Site icon Vistara News

Vastu Tips: ವಾಸ್ತು ಪ್ರಕಾರ ಮಕ್ಕಳ ಅಧ್ಯಯನ ಕೊಠಡಿ ಹೀಗಿರಬೇಕು

Vastu Tips

ಮಕ್ಕಳ (children) ಅಧ್ಯಯನ (study) ಚೆನ್ನಾಗಿ ನಡೆಯಬೇಕಿದ್ದರೆ ಅವರು ಅಧ್ಯಯನ ಮಾಡುವ ವಾತಾವರಣವೂ ಉತ್ತಮವಾಗಿರಬೇಕು. ವಾಸ್ತು ಪ್ರಕಾರ (Vastu Tips) ಮಕ್ಕಳ ಅಧ್ಯಯನ ಕೊಠಡಿ (study room) ಧನಾತ್ಮಕ ಅಂಶಗಳಿಂದ (positive energy) ತುಂಬಿರಬೇಕು.

ಮಕ್ಕಳ ಅಧ್ಯಯನ ವಾತಾವರಣದಲ್ಲಿ ದೋಷವಿದ್ದರೆ ಅದು ಅವರ ಮನಸ್ಸನ್ನು ವಿಚಲಿತಗೊಳಿಸುತ್ತದೆ. ಆದ್ದರಿಂದ ಮಕ್ಕಳು ಅಧ್ಯಯನ ಮಾಡುವ ಕೊಠಡಿ ಹೇಗಿರಬೇಕು ಎಂಬುದನ್ನು ಮೊದಲು ತಿಳಿದುಕೊಳ್ಳುವುದು ಬಹು ಮುಖ್ಯ.

ವಾಸ್ತು ಶಾಸ್ತ್ರವು ಅಡುಗೆ ಮನೆಯಿಂದ ಮಲಗುವ ಕೋಣೆಯವರೆಗೆ ಸಾಕಷ್ಟು ನಿಯಮಗಳನ್ನು ಹೊಂದಿರುತ್ತದೆ. ಮಕ್ಕಳ ಅಧ್ಯಯನ ಕೊಠಡಿಯು ವಾಸ್ತು ನಿಯಮಗಳ ಮೇಲೆ ಆಧಾರಿತವಾಗಿದ್ದರೆ ಅವರ ಮನಸ್ಸು ಅಧ್ಯಯನದ ಮೇಲೆ ಕೇಂದ್ರೀಕೃತವಾಗಿರುತ್ತದೆ.

ವಾಸ್ತು ಶಾಸ್ತ್ರವು ಧನಾತ್ಮಕ ಶಕ್ತಿಯನ್ನು ಆಧರಿಸಿರುತ್ತದೆ. ಇದರಲ್ಲಿ ಮನೆಯ ಪರಿಸರವನ್ನು ಶುದ್ಧ ಮತ್ತು ಧನಾತ್ಮಕವಾಗಿಡಲು ಹಲವು ಕ್ರಮಗಳನ್ನು ನೀಡಲಾಗಿದೆ.


ಮಕ್ಕಳ ಮೇಲೆ ಏನು ಪ್ರಭಾವ?

ವಾಸ್ತು ಪ್ರಕಾರ ಅಧ್ಯಯನ ಕೊಠಡಿಯಲ್ಲಿ ವಾಸ್ತು ದೋಷವಿದ್ದರೆ ಮಕ್ಕಳಿಗೆ ಓದಲು ಮನಸ್ಸಾಗುವುದಿಲ್ಲ. ಮಗುವಿನ ಮನಸ್ಸು ಏಕಾಗ್ರತೆ ಹೊಂದಲು ಸಾಧ್ಯವಾಗುವುದಿಲ್ಲ ಮತ್ತು ಅದು ಅವರ ಅಧ್ಯಯನದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಮಕ್ಕಳ ಅಧ್ಯಯನ ಕೋಣೆಯ ವಿಚಾರದಲ್ಲಿ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ.

ಟೇಬಲ್‌ ಯಾವ ದಿಕ್ಕಿನಲ್ಲಿರಬೇಕು?

ಮಕ್ಕಳ ಕೋಣೆಯಲ್ಲಿ ಯಾವಾಗಲೂ ಟೇಬಲ್ ಅನ್ನು ದಕ್ಷಿಣ ದಿಕ್ಕಿನಲ್ಲಿ ಇರಿಸಿ. ಇದರಿಂದ ಮಗುವಿನ ಮುಖವು ಉತ್ತರ, ಪೂರ್ವ ಅಥವಾ ಈಶಾನ್ಯಕ್ಕೆ ಇರುತ್ತದೆ. ಇದರಿಂದ ಅವರು ಅಧ್ಯಯನದತ್ತ ಹೆಚ್ಚಿನ ಗಮನ ಹರಿಸುತ್ತರೆ. ಈ ದಿಕ್ಕುಗಳನ್ನು ಎದುರಿಸುವುದರಿಂದ ಧನಾತ್ಮಕ ಶಕ್ತಿ ತುಂಬುತ್ತದೆ. ಇದು ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಬುದ್ಧಿವಂತಿಕೆಯನ್ನು ಅಭಿವೃದ್ಧಿಪಡಿಸುತ್ತದೆ.

ಪುಸ್ತಕದ ಕಪಾಟು ಎಲ್ಲಿರಬೇಕು?

ಮಕ್ಕಳ ಅಧ್ಯಯನ ಕೊಠಡಿಯಲ್ಲಿ ಪುಸ್ತಕದ ಕಪಾಟು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿರಬೇಕು. ಈ ಶೆಲ್ಫ್ ಅನ್ನು ಪ್ರತಿದಿನ ಸ್ವಚ್ಛಗೊಳಿಸಬೇಕು.


ಯಾವ ಚಿತ್ರಗಳನ್ನು ಇಡಬಹುದು ?

ಮಕ್ಕಳ ಓದುವ ಕೋಣೆಯಲ್ಲಿ ಗಣೇಶ ದೇವರ ಫೋಟೋ ಹಾಕಬೇಕು. ಪ್ರತಿನಿತ್ಯ ಗಣಪತಿಯನ್ನು ಪೂಜಿಸುವುದರಿಂದ ಮಕ್ಕಳ ಬುದ್ದಿಶಕ್ತಿ ಹಾಗೂ ಜ್ಞಾಪಕ ಶಕ್ತಿ ಹೆಚ್ಚುತ್ತದೆ. ಇದರಿಂದ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗುತ್ತಾರೆ.

ಮಕ್ಕಳ ಕೋಣೆಯಲ್ಲಿ ಸಂತೋಷವನ್ನು ಸಂಕೇತಿಸುವ ಚಿತ್ರಗಳನ್ನು ಯಾವಾಗಲೂ ಇಡಬೇಕು. ಮಹಾನ್ ವ್ಯಕ್ತಿಗಳ ಫೋಟೋಗಳನ್ನು ಅವರ ಕೋಣೆಯಲ್ಲಿ ಇರಿಸಿ, ಇದರಿಂದ ಅವರು ಅವರಂತೆ ಆಗಲು ಯೋಚಿಸುತ್ತಾರೆ. ಕೋಣೆಯ ಪೂರ್ವ ದಿಕ್ಕಿನಲ್ಲಿ ಸರಸ್ವತಿಯ ಚಿತ್ರವನ್ನು ಹಾಕಬಹುದು.

ಮಗುವಿಗೆ ಕೆಲವು ವಿಷಯಗಳನ್ನು ಅರ್ಥಮಾಡಿಕೊಳ್ಳಲು ತೊಂದರೆಗಳಿದ್ದರೆ, ಕೋಣೆಯ ಉತ್ತರ ದಿಕ್ಕಿನಲ್ಲಿ ಬ್ರಹ್ಮದೇವನ ಚಿತ್ರ ಅಥವಾ ವರ್ಣಚಿತ್ರವನ್ನು ಹಾಕಿ. ಇದು ಎಲ್ಲಾ ವಿಷಯಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ಎಲ್ಲಿ ಇರಬಾರದು ?

ಶೌಚಾಲಯದಿಂದ ಬರುವ ನಕಾರಾತ್ಮಕ ಶಕ್ತಿಯು ಅಧ್ಯಯನದಿಂದ ಮಕ್ಕಳ ಮನಸ್ಸನ್ನು ವಿಚಲಿತಗೊಳಿಸುತ್ತದೆ ಎಂಬ ಕಾರಣಕ್ಕಾಗಿ ಶೌಚಾಲಯದ ಬಳಿ ಅಧ್ಯಯನ ಕೊಠಡಿಯನ್ನು ಎಂದಿಗೂ ನಿರ್ಮಿಸಬಾರದು.

ಇದನ್ನೂ ಓದಿ: Vastu Tips: ಮನೆಯಲ್ಲಿ ನೆಮ್ಮದಿ ನೆಲೆಸಬೇಕೆ? ಹಾಗಿದ್ದರೆ ಅಡುಗೆ ಒಲೆಯ ದಿಕ್ಕು ಸರಿಯಾಗಿರಲಿ!

ಕೊಠಡಿ ಹೇಗಿರಬೇಕು?

ಮಕ್ಕಳ ಅಧ್ಯಯನ ಕೊಠಡಿಯು ಯಾವಾಗಲೂ ಸ್ವಚ್ಛವಾಗಿರಬೇಕು. ಪುಸ್ತಕಗಳನ್ನು ಅಲ್ಲಲ್ಲಿ ಹರಡಿ ಅಸ್ತವ್ಯಸ್ತವಾಗಿ ಇಡಬೇಡಿ. ಈ ರೀತಿ ಮಾಡುವುದರಿಂದ ಮಕ್ಕಳ ಮನಸ್ಸು ಏಕಾಗ್ರತೆ ಹೊಂದಲು ಕಷ್ಟವಾಗಬಹುದು.

Exit mobile version