Site icon Vistara News

Vastu Tips: ಇದು ಬರೀ ಬೆಳಕಲ್ಲ… ಅದೃಷ್ಟಕ್ಕಾಗಿ ವಾಸ್ತು ಪ್ರಕಾರ ಮನೆಯನ್ನು ಈ ರೀತಿ ಬೆಳಗಿ

home

home

ಬೆಂಗಳೂರು: ಮನೆ ನಿರ್ಮಾಣ ಎನ್ನುವುದು ಬಹುತೇಕರ ಎಷ್ಟೋ ವರ್ಷದ ಕನಸಾಗಿರುತ್ತದೆ. ಅಂತಹ ಮನೆಯಲ್ಲಿ ನೆಮ್ಮದಿಯಿಂದ, ಖುಷಿ ಖುಷಿಯಾಗಿ ಜೀವನ ಕಳೆಯುವಂತಿರಬೇಕು. ಸುಮಾರು 5 ಸಾವಿರ ವರ್ಷಗಳ ಇತಿಹಾಸ ಹೊಂದಿರುವ ವಾಸ್ತು ಶಾಸ್ತ್ರ ನೆಮ್ಮದಿ, ಸಮೃದ್ಧಿ ಹೊಂದಿದ ಮನೆಗಾಗಿ ಕೆಲವೊಂದು ವಿಚಾರಗಳನ್ನು ಪ್ರಸ್ತಾವಿಸಿದೆ. ಯಾವ ರೂಮ್‌ ಹೇಗಿರಬೇಕು, ಅಲ್ಲಿ ಯಾವ ರೀತಿಯ ಬೆಳಕಿನ ವ್ಯವಸ್ಥೆ ಮಾಡಬೇಕು ಎನ್ನುವುದನ್ನು ವಾಸ್ತು ಶಾಸ್ತ್ರ ತಿಳಿಸುತ್ತದೆ. ಆ ಕುರಿತಾದ ವಿವರ ಇಂದಿನ ವಾಸ್ತು ಟಿಪ್ಸ್‌ (Vastu Tips)ನಲ್ಲಿದೆ.

ಹಾಲ್‌

ಇದು ಮನೆಯ ಮುಖ್ಯ ಭಾಗ. ಇಲ್ಲಿ ಗರಿಷ್ಠ ಬೆಳಕು ಇರುವುದು ಮುಖ್ಯ. ಹಾಲ್‌ನ ನೈಋತ್ಯ ಭಾಗದಲ್ಲಿ ಗೋಡೆ ಇದ್ದರೆ ಕುಟುಂಬದ ಸದಸ್ಯರಿಗೆ ಅದೃಷ್ಟ ಮತ್ತು ಉತ್ತಮ ಆರೋಗ್ಯವನ್ನು ತರಲು ಪ್ರಕಾಶಮಾನವಾದ ಸ್ಪಾಟ್ ಲೈಟ್ ಅಳವಡಿಸಿ. ಜತೆಗೆ ಕುಟುಂಬದ ಭಾವಚಿತ್ರವನ್ನು ಅಲ್ಲಿಡಬಹುದು. ಕಲಾಕೃತಿಗಳು ಅಥವಾ ಸಸ್ಯಗಳಿದ್ದರೆ ಅವುಗಳಿಗೆ ಪ್ರತ್ಯೇಕ ಲೈಟ್‌ ಅಳವಡಿಸುವುದು ಉತ್ತಮ.

ಬೆಡ್‌ ರೂಮ್‌

ಇಡೀ ದಿನದ ಆಯಾಸ ಕಳೆದು ನೆಮ್ಮದಿಯಿಂದ, ಬೆಚ್ಚಗೆ ವಿಶ್ರಾಂತಿ ಪಡೆಯಲಿರುವ ಜಾಗ ಬೆಡ್‌ ರೂಮ್‌. ನಾವು ಇಲ್ಲಿ ಹೆಚ್ಚಿನ ಸಮಯ ಕಳೆಯುತ್ತೇವೆ. ಇಲ್ಲಿ ಓದುವುದು, ಸಿನಿಮಾ ನೋಡುವುದು, ನಿದ್ದೆ ಮಾಡುವುದು ಸೇರಿದಂತೆ ನಮ್ಮಿಷ್ಟದ ಚಟುವಟಿಕೆಗಳಲ್ಲಿ ನಿರತರಾಗಿರುತ್ತೇವೆ. ಹೀಗಾಗಿ ಈ ಕೋಣೆಯ ಬಗ್ಗೆ ಮುತುವರ್ಜಿ ವಹಿಸುವುದು ಅಗತ್ಯ. ಛಾಯಾಚಿತ್ರಗಳು ಅಥವಾ ವರ್ಣಚಿತ್ರಗಳಿಗೆ ಪ್ರತ್ಯೇಕ ಲೈಟ್‌ ಅಳವಡಿಸಿ. ಮಲಗುವ ಕೋಣೆಯಲ್ಲಿ ಹಿತಕರ ಬೆಳಕು ಸೂಸುವ ದೀಪ ಬಳಸಿ. ಟೇಬಲ್ ಲ್ಯಾಂಪ್‌ಗಳನ್ನು ಇರಿಸುವುದು ಸೂಕ್ತ.

ಡೈನಿಂಗ್‌ ರೂಮ್‌

ಇಲ್ಲಿ ಸ್ಫಟಿಕದ ಶಾಂಡ್ಲಿಯರ್ ದೀಪಗಳನ್ನು ಅಳವಡಿಸಿಕೊಳ್ಳಬಹುದು. ಇದು ಅದೃಷ್ಟವನ್ನು ಹೊತ್ತು ತರುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಅಲಂಕಾರಿಕ ಹೋಲ್ಡರ್‌ಗಳಲ್ಲಿ ಕ್ಯಾಂಡಲ್‌ ಇರಿಸಬಹುದು. ಇದು ಡೈನಿಂಗ್‌ ರೂಮ್‌ ಅನ್ನು ಆಕರ್ಷಕವಾಗಿಸುತ್ತದೆ. ಒಟ್ಟಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬೆಳಕು ಬೀರುವ ಬಲ್ಬ್‌ ಅಳವಡಿಸಿ. ಊಟ ಮಾಡುವಾಗ ಮಬ್ಬು ಇರಬಾರದು.

ಅಡುಗೆ ಕೋಣೆ

ಕುಟುಂಬ ಸದಸ್ಯರು ಒಟ್ಟಿಗೆ ಸೇರುವ ಮತ್ತು ತಮಗಾಗಿ ಆಹಾರ ಸಿದ್ಧಪಡಿಸುವ ಸ್ಥಳ ಅಡುಗೆ ಕೋಣೆ. ಇದು ಮನೆಯ ಇನ್ನೊಂದು ಬಹಳ ಮುಖ್ಯವಾದ ಸ್ಥಳವಾಗಿದ್ದು, ಇದನ್ನು ಸಮರ್ಪಕವಾಗಿ ಬೆಳಗಿಸಬೇಕು. ಕಾರ್ಯನಿರ್ವಹಣೆಗೆ ಅನುಕೂಲವಾಗುವಂತೆ ನಿರ್ದಿಷ್ಟ ಕಡೆಗಳಲ್ಲಿ ಲೈಟ್‌ ಅಳವಡಿಸಬೇಕು. ಇಲ್ಲಿ ಬೆಳಕು ಮತ್ತು ನೆರಳು ಸಮಾನವಾಗಿ ಹಂಚಿಕೆಯಾಗಬೇಕು. ಇಲ್ಲಿ ಟ್ಯೂಬ್‌ಲೈಟ್‌ಗಳನ್ನು ಬಳಸಬಹುದು. ಅಕ್ಕಿ, ಬೇಳೆ ಮುಂತಾದ ವಸ್ತುಗಳನ್ನು ದಾಸ್ತಾನು ಇರಿಸುವ ಜಾಗ ಪ್ರಕಾಶಮಾನವಾಗಿರಲಿ.

ಬಾತ್‌ ರೂಮ್‌

ಬಾತ್‌ ರೂಮ್‌ನ ಎಲ್ಲ ಕಡೆ ಬೆಳಕು ಹರಡುವಂತಿರಬೇಕು. ಮಂದ ಬೆಳಕು ಬೀರಲು ಕಡಿಮೆ ವ್ಯಾಟ್‌ನ ಬಲ್ಬ್ ಬಳಸಬಹುದು. ಸೋಪ್‌, ಪೇಸ್ಟ್‌, ಬ್ರಷ್‌ ಮುಂತಾದ ವಸ್ತುಗಳನ್ನು ಇರಿಸುವ ಸ್ಥಳಗಳ ಸುತ್ತಲೂ ಬೆಳಕಿನ ವ್ಯವಸ್ಥೆ ಮಾಡಿ. ಅಪಾಯಗಳನ್ನು ತಪ್ಪಿಸಲು ಟಬ್ ಅಥವಾ ಶವರ್ ಮೇಲಿನ ಲೈಟ್‌ಗಳು ನೀರು ಮತ್ತು ಆವಿ-ನಿರೋಧಕ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯ.

ವಾಸ್ತು ಪ್ರಕಾರ ಲೈಟ್‌ ಅಳವಡಿಕೆಯ ಸಾಮಾನ್ಯ ನಿಯಮಗಳು

ಇದನ್ನೂ ಓದಿ: Vastu Tips: ಅದೃಷ್ಟದ ಬಾಗಿಲು ತೆರೆಯಲು ಈ ಟಿಪ್ಸ್‌ ಫಾಲೋ ಮಾಡುವುದನ್ನು ಮರೆಯಬೇಡಿ

Exit mobile version