಪಿ ದರ್ಶನವನ್ನು ರದ್ದುಗೊಳಿಸಲಾಗಿದೆ. ಡಿಸೆಂಬರ್ 27 ರಂದು ಬೆಳಗ್ಗೆ 6 ರಿಂದ ಮಧ್ಯಾಹ್ನ 12 ರವರೆಗೆ ದೇವಸ್ಥಾನದಲ್ಲಿ ಕೋಯಿಲ್ ಆಳ್ವಾರ್ ತಿರುಮಂಜನ ನಡೆಯಲಿದೆ. ಈ ಕಾರಣಕ್ಕಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಭಕ್ತರು ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಟಿಟಿಡಿಗೆ ಸಹಕರಿಸಬೇಕೆಂದು ಮನವಿ ಮಾಡಲಾಗಿದೆ.

ವರ್ಷದಲ್ಲಿ ಮೂರು ಬಾರಿ ತಿರುಪತಿಯಲ್ಲಿ ಈ ರೀತಿಯ ಶುದ್ಧಿಕಾರ್ಯ ನಡೆಯುತ್ತದೆ. ವೈಕುಂಠ ಏಕಾದಶಿಯ ಹಿನ್ನೆಲೆಯಲ್ಲಿ ಜನವರಿ 2 ರಿಂದ11 ರವರೆಗಿನ ವಿಶೇಷ ದರ್ಶನಕ್ಕಾಗಿ 300 ರೂ.ಗಳ ವಿಶೇಷ ಟಿಕೆಟ್‌ ಅನ್ನು ಬಿಡುಗಡೆ ಮಾಡಲಾಗಿತ್ತು. ಇದು ಆನ್‌ಲೈನ್‌ನಲ್ಲಿ ಬಿಡುಗಡೆಯಾಗುತ್ತಿದ್ದಂತೆಯೇ ಮಾರಾಟವಾಗಿದೆ. ಈಗ ಕೇವಲ ಸರ್ವ ದರ್ಶನ ಟೋಕನ್‌ ಮಾತ್ರ ಬಾಕಿ ಇವೆ.

ಇದನ್ನೂ ಓದಿ | Congress Protest | ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ 10 ಅಡಿ ಆಳದ ಚರಂಡಿಗೆ ಬಿದ್ದ ಯೂತ್‌ ಕಾಂಗ್ರೆಸ್ ಕಾರ್ಯಕರ್ತ

Exit mobile version