Site icon Vistara News

Vastu Tips: ಈ ವಾಸ್ತು ನಿಯಮ ಪಾಲಿಸಿ; ಹಣಕಾಸಿನ ಸಮಸ್ಯೆಯಿಂದ ಪಾರಾಗಿ

Vastu Tips

ಮನೆಯ ವಾಸ್ತು (vastu for home) ಸಾಮರಸ್ಯದಿಂದ ಬಾಳಲು ಮೂಲಾಧಾರವಾಗಿರುತ್ತದೆ. ಹೀಗಾಗಿ ಹಿಂದೂ ಧರ್ಮದಲ್ಲಿ ವಾಸ್ತು ಶಾಸ್ತ್ರಕ್ಕೆ (Vastu Tips) ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಮನೆ ನಿರ್ಮಾಣದಿಂದ (house construction) ಅಲಂಕಾರದವರೆಗೆ ( home decoration) ಪ್ರತಿಯೊಂದು ಹಂತದಲ್ಲೂ ಇದು ಮಾರ್ಗದರ್ಶನ ನೀಡುತ್ತದೆ. ಇದರ ತತ್ತ್ವಗಳು ಆರ್ಥಿಕ ಸಮಸ್ಯೆಗಳು ಸೇರಿದಂತೆ ಹಲವಾರು ಜೀವನದ ಸವಾಲುಗಳನ್ನು ಪರಿಹರಿಸುತ್ತವೆ ಎಂದು ನಂಬಲಾಗುತ್ತದೆ.

ಮನೆಯಲ್ಲಿ ಆರ್ಥಿಕ ಸಮಸ್ಯೆಗಳು ಕಾಣಿಸಿಕೊಂಡರೆ ಮನೆಯ ನೆಮ್ಮದಿ, ಶಾಂತಿ, ಮನೆಯವರ ಆರೋಗ್ಯ.. ಹೀಗೆ ಎಲ್ಲದರಲ್ಲೂ ಒಂದಲ್ಲ ಒಂದು ಸಮಸ್ಯೆಗಳು ಕಾಡಲು ಪ್ರಾರಂಭವಾಗುತ್ತದೆ. ಮನೆಯಲ್ಲಿ ಹಣದ ಕೊರತೆ ಕಾಣಿಸಿಕೊಂಡರೆ ಅಥವಾ ಸಾಲದ ಹೊರೆ ಹೆಚ್ಚಾಗುತ್ತಿದ್ದರೆ ಈ ವಾಸ್ತು ಪರಿಹಾರಗಳು ಇದರಿಂದ ಹೊರಬರಲು ಸಹಾಯ ಮಾಡುತ್ತದೆ.

Vastu Tips


ತುಳಸಿ ಬೇರು

ತುಳಸಿ ಗಿಡವು ಹಿಂದೂ ಧರ್ಮದಲ್ಲಿ ಪೂಜ್ಯನೀಯ ಸ್ಥಾನವನ್ನು ಹೊಂದಿದೆ. ಅದರಲ್ಲಿ ಲಕ್ಷ್ಮೀ ದೇವಿಯು ವಾಸವಾಗಿದ್ದಾಳೆ ಎಂದೇ ನಂಬಲಾಗಿದೆ.

ಒಣ ತುಳಸಿ ಬೇರನ್ನು ಕೆಲವು ಅಕ್ಕಿ ಕಾಳುಗಳೊಂದಿಗೆ ಕೆಂಪು ಬಟ್ಟೆಯಲ್ಲಿ ಕಟ್ಟಿ ಅದನ್ನು ಮನೆಯ ಮುಖ್ಯ ಬಾಗಿಲಿಗೆ ನೇತುಹಾಕಿ. ಇದರಿಂದ ಮನೆಯೊಳಗೇ ಧನಾತ್ಮಕ ಶಕ್ತಿಯ ಆಹ್ವಾನವಾಗುತ್ತದೆ. ಇದು ಮನೆಯಲ್ಲಿ ಆರ್ಥಿಕ ಸ್ಥಿರತೆಯನ್ನು ಹೆಚ್ಚಿಸುತ್ತದೆ.

Vastu Tips


ಉಪ್ಪಿನ ಚೀಲ

ಮನೆಯ ಪ್ರವೇಶದ್ವಾರದಲ್ಲಿ ಉಪ್ಪಿನ ಚೀಲವನ್ನು ನೇತುಹಾಕುವುದು ಕೂಡ ಆರ್ಥಿಕ ಪರಿಸ್ಥಿತಿಗಳನ್ನು ಸುಧಾರಿಸಲು ಮತ್ತೊಂದು ವಾಸ್ತು ಶಾಸ್ತ್ರ ಹೇಳಿರುವ ಪರಿಹಾರ ವಿಧಿಯಾಗಿದೆ. ತಾತ್ತ್ವಿಕವಾಗಿ, ಇದನ್ನು ಶುಕ್ರವಾರ ಅಥವಾ ಶನಿವಾರ ಮಾಡಬೇಕು.

ಉಪ್ಪು ಜಾತಕದಲ್ಲಿರುವ ಶುಕ್ರ ಗ್ರಹವನ್ನು ಬಲಪಡಿಸುತ್ತದೆ ಎಂದು ನಂಬಲಾಗಿದೆ, ಇದು ವಸ್ತು ಸೌಕರ್ಯಗಳಿಗೆ ಸಂಬಂಧಿಸಿದೆ. ಶುಕ್ರನನ್ನು ಬಲಪಡಿಸುವುದರಿಂದ ಆರ್ಥಿಕ ಸ್ಥಿರತೆಯನ್ನು ಪಡೆಯಬಹುದು ಮತ್ತು ಭೌತಿಕ ಸಂತೋಷಗಳನ್ನು ಅನುಭವಿಸಬಹುದು.

ಇದನ್ನೂ ಓದಿ: Vastu Tips: ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಬೇಕೆಂದರೆ ಅಡುಗೆ ಮನೆ ಹೀಗಿರಬೇಕು!

Vastu Tips


ಅರಿಶಿನ ಗಂಟು

ಸಂತೋಷ ಮತ್ತು ಸಮೃದ್ಧಿಯನ್ನು ಆಕರ್ಷಿಸಲು ಮನೆಯ ಮುಖ್ಯ ದ್ವಾರದಲ್ಲಿ ಅರಿಶಿನದ ಗಂಟು ಕಟ್ಟಲು ವಾಸ್ತು ಶಾಸ್ತ್ರವು ಶಿಫಾರಸು ಮಾಡುತ್ತದೆ. ಈ ಸರಳ ಕ್ರಿಯೆಯು ನಕಾರಾತ್ಮಕ ಶಕ್ತಿಗಳನ್ನು ಹೋಗಲಾಡಿಸುತ್ತದೆ ಮತ್ತು ಲಕ್ಷ್ಮಿ ದೇವಿಯ ಅನುಗ್ರಹವನ್ನು ಕರುಣಿಸುತ್ತದೆ.

ಇದು ಮನೆಯ ಒಟ್ಟಾರೆ ಯೋಗಕ್ಷೇಮವನ್ನು ಹೆಚ್ಚಿಸುವ ಮೂಲಕ ಹಣಕಾಸಿನ ತೊಂದರೆಗಳನ್ನು ನಿವಾರಿಸುತ್ತದೆ.

Exit mobile version