Site icon Vistara News

Vastu Tips: ಮನೆ ಸಂತೋಷದ ತಾಣವಾಗಬೇಕೆಂದರೆ ಮಲಗುವ ಕೋಣೆ ಹೀಗಿರಲಿ

Vastu Tips

ಮನೆ ಪ್ರೀತಿ (love), ಶಾಂತಿ (peace) ಮತ್ತು ಸಂತೋಷದ (joy) ಧಾಮವಾಗಬೇಕೆಂದು ಬಯಸಿದರೆ ಒಳಾಂಗಣ ವಿನ್ಯಾಸದಲ್ಲಿ (interior design) ವಾಸ್ತು ತತ್ತ್ವಗಳನ್ನು (Vastu Tips) ಅಳವಡಿಸಿಕೊಳ್ಳುವುದು ಬಹು ಮುಖ್ಯವಾಗಿರುತ್ತದೆ. ಇದು ನಾವು ವಾಸಿಸುವ ಪ್ರದೇಶದಲ್ಲಿ ಧನಾತ್ಮಕ ಶಕ್ತಿ ಸಂಚಯನಕ್ಕೆ ಮತ್ತು ಇದರಲ್ಲಿ ಸಮತೋಲನ ಕಾಪಾಡಿಕೊಳ್ಳಲು ವಾಸ್ತು ನೆರವಾಗುತ್ತದೆ.

ವಾಸ್ತು ಪುರಾತನ ಭಾರತೀಯ ವಿಜ್ಞಾನ. ಮಂಗಳಕರ ಶಕ್ತಿಯನ್ನು ಆಹ್ವಾನಿಸಲು ಮತ್ತು ಪ್ರಕೃತಿಯೊಂದಿಗೆ ಸಮನ್ವಯಗೊಳಿಸಲು ವಿವಿಧ ಅಂಶಗಳ ಜೋಡಣೆ ಮತ್ತು ನಿಯೋಜನೆಯ ಮೇಲೆ ಇದು ಕೇಂದ್ರೀಕರಿಸುತ್ತದೆ. ಈ ತತ್ತ್ವಗಳನ್ನು ಅನ್ವಯಿಸುವುದರಿಂದ ಮನೆಯನ್ನು ಆರಾಮ ಮತ್ತು ನೆಮ್ಮದಿಯ ತಾಣವಾಗಿ ಪರಿವರ್ತಿಸಬಹುದು.

ರೆಸೈಕಿ ಇಂಟೀರಿಯರ್ಸ್ ಮತ್ತು ಆರ್ಕಿಟೆಕ್ಚರ್ ಡಿಸೈನ್ ಸ್ಟುಡಿಯೋದ ಸಂಸ್ಥಾಪಕ ಮತ್ತು ವಿನ್ಯಾಸ ಮುಖ್ಯಸ್ಥ ಕುಂತಲ್ ವ್ಯಾಸ್ ಅಗರ್ವಾಲ್ ಪ್ರಕಾರ, ವಾಸ್ತು ತತ್ತ್ವಗಳೊಂದಿಗೆ ಮನೆ, ಕಚೇರಿಯ ಜಾಗವನ್ನು ವಿನ್ಯಾಸಗೊಳಿಸುವುದು ಸೌಂದರ್ಯಕ್ಕೆ ಸಂಬಂಧಿಸಿದ್ದಲ್ಲ, ಇದು ಮಾನವ ಚೈತನ್ಯವನ್ನು ಪೋಷಿಸುವ ಮತ್ತು ಉನ್ನತೀಕರಿಸುವ ವಾತಾವರಣವನ್ನು ಸೃಷ್ಟಿಸುತ್ತದೆ.

ಸಾಮರಸ್ಯ ಮತ್ತು ನೆಮ್ಮದಿಯನ್ನು ಹೆಚ್ಚಿಸಲು ಮಲಗುವ ಕೋಣೆಯ ವಿನ್ಯಾಸದಲ್ಲಿ ವಾಸ್ತು ತತ್ತ್ವಗಳನ್ನು ಸೇರಿಸಲು ಕೆಲವು ಪ್ರಾಯೋಗಿಕ ಸಲಹೆಗಳನ್ನು ಅವರು ನೀಡಿದ್ದಾರೆ. ಬೆಚ್ಚಗಿನ, ಭೂಮಿಯ ತತ್ತ್ವದ ಪರಿಣಾಮವನ್ನು ರಚಿಸಲು ಮರವನ್ನು ಕಪಾಟಿ, ಮಲಗುವ ಮಂಚದಲ್ಲಿ ಬಳಸುವುದು ಉತ್ತಮ. ಬಾಗಿಲುಗಳಿಗೆ ಘನವಾದ ಮರ ಬಳಸಬೇಕು. ಇದು ಶಕ್ತಿಯ ಸುಗಮ ಹರಿವನ್ನು ಖಚಿತಪಡಿಸಿಕೊಳ್ಳಲು ಪ್ರದಕ್ಷಿಣಾಕಾರವಾಗಿ ತೆರೆಯುವಂತಿರಬೇಕು.

Vastu Tips


ಬಣ್ಣ ಮುಖ್ಯ ಪಾತ್ರ ವಹಿಸುತ್ತದೆ:

ವಾಸ್ತುವಿನಲ್ಲಿ ಬಣ್ಣಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಹಳದಿ, ಕೇಸರಿ ಅಥವಾ ತಿಳಿ ಕೆಂಪು ಬಣ್ಣಗಳನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದು ರೋಮಾಂಚಕ ಮತ್ತು ಶಾಂತ ವಾತಾವರಣವನ್ನು ಸೃಷ್ಟಿಸುತ್ತದೆ. ಶುಚಿತ್ವ ಮತ್ತು ಸಕಾರಾತ್ಮಕತೆಯನ್ನು ಹೆಚ್ಚಿಸಲು, ಕೋಣೆಯ ಶಕ್ತಿಯನ್ನು ಹೆಚ್ಚಿಸಲು ಹಾಸಿಗೆ ಮತ್ತು ಪೀಠೋಪಕರಣಗಳಿಗೆ ತಿಳಿ ಬಣ್ಣವನ್ನು ಆರಿಸಿಕೊಳ್ಳಿ.

ಹಾಸಿಗೆಯ ನಿಯೋಜನೆ ಮುಖ್ಯ:

ವಾಸ್ತು ಪ್ರಕಾರ ಹಾಸಿಗೆಯ ನಿಯೋಜನೆಯು ಮುಖ್ಯವಾಗಿದೆ. ಭೂಮಿಯ ಆಯಸ್ಕಾಂತೀಯ ಕ್ಷೇತ್ರದೊಂದಿಗೆ ಜೋಡಿಸಲು ದಕ್ಷಿಣ ಅಥವಾ ಪೂರ್ವದ ಕಡೆಗೆ ಇರಿಸಿ. ಇದು ಶಕ್ತಿಯ ಸಮತೋಲಿತ ಹರಿವನ್ನು ಖಾತ್ರಿಪಡಿಸುತ್ತದೆ.

ವಿಪರೀತ ಅಲಂಕಾರ ಬೇಡ:

ಸಣ್ಣ ಮಲಗುವ ಕೋಣೆಗಳಲ್ಲಿ ಸ್ವಚ್ಛತೆ ಮತ್ತು ಸ್ಪಷ್ಟತೆ ಕಾಪಾಡಿಕೊಳ್ಳಲು ಪೀಠೋಪಕರಣ, ಅಲಂಕಾರಿಕ ಅಗತ್ಯ ವಸ್ತುಗಳು ಆದಷ್ಟು ಕನಿಷ್ಠವಾಗಿರಲಿ. ಮಲಗುವ ಕೊನೆಯಲ್ಲಿ ಕಡಿಮೆ ವಸ್ತುಗಳು ಶಕ್ತಿಯ ಸಂಚಾರವನ್ನು ಸುಗಮಗೊಳಿಸುತ್ತದೆ ಮತ್ತು ಮಾನಸಿಕ ಸ್ಪಷ್ಟತೆಯನ್ನು ಉತ್ತೇಜಿಸುತ್ತದೆ.

ಇದನ್ನೂ ಓದಿ: Shravan 2024: ನಾಳೆಯಿಂದ ಶ್ರಾವಣ ಮಾಸ ಆರಂಭ; ಶುಭ ಕಾರ್ಯಗಳನ್ನು ಮಾಡಲು ಈ ತಿಂಗಳು ಸೂಕ್ತ ಏಕೆ?


ಕೋಣೆಯನ್ನು ನಿಧಾನವಾಗಿ ಬೆಳಗಿಸಲು ಸೂಕ್ತ ವಿದ್ಯುತ್‌ ಬೆಳಕಿನ ವ್ಯವಸ್ಥೆ ಮಾಡಿ. ಇದು ಕೋಣೆಯಲ್ಲಿ ಹಿತವಾದ ಹೊಳಪನ್ನು ಸೃಷ್ಟಿಸುವಂತಿರಲಿ. ಈ ಎಚ್ಚರಿಕೆಯಿಂದ ಆಯ್ಕೆ ಮಾಡಿದ ಬೆಳಕು ಕೋಣೆಯ ಶಾಂತಿಯನ್ನು ಹೆಚ್ಚಿಸುತ್ತದೆ ಮತ್ತು ಹಿತಕರ ವಾತಾವರಣವನ್ನು ಕೆಡಿಸುವ ಯಾವುದೇ ನೆರಳು ಅಥವಾ ಡಿಮ್‌ ಎನಿಸುವ ಮೂಲೆಗಳನ್ನು ದೂರವಿಡುತ್ತದೆ.

ಅಲಂಕಾರಿಕ ವಸ್ತುಗಳನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಿ. ನೈಟ್‌ಸ್ಟ್ಯಾಂಡ್‌ನಲ್ಲಿ ಶಾಂತ ಎನಿಸುವ ಸಸ್ಯ ಮತ್ತು ಗೋಡೆಗಳ ಮೇಲೆ ಪ್ರಶಾಂತ ಕಲಾಕೃತಿಯನ್ನು ಇರಿಸಿ. ಈ ಅಂಶಗಳು ಕೋಣೆಯಲ್ಲಿ ಶಾಂತಿಯುತ ವಾತಾವರಣವನ್ನು ಸೃಷ್ಟಿಸುತ್ತದೆ. ಕೋಣೆಯ ವಾತಾವರಣವನ್ನು ಹದಗೆಡಿಸುವ ತೀಕ್ಷ್ಣವಾದ ಅಥವಾ ಆಕ್ರಮಣಕಾರಿ ವಿನ್ಯಾಸಗಳನ್ನು ಆಯ್ಕೆ ಮಾಡಬೇಡಿ.

Exit mobile version