Vastu Tips: ಮನೆ ಸಂತೋಷದ ತಾಣವಾಗಬೇಕೆಂದರೆ ಮಲಗುವ ಕೋಣೆ ಹೀಗಿರಲಿ - Vistara News

ಧಾರ್ಮಿಕ

Vastu Tips: ಮನೆ ಸಂತೋಷದ ತಾಣವಾಗಬೇಕೆಂದರೆ ಮಲಗುವ ಕೋಣೆ ಹೀಗಿರಲಿ

ಮನೆ, ಕಚೇರಿಯ ಜಾಗವನ್ನು ವಿನ್ಯಾಸಗೊಳಿಸುವುದು ಸೌಂದರ್ಯಕ್ಕೆ ಸಂಬಂಧಿಸಿದ್ದಲ್ಲ, ಇದು ಮಾನವ ಚೈತನ್ಯವನ್ನು ಪೋಷಿಸುವ ಮತ್ತು ಉನ್ನತೀಕರಿಸುವ ವಾತಾವರಣವನ್ನು ನಿರ್ಮಿಸುವುದಾಗಿದೆ. ಮನೆಯಲ್ಲಿ ಸಾಮರಸ್ಯ ಮತ್ತು ನೆಮ್ಮದಿಯನ್ನು ಹೆಚ್ಚಿಸಲು ಮಲಗುವ ಕೋಣೆಯ ವಿನ್ಯಾಸದಲ್ಲಿ ವಾಸ್ತು ತತ್ತ್ವಗಳನ್ನು (Vastu Tips) ಸೇರಿಸಲೇಬೇಕು.

VISTARANEWS.COM


on

Vastu Tips
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮನೆ ಪ್ರೀತಿ (love), ಶಾಂತಿ (peace) ಮತ್ತು ಸಂತೋಷದ (joy) ಧಾಮವಾಗಬೇಕೆಂದು ಬಯಸಿದರೆ ಒಳಾಂಗಣ ವಿನ್ಯಾಸದಲ್ಲಿ (interior design) ವಾಸ್ತು ತತ್ತ್ವಗಳನ್ನು (Vastu Tips) ಅಳವಡಿಸಿಕೊಳ್ಳುವುದು ಬಹು ಮುಖ್ಯವಾಗಿರುತ್ತದೆ. ಇದು ನಾವು ವಾಸಿಸುವ ಪ್ರದೇಶದಲ್ಲಿ ಧನಾತ್ಮಕ ಶಕ್ತಿ ಸಂಚಯನಕ್ಕೆ ಮತ್ತು ಇದರಲ್ಲಿ ಸಮತೋಲನ ಕಾಪಾಡಿಕೊಳ್ಳಲು ವಾಸ್ತು ನೆರವಾಗುತ್ತದೆ.

ವಾಸ್ತು ಪುರಾತನ ಭಾರತೀಯ ವಿಜ್ಞಾನ. ಮಂಗಳಕರ ಶಕ್ತಿಯನ್ನು ಆಹ್ವಾನಿಸಲು ಮತ್ತು ಪ್ರಕೃತಿಯೊಂದಿಗೆ ಸಮನ್ವಯಗೊಳಿಸಲು ವಿವಿಧ ಅಂಶಗಳ ಜೋಡಣೆ ಮತ್ತು ನಿಯೋಜನೆಯ ಮೇಲೆ ಇದು ಕೇಂದ್ರೀಕರಿಸುತ್ತದೆ. ಈ ತತ್ತ್ವಗಳನ್ನು ಅನ್ವಯಿಸುವುದರಿಂದ ಮನೆಯನ್ನು ಆರಾಮ ಮತ್ತು ನೆಮ್ಮದಿಯ ತಾಣವಾಗಿ ಪರಿವರ್ತಿಸಬಹುದು.

ರೆಸೈಕಿ ಇಂಟೀರಿಯರ್ಸ್ ಮತ್ತು ಆರ್ಕಿಟೆಕ್ಚರ್ ಡಿಸೈನ್ ಸ್ಟುಡಿಯೋದ ಸಂಸ್ಥಾಪಕ ಮತ್ತು ವಿನ್ಯಾಸ ಮುಖ್ಯಸ್ಥ ಕುಂತಲ್ ವ್ಯಾಸ್ ಅಗರ್ವಾಲ್ ಪ್ರಕಾರ, ವಾಸ್ತು ತತ್ತ್ವಗಳೊಂದಿಗೆ ಮನೆ, ಕಚೇರಿಯ ಜಾಗವನ್ನು ವಿನ್ಯಾಸಗೊಳಿಸುವುದು ಸೌಂದರ್ಯಕ್ಕೆ ಸಂಬಂಧಿಸಿದ್ದಲ್ಲ, ಇದು ಮಾನವ ಚೈತನ್ಯವನ್ನು ಪೋಷಿಸುವ ಮತ್ತು ಉನ್ನತೀಕರಿಸುವ ವಾತಾವರಣವನ್ನು ಸೃಷ್ಟಿಸುತ್ತದೆ.

ಸಾಮರಸ್ಯ ಮತ್ತು ನೆಮ್ಮದಿಯನ್ನು ಹೆಚ್ಚಿಸಲು ಮಲಗುವ ಕೋಣೆಯ ವಿನ್ಯಾಸದಲ್ಲಿ ವಾಸ್ತು ತತ್ತ್ವಗಳನ್ನು ಸೇರಿಸಲು ಕೆಲವು ಪ್ರಾಯೋಗಿಕ ಸಲಹೆಗಳನ್ನು ಅವರು ನೀಡಿದ್ದಾರೆ. ಬೆಚ್ಚಗಿನ, ಭೂಮಿಯ ತತ್ತ್ವದ ಪರಿಣಾಮವನ್ನು ರಚಿಸಲು ಮರವನ್ನು ಕಪಾಟಿ, ಮಲಗುವ ಮಂಚದಲ್ಲಿ ಬಳಸುವುದು ಉತ್ತಮ. ಬಾಗಿಲುಗಳಿಗೆ ಘನವಾದ ಮರ ಬಳಸಬೇಕು. ಇದು ಶಕ್ತಿಯ ಸುಗಮ ಹರಿವನ್ನು ಖಚಿತಪಡಿಸಿಕೊಳ್ಳಲು ಪ್ರದಕ್ಷಿಣಾಕಾರವಾಗಿ ತೆರೆಯುವಂತಿರಬೇಕು.

Vastu Tips
Vastu Tips


ಬಣ್ಣ ಮುಖ್ಯ ಪಾತ್ರ ವಹಿಸುತ್ತದೆ:

ವಾಸ್ತುವಿನಲ್ಲಿ ಬಣ್ಣಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಹಳದಿ, ಕೇಸರಿ ಅಥವಾ ತಿಳಿ ಕೆಂಪು ಬಣ್ಣಗಳನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದು ರೋಮಾಂಚಕ ಮತ್ತು ಶಾಂತ ವಾತಾವರಣವನ್ನು ಸೃಷ್ಟಿಸುತ್ತದೆ. ಶುಚಿತ್ವ ಮತ್ತು ಸಕಾರಾತ್ಮಕತೆಯನ್ನು ಹೆಚ್ಚಿಸಲು, ಕೋಣೆಯ ಶಕ್ತಿಯನ್ನು ಹೆಚ್ಚಿಸಲು ಹಾಸಿಗೆ ಮತ್ತು ಪೀಠೋಪಕರಣಗಳಿಗೆ ತಿಳಿ ಬಣ್ಣವನ್ನು ಆರಿಸಿಕೊಳ್ಳಿ.

ಹಾಸಿಗೆಯ ನಿಯೋಜನೆ ಮುಖ್ಯ:

ವಾಸ್ತು ಪ್ರಕಾರ ಹಾಸಿಗೆಯ ನಿಯೋಜನೆಯು ಮುಖ್ಯವಾಗಿದೆ. ಭೂಮಿಯ ಆಯಸ್ಕಾಂತೀಯ ಕ್ಷೇತ್ರದೊಂದಿಗೆ ಜೋಡಿಸಲು ದಕ್ಷಿಣ ಅಥವಾ ಪೂರ್ವದ ಕಡೆಗೆ ಇರಿಸಿ. ಇದು ಶಕ್ತಿಯ ಸಮತೋಲಿತ ಹರಿವನ್ನು ಖಾತ್ರಿಪಡಿಸುತ್ತದೆ.

ವಿಪರೀತ ಅಲಂಕಾರ ಬೇಡ:

ಸಣ್ಣ ಮಲಗುವ ಕೋಣೆಗಳಲ್ಲಿ ಸ್ವಚ್ಛತೆ ಮತ್ತು ಸ್ಪಷ್ಟತೆ ಕಾಪಾಡಿಕೊಳ್ಳಲು ಪೀಠೋಪಕರಣ, ಅಲಂಕಾರಿಕ ಅಗತ್ಯ ವಸ್ತುಗಳು ಆದಷ್ಟು ಕನಿಷ್ಠವಾಗಿರಲಿ. ಮಲಗುವ ಕೊನೆಯಲ್ಲಿ ಕಡಿಮೆ ವಸ್ತುಗಳು ಶಕ್ತಿಯ ಸಂಚಾರವನ್ನು ಸುಗಮಗೊಳಿಸುತ್ತದೆ ಮತ್ತು ಮಾನಸಿಕ ಸ್ಪಷ್ಟತೆಯನ್ನು ಉತ್ತೇಜಿಸುತ್ತದೆ.

ಇದನ್ನೂ ಓದಿ: Shravan 2024: ನಾಳೆಯಿಂದ ಶ್ರಾವಣ ಮಾಸ ಆರಂಭ; ಶುಭ ಕಾರ್ಯಗಳನ್ನು ಮಾಡಲು ಈ ತಿಂಗಳು ಸೂಕ್ತ ಏಕೆ?


ಕೋಣೆಯನ್ನು ನಿಧಾನವಾಗಿ ಬೆಳಗಿಸಲು ಸೂಕ್ತ ವಿದ್ಯುತ್‌ ಬೆಳಕಿನ ವ್ಯವಸ್ಥೆ ಮಾಡಿ. ಇದು ಕೋಣೆಯಲ್ಲಿ ಹಿತವಾದ ಹೊಳಪನ್ನು ಸೃಷ್ಟಿಸುವಂತಿರಲಿ. ಈ ಎಚ್ಚರಿಕೆಯಿಂದ ಆಯ್ಕೆ ಮಾಡಿದ ಬೆಳಕು ಕೋಣೆಯ ಶಾಂತಿಯನ್ನು ಹೆಚ್ಚಿಸುತ್ತದೆ ಮತ್ತು ಹಿತಕರ ವಾತಾವರಣವನ್ನು ಕೆಡಿಸುವ ಯಾವುದೇ ನೆರಳು ಅಥವಾ ಡಿಮ್‌ ಎನಿಸುವ ಮೂಲೆಗಳನ್ನು ದೂರವಿಡುತ್ತದೆ.

ಅಲಂಕಾರಿಕ ವಸ್ತುಗಳನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಿ. ನೈಟ್‌ಸ್ಟ್ಯಾಂಡ್‌ನಲ್ಲಿ ಶಾಂತ ಎನಿಸುವ ಸಸ್ಯ ಮತ್ತು ಗೋಡೆಗಳ ಮೇಲೆ ಪ್ರಶಾಂತ ಕಲಾಕೃತಿಯನ್ನು ಇರಿಸಿ. ಈ ಅಂಶಗಳು ಕೋಣೆಯಲ್ಲಿ ಶಾಂತಿಯುತ ವಾತಾವರಣವನ್ನು ಸೃಷ್ಟಿಸುತ್ತದೆ. ಕೋಣೆಯ ವಾತಾವರಣವನ್ನು ಹದಗೆಡಿಸುವ ತೀಕ್ಷ್ಣವಾದ ಅಥವಾ ಆಕ್ರಮಣಕಾರಿ ವಿನ್ಯಾಸಗಳನ್ನು ಆಯ್ಕೆ ಮಾಡಬೇಡಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Shravan 2024: ನಾಳೆಯಿಂದ ಶ್ರಾವಣ ಮಾಸ ಆರಂಭ; ಶುಭ ಕಾರ್ಯಗಳನ್ನು ಮಾಡಲು ಈ ತಿಂಗಳು ಸೂಕ್ತ ಏಕೆ?

Shravan 2024: ಶ್ರಾವಣ ಮಾಸ ಧಾರ್ಮಿಕ ಕಾರ್ಯಗಳಿಗೆ ಬಹಳ ಉತ್ತಮವಾದ ಮಾಸವಾಗಿದೆ. ಈ ಮಾಸವನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಜಪ-ತಪ, ವ್ರತ-ನಿಯಮ, ಪೂಜೆ-ಪುರಾಣಶಾಸ್ತ್ರ, ಪ್ರವಚನ, ಭಜನೆ, ಕೀರ್ತನೆ, ಸತ್ಸಾಂಗ, ಪುಣ್ಯ ಕ್ಷೇತ್ರಗಳ ದರ್ಶನ, ಯಜ್ಞ-ಯಾಗ, ಹೋಮ-ಹವನ ಮುಂತಾದವುಗಳನ್ನು ಈ ಮಾಸದಲ್ಲಿಯೇ ಹೆಚ್ಚು ಮಾಡುತ್ತಾರೆ. ಅಲ್ಲದೇ ಯಾವುದೇ ಶುಭ ಕಾರ್ಯಗಳನ್ನು ಮಾಡಲು ಹಾಗೂ ಹೊಸ ಕೆಲಸಗಳನ್ನು ಆರಂಭಿಸಲು ಈ ಮಾಸ ಬಹಳ ಪ್ರಶಸ್ತವಾಗಿದೆ. ಈ ಕುರಿತ ವಿವರ ಇಲ್ಲಿದೆ.

VISTARANEWS.COM


on

Shravan 2024
Koo


ಬೆಂಗಳೂರು: ಹಿಂದೂ ಪಂಚಾಂಗದಲ್ಲಿ ಬರುವ 12 ಮಾಸಗಳಲ್ಲಿ ಶ್ರಾವಣ ಮಾಸ (Shravan 2024) ಐದನೇ ಮಾಸವಾಗಿದೆ. ಎಲ್ಲಾ ಮಾಸಗಳು ಹುಣ್ಣಿಮೆಯ ದಿನ ಪ್ರಾರಂಭವಾಗುತ್ತದೆ ಮತ್ತು ಆ ದಿನ ಬರುವ ನಕ್ಷತ್ರದ ಹೆಸರಿನಿಂದ ಆ ಮಾಸವನ್ನು ಕರೆಯಲಾಗುತ್ತದೆ. ಅದರಂತೆ ಈ ಮಾಸ ಪ್ರಾರಂಭವಾಗುವ ಹುಣ್ಣಿಮೆಯ ದಿನ ಶ್ರವಣ ನಕ್ಷತ್ರ ಬಂದ ಕಾರಣ ಈ ಮಾಸಕ್ಕೆ ಶ್ರಾವಣ ಮಾಸ ಎಂದು ಕರೆಯುತ್ತಾರೆ. ಈ ಮಾಸ ಹಿಂದೂಗಳಿಗೆ ಬಹಳ ಶ್ರೇಷ್ಠವಾದ ಹಾಗೂ ವಿಶೇಷವಾದ ಮಾಸವಾಗಿದೆ. ಯಾಕೆಂದರೆ ಈ ಮಾಸದಲ್ಲಿ ಹಬ್ಬಗಳು ಸಾಲು ಸಾಲಾಗಿ ಬರುತ್ತಿರುತ್ತದೆ. ಹಾಗಾಗಿ ಈ ಮಾಸದಲ್ಲಿ ಶಿವ, ಪಾರ್ವತಿ, ಲಕ್ಷ್ಮಿ, ವಿಷ್ಣು ಸೇರಿದಂತೆ ಅನೇಕ ದೇವಾನುದೇವತೆಗಳ ಪೂಜೆ ಮಾಡುತ್ತಾರೆ. ಹಾಗೇ ಮದುವೆ, ಮುಂಜಿಯಂತಹ ಶುಭ ಕಾರ್ಯಗಳನ್ನು ಈ ಮಾಸದಲ್ಲಿ ಮಾಡಲಾಗುತ್ತದೆ. ಹಿಂದೂ ಕ್ಯಾಲೆಂಡರ್‌ನಲ್ಲಿ 2024ರಲ್ಲಿ ಶ್ರಾವಣ ಮಾಸ ಆಗಸ್ಟ್ 5ರ ಸೋಮವಾರದಂದು ಪ್ರಾರಂಭವಾಗಿ ಸೆಪ್ಟೆಂಬರ್ 3, 2024 ಮಂಗಳವಾರದ ಅಮಾವಾಸ್ಯೆಯ ತಿಥಿಯಂದು ಕೊನೆಗೊಳ್ಳುತ್ತದೆ. ಹಾಗಾಗಿ ಈ ಮಾಸದ ವಿಶೇಷತೆ ಏನು ಮತ್ತು ಶುಭ ಕಾರ್ಯಗಳನ್ನು ಮಾಡಲು ಈ ಮಾಸ ಸೂಕ್ತ ಏಕೆ ಎಂಬುದನ್ನು ತಿಳಿಯೋಣ.

Shravanmasa 2024
Shravanmasa 2024

ಶ್ರಾವಣ ಮಾಸದ ವಿಶೇಷತೆ:

ಶ್ರಾವಣ ಮಾಸ ಧಾರ್ಮಿಕ ಕಾರ್ಯಗಳಿಗೆ ಬಹಳ ಉತ್ತಮವಾದ ಮಾಸವಾಗಿದೆ. ಈ ಮಾಸವನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಜಪ-ತಪ, ವ್ರತ-ನಿಯಮ, ಪೂಜೆ-ಪುರಾಣಶಾಸ್ತ್ರ, ಪ್ರವಚನ, ಭಜನೆ, ಕೀರ್ತನೆ, ಸತ್ಸಾಂಗ, ಪುಣ್ಯ ಕ್ಷೇತ್ರಗಳ ದರ್ಶನ, ಯಜ್ಞ-ಯಾಗ, ಹೋಮ-ಹವನ ಮುಂತಾದವುಗಳನ್ನು ಈ ಮಾಸದಲ್ಲಿಯೇ ಹೆಚ್ಚು ಮಾಡುತ್ತಾರೆ. ಅಲ್ಲದೇ ಯಾವುದೇ ಶುಭ ಕಾರ್ಯಗಳನ್ನು ಮಾಡಲು ಹಾಗೂ ಹೊಸ ಕೆಲಸಗಳನ್ನು ಆರಂಭಿಸಲು ಈ ಮಾಸ ಬಹಳ ಪ್ರಶಸ್ತವಾಗಿದೆ.

ಶ್ರಾವಣ ಮಾಸದಲ್ಲಿ ಹಬ್ಬ ಹರಿದಿನಗಳು ಒಂದರ ನಂತರ ಒಂದು ಸಾಲು ಸಾಲಾಗಿ ಬರುತ್ತದೆ. ಶ್ರಾವಣ ಮಾಸದ ಪ್ರತಿದಿನವೂ ಹಬ್ಬವೇ ಇರುತ್ತದೆ. ಹಾಗಾಗಿ ಶ್ರಾವಣ ಮಾಸದ ಎಲ್ಲಾ ದಿನಗಳು ಬಹಳ ಶುಭವೇ ಆಗಿರುತ್ತದೆ. ಆದಕಾರಣ ಈ ಶುಭ ದಿನಗಳಲ್ಲಿ ಶುಭ ಕಾರ್ಯ ಮಾಡಿದರೆ ಅದಕ್ಕೆ ಬಹಳ ಉತ್ತಮವಾದ ಫಲ ಶೀಘ್ರದಲ್ಲಿಯೇ ಸಿಗುತ್ತದೆ ಎಂಬ ನಂಬಿಕೆ ಇದೆ.

ಅಲ್ಲದೇ ಈ ಮಾಸದಲ್ಲಿ ಪ್ರಕೃತಿಯಲ್ಲಿನ ಗಿಡಮರಗಳು ಚಿಗುರೊಡೆದು ಹಚ್ಚಹಸಿರಾಗಿ, ಹೂಗಳನ್ನು ಬಿಟ್ಟು ಬಣ್ಣಗಳಿಂದ ಕಂಗೊಳಿಸುತ್ತಾ ಸಂತಸದಿಂದ ಇರುತ್ತದೆಯಂತೆ. ಹಾಗೇ ಪ್ರಾಣಿ ಪಕ್ಷಿಗಳು ಕೂಡ ಉಲ್ಲಾಸದಿಂದ ಇರುತ್ತದೆಯಂತೆ. ಇದನ್ನು ಕಂಡು ದೈವಾನುದೇವತೆಗಳು ಕೂಡ ಸಂಭ್ರಮ ಪಡುತ್ತಾರಂತೆ. ಹಾಗಾಗಿ ಈ ಸಮಯದಲ್ಲಿ ಯಾವುದೇ ಶುಭ ಕಾರ್ಯ ಮಾಡಿದರೂ ದೇವರು ಬಹಳ ಬೇಗನೇ ಪ್ರಸನ್ನರಾಗಿ ಅನುಗ್ರಹ ನೀಡುತ್ತಾರೆ ಎನ್ನಲಾಗುತ್ತದೆ.

Shravanmasa 2024
Shravanmasa 2024

ಶ್ರಾವಣ ಮಾಸದಲ್ಲಿ ಬರುವ ಹಬ್ಬಗಳು :

  • ಉಪಕರ್ಮ:
  • ಶ್ರಾವಣ ಮಾಸ ಹುಣ್ಣಿಮೆ ಜ್ಞಾನಕ್ಕೆ ಕಾರಣವಾಗಿದ್ದರಿಂದ ಈ ದಿನ ಜನೀವಾರ ಹಬ್ಬ ಅಥವಾ ಉಪಕರ್ಮ ಅಥವಾ ನೂಲು ಹುಣ್ಣಿಮೆಯನ್ನು ಆಚರಿಸುತ್ತಾರೆ.
  • ರಕ್ಷಾಬಂಧನ :
  • ಶ್ರಾವಣ ಹುಣ್ಣಿಮೆಯಂದು ಸಹೋದರ ಪ್ರೇಮಕ್ಕೆ ಹೆಚ್ಚು ಮಹತ್ವವಿರುವುದರಿಂದ ರಕ್ಷಾಬಂಧನವನ್ನು ಆಚರಿಸುವ ಮೂಲಕ ಸಹೋದರಿ ಸಹೋದರನಿಗೆ ರಾಖಿ ಕಟ್ಟುತ್ತಾರೆ.
  • ಹಯಗ್ರೀವ ಜಯಂತಿ :
  • ಮಕ್ಕಳಿಗೆ ವಿದ್ಯೆ ಬುದ್ಧಿ ಕರುಣಿಸಲಿ ಎಂದು ವಿದ್ಯೆಯನ್ನು ಅನುಗ್ರಹಿಸುವ ಹಯಗ್ರೀವನನ್ನು ಪೂಜಿಸಿ ಪ್ರಾರ್ಥಿಸುತ್ತಾರೆ.
  • ಸಂಕಷ್ಟ ಚತುರ್ಥಿ :
  • ಅಪಘಾತ, ಆರೋಗ್ಯ ಸಮಸ್ಯೆ, ಸಂಕಷ್ಟಗಳು ಜೀವನದಲ್ಲಿ ಬರಬಾರದೆಂದು ಸಂಕಷ್ಟಹರ ಚತುರ್ಥಿಯನ್ನು ಮಾಡುತ್ತಾರೆ.
  • ಕೃಷ್ಣಾಷ್ಟಮಿ :
  • ದುಷ್ಟ ಸಂಹಾರಕ್ಕಾಗಿ ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯ ದಿನ ಶ್ರೀಕೃಷ್ಣ ಜನ್ಮ ತಾಳಿದ ಕಾರಣ ಈ ಮಾಸದಲ್ಲಿ ಕೃಷ್ಣಾಷ್ಟಮಿಯನ್ನು ಆಚರಿಸುವ ಮೂಲಕ ಕೃಷ್ಣನನ್ನು ಪೂಜಿಸುತ್ತಾರೆ.
  • ಶ್ರಾವಣ ಸೋಮವಾರ:
  • ಶ್ರಾವಣ ಮಾಸದಲ್ಲಿ ಬರುವ ಪ್ರತಿ ಸೋಮವಾರದಂದು ಶಿವನ ಆರಾಧನೆ ಮಾಡಲಾಗುತ್ತದೆ. ಇದರಿಂದ ಶಿವನು ಬೇಗನೆ ಪ್ರಸನ್ನನಾಗಿ ನಿಮ್ಮ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ.
  • ಕಾಮನ ಏಕಾದಶಿ:
  • ನಿಮ್ಮ ಕೋರಿಕೆಗಳು ಈಡೇರಲು ಶ್ರಾವಣ ಮಾಸದಲ್ಲಿ ಕಾಮನ ಏಕಾದಶಿಯನ್ನು ಆಚರಿಸುವ ಮೂಲಕ ವಿಷ್ಣುವಿನ ಪೂಜೆ ಮಾಡಲಾಗುತ್ತದೆ.
  • ಪುತ್ರ ಏಕಾದಶಿ :
  • ಸಂತಾನ ಭಾಗ್ಯ ಬಯಸುವವರು ಶ್ರಾವಣ ಮಾಸದಲ್ಲಿ ಬರುವ ಪುತ್ರ ಏಕಾದಶಿಯನ್ನು ಆಚರಿಸುತ್ತಾರೆ.
  • ಶ್ರಾವಣ ಮಂಗಳವಾರ :
  • ಶ್ರಾವಣ ಮಾಸದಲ್ಲಿ ಬರುವ ಪ್ರತಿ ಮಂಗಳವಾರದಂದು ಮಂಗಳಗೌರಿ ವ್ರತವನ್ನು ಮಾಡಲಾಗುತ್ತದೆ. ಇದು ಮದುವೆಯಾದ ಹೆಣ್ಣುಮಕ್ಕಳು ಮಾಡಿದರೆ ಅವರ ವೈವಾಹಿಕ ಜೀವನ ಸುಖಕರವಾಗಿರುತ್ತದೆಯಂತೆ.
  • ವರಮಹಾಲಕ್ಷ್ಮಿ ವ್ರತ:
  • ಈ ದಿನ ಮಹಿಳೆಯರು ಲಕ್ಷ್ಮಿದೇವಿಯನ್ನು ಕಳಸದ ಮೇಲೆ ಪ್ರತಿಷ್ಠಾಪನೆ ಮಾಡಿ ಜರಿ ಸೀರೆ ಉಡಿಸಿ, ಧನ, ಚಿನ್ನದ ಆಭರಣಗಳಿಂದ ದೇವಿಯನ್ನು ಅಲಂಕರಿಸಿ ಪೂಜೆ ಮಾಡಿ ವರವನ್ನು ಬೇಡಿಕೊಳ್ಳುತ್ತಾರೆ.
  • ಶ್ರಾವಣ ಶುಕ್ರವಾರ :
  • ಶ್ರಾವಣ ಮಾಸದಲ್ಲಿ ಬರುವ ಪ್ರತಿ ಶುಕ್ರವಾರದಂದು ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿದೇವಿಯನ್ನು ಪೂಜಿಸುವ ಮೂಲಕ ಸಂಪತ್ ಗೌರಿ ವ್ರತವನ್ನು ಆಚರಿಸುತ್ತಾರೆ.
  • ನಾಗರಪಂಚಮಿ :
  • ಶ್ರಾವಣ ಮಾಸದ ಪ್ರಾರಂಭವಾದ 5ನೇ ದಿನದಂದು ಬರುವ ನಾಗರ ಪಂಚಮಿ ಹಬ್ಬದಂದು ಮಹಿಳೆಯರು ನಾಗ ದೇವರಿಗೆ ಪೂಜೆ ಸಲ್ಲಿಸುತ್ತಾರೆ.
  • ದೂರ್ವಾ ಗಣಪತಿ ವ್ರತ :
  • ಶ್ರಾವಣ ಮಾಸದಲ್ಲಿ ಬರುವ ಈ ವ್ರತದಂದು ಗಣಪತಿಗೆ ಪ್ರಿಯವಾದ ದೂರ್ವಾ ಅಥವಾ ಗರಿಕೆಯನ್ನು ಅರ್ಪಿಸಿ ಪೂಜಿಸಲಾಗುತ್ತದೆ.
  • ಶ್ರಾವಣ ಶನಿವಾರ:
  • ಶ್ರಾವಣ ಮಾಸದ ಪ್ರತಿ ಶನಿವಾರ ಶ್ರಾವಣ ಶನಿವಾರವೆಂದು ಕರೆಯುತ್ತಾರೆ. ಈ ದಿನ ಲಕ್ಷ್ಮಿ ಮತ್ತು ವೆಂಕಟೇಶ್ವರನನ್ನು ಆರಾಧಿಸುತ್ತಾರೆ. ಹಾಗೇ ಕೆಲವರು ಶ್ರಾವಣ ಶನಿವಾರದಂದು ಉಪವಾಸ ವ್ರತವನ್ನು ಆಚರಿಸುತ್ತಾರೆ. ಹಾಗೇ ಈ ದಿನ ಆಂಜನೇಯ ಸ್ವಾಮಿಯ ಪೂಜೆ ಹಾಗೂ ಶನಿ ಶಾಂತಿ ಪೂಜೆಗೆ ಬಹಳ ಉತ್ತಮ ಎನ್ನಲಾಗಿದೆ.

ಇದನ್ನೂ ಓದಿ:ವಯನಾಡ್ ಭೂಕುಸಿತ; ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದ ಕುಟುಂಬಕ್ಕೆ ಕಣ್ಣೀರು ಸುರಿಸುತ್ತ ಆಶ್ರಯ ನೀಡಿದ ಆನೆ!
ಒಟ್ಟಾರೆ ಈ ಎಲ್ಲಾ ಶುಭ ದಿನಗಳು ಮತ್ತು ಹಬ್ಬಗಳಿಂದ ಶ್ರಾವಣ ಮಾಸ ತುಂಬಾ ವಿಶೇಷವಾದ ಹಾಗೂ ಪವಿತ್ರವಾದ ಮಾಸವಾಗಿದೆ. ಹಾಗಾಗಿ ಇಂತಹ ಶುಭಕರವಾದ ಶ್ರಾವಣ ಮಾಸವನ್ನು ಎಲ್ಲರೂ ಸಂತೋಷದಿಂದ ಸ್ವಾಗತಿಸಿ. ಹಾಗೇ ಈ ಮಾಸದಲ್ಲಿ ಎಲ್ಲರೂ ಶ್ರದ್ಧೆ, ಭಕ್ತಿಯಿಂದ ದೇವರ ಆರಾಧನೆ ಮಾಡಿ ನಿಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಿ.

Continue Reading

ದೇಶ

Ayodhya: ಅಯೋಧ್ಯೆಗೆ ವಿಮಾನ ತಲುಪುತ್ತಲೇ ಭೂಮಿಗೆ ನಮಸ್ಕರಿಸಿದ ಗಗನಸಖಿ; ಭುಗಿಲೆದ್ದಿತು ವಿವಾದ!

Ayodhya: ಇಂಡಿಗೋ ವಿಮಾನದಲ್ಲಿ ಗಗನಸಖಿಯಾಗಿರುವ ಆಕಾಂಕ್ಷಾ ಪಾರ್ಮರ್‌ ಅವರು ವಿಮಾನ ಇಳಿಯುತ್ತಲೇ ಡಾಂಬರ್‌ ಇದ್ದರೂ ಭೂಮಿಗೆ ನಮಸ್ಕಾರ ಮಾಡಿದ್ದಾರೆ. ಇದಾದ ಬಳಿಕ ರಾಮಮಂದಿರದ ಕಡೆ ಮುಖ ಮಾಡಿ ನಮಸ್ಕಾರ ಮಾಡಿದ್ದಾರೆ. ಈ ವಿಡಿಯೊವನ್ನು ಅವರೇ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

VISTARANEWS.COM


on

Ayodhya
Koo

ಅಯೋಧ್ಯೆ: ರಾಮಮಂದಿರ ನಿರ್ಮಾಣವಾದ ಬಳಿಕ ಅಯೋಧ್ಯೆಗೆ ವಿಶೇಷ ವಿಮಾನದ ವ್ಯವಸ್ಥೆ ಮಾಡಲಾಗಿದ್ದು, ಸಾವಿರಾರು ಜನ ವಿಮಾನಗಳಲ್ಲಿ ಪ್ರಯಾಣಿಸಿ ಅಯೋಧ್ಯೆ ತಲುಪುತ್ತಿದ್ದಾರೆ. ಶ್ರೀರಾಮನ ದರ್ಶನ ಪಡೆಯಲು ಜನ ಭಕ್ತಿ-ಭಾವದಿಂದ ಅಯೋಧ್ಯೆಗೆ ಆಗಮಿಸುತ್ತಾರೆ. ಜನಸಾಮಾನ್ಯರು ಮಾತ್ರವಲ್ಲ, ವಿಮಾನದ ಸಿಬ್ಬಂದಿಗೂ ರಾಮಮಂದಿರ, ಅಯೋಧ್ಯೆಯ ಮೇಲೆ ವಿಶೇಷ ಗೌರವ ಇದೆ. ಇದಕ್ಕೆ ನಿದರ್ಶನ ಎಂಬಂತೆ, ಆಕಾಂಕ್ಷಾ ಪಾರ್ಮರ್‌ ಎಂಬ ಇಂಡಿಗೋ ವಿಮಾನದ ಗಗನಸಖಿಯು ವಿಮಾನ ಅಯೋಧ್ಯೆ ತಲುಪುತ್ತಲೇ, ಕೆಳಗೆ ಇಳಿದು ನೆಲಕ್ಕೆ ನಮಸ್ಕಾರ ಮಾಡಿದ್ದಾರೆ. ರಾಮನ ಕಾರಣಕ್ಕಾಗಿ ಅಯೋಧ್ಯೆ ಪುಣ್ಯಭೂಮಿ ಎಂದು ಅವರು ಭಕ್ತಿ ಪ್ರದರ್ಶಿಸಿದ್ದಾರೆ. ಈ ವಿಡಿಯೊ ಜಾಲತಾಣಗಳಲ್ಲಿ ವೈರಲ್‌ ಆಗುತ್ತಲೇ ಪರ-ವಿರೋಧ ಚರ್ಚೆಯಾಗುತ್ತಿದೆ.

ಇಂಡಿಗೋ ವಿಮಾನದಲ್ಲಿ ಗಗನಸಖಿಯಾಗಿರುವ ಆಕಾಂಕ್ಷಾ ಪಾರ್ಮರ್‌ ಅವರು ವಿಮಾನ ಇಳಿಯುತ್ತಲೇ ಡಾಂಬರ್‌ ಇದ್ದರೂ ಭೂಮಿಗೆ ನಮಸ್ಕಾರ ಮಾಡಿದ್ದಾರೆ. ಇದಾದ ಬಳಿಕ ರಾಮಮಂದಿರದ ಕಡೆ ಮುಖ ಮಾಡಿ ನಮಸ್ಕಾರ ಮಾಡಿದ್ದಾರೆ. ಈ ವಿಡಿಯೊವನ್ನು ಅವರೇ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. “ಅಯೋಧ್ಯೆಯ ಭೂಮಿಗೆ ನಮಸ್ಕಾರ ಮಾಡುವುದು ಹೆಮ್ಮೆ ಅನಿಸುತ್ತಿದೆ. ಹಿಂದು ಆಗಿರುವುದಕ್ಕೆ ನನಗೆ ಹೆಮ್ಮೆ ಇದೆ. ಜೈ ಶ್ರೀರಾಮ್”‌ ಎಂಬುದಾಗಿ ಅವರು ಬರೆದುಕೊಂಡಿದ್ದಾರೆ.

ವಿಡಿಯೊ ವೈರಲ್‌ ಆಗುತ್ತಲೇ ಆಕಾಂಕ್ಷಾ ಅವರ ವಿಡಿಯೊವನ್ನು ಉದ್ಯಮಿ ಮೋಹನ್‌ದಾಸ್‌ ಪೈ ಹಂಚಿಕೊಂಡಿದ್ದಾರೆ. ಅಲ್ಲದೆ, ಆಕಾಂಕ್ಷಾ ಹಾಗೂ ಇಂಡಿಗೋ ಬಗ್ಗೆ ಹೆಮ್ಮೆ ಎನಿಸುತ್ತದೆ. ಭಗವಾನ್‌ ಶ್ರೀರಾಮನು 500 ವರ್ಷಗಳ ಬಳಿಕ ಅಯೋಧ್ಯೆಗೆ ಬಂದಿದ್ದು, ಅಂತಹ ರಾಮನನ್ನು ಆರಾಧಿಸುವ ಉದ್ಯೋಗಿಯನ್ನು ಹೊಂದಿರುವುದಕ್ಕೆ ಸಂಸ್ಥೆಯು ಹೆಮ್ಮೆಪಡಬೇಕು” ಎಂಬುದಾಗಿ ಮೋಹನ್‌ದಾಸ್‌ ಪೈ ಅವರು ಒಕ್ಕಣೆ ಬರೆದುಕೊಂಡಿದ್ದಾರೆ.

ವಿವಾದ ಉಂಟಾಗಿದ್ದೇಕೆ?

ಇಂಡಿಗೋ ವಿಮಾನದ ಸಿಬ್ಬಂದಿಯು ಅಯೋಧ್ಯೆ ಭೂಮಿಗೆ ನಮಸ್ಕಾರ ಮಾಡಿರುವ ವಿಡಿಯೊ ಹಂಚಿಕೊಂಡು, ಮೆಚ್ಚುಗೆಯ ಮಾತುಗಳನ್ನು ಆಡಿದ ಮೋಹನ್‌ದಾಸ್‌ ಪೈ ಹಾಗೂ ಗಗನಸಖಿ ವಿರುದ್ಧ ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಇದೆಲ್ಲ ಗಿಮಿಕ್‌, ರೀಲ್ಸ್‌ಗಾಗಿ ಇಂತಹ ವಿಡಿಯೊ ಮಾಡುತ್ತಾರೆ, ಮೊದಲೇ ಪ್ಲಾನ್‌ ಮಾಡಿ, ರೆಕಾರ್ಡ್‌ ಮಾಡಿದ ವಿಡಿಯೊ ಇದು, ಇಂತಹ ನಾಟಕದ ವಿಡಿಯೊವನ್ನು ಮೋಹನ್‌ ದಾಸ್‌ ಪೈ ಬೆಂಬಲಿಸಬಾರದು, ಅಷ್ಟೊಂದು ಭಕ್ತಿ ಇದ್ದರೆ ದೇವಾಲಯಕ್ಕೆ ಹೋಗಲಿ, ಗಗನಸಖಿಯಾದವರು ಹೇಗೆ ವರ್ತಿಸಬೇಕು ಎಂಬುದು ಮೊದಲು ಗೊತ್ತಿರಬೇಕು” ಎಂಬುದು ಸೇರಿ ಹತ್ತಾರು ರೀತಿಯಲ್ಲಿ ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Ayodhya Ram Mandir : ರಾಮಮಂದಿರದ ಚಾವಣಿ ಸೋರುತ್ತಿಲ್ಲ; ನಿರ್ಮಾಣ ಸಮಿತಿ ಸ್ಪಷ್ಟನೆ

Continue Reading

ಮೈಸೂರು

Mysore News: ದೇವರ ಅನುಗ್ರಹ ದೊರೆತರೆ ಜೀವನದ ಎಲ್ಲ ತಾಪಗಳೂ ನಿವಾರಣೆ: ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ

Mysore News: ಸೋಸಲೆ ಗ್ರಾಮದಲ್ಲಿ ಶುಕ್ರವಾರ ವ್ಯಾಸರಾಜರ ಮಠಾಧೀಶ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ, 8ನೇ ಚಾತುರ್ಮಾಸ ವ್ರತ ಸ್ವೀಕರಿಸಿ, ಹಸಿ ದರ್ಬಾರ್ ನಡೆಸಿ ಅನುಗ್ರಹ ಸಂದೇಶ ನೀಡಿದರು. ಚಾತುರ್ಮಾಸ ಸಂಕಲ್ಪಕ್ಕೂ ಮುನ್ನ ಸ್ವಾಮೀಜಿ, ಸಂಸ್ಥಾನ ಪ್ರತಿಮಾ ಶ್ರೀ ಮೂಲ ಗೋಪಾಲಕೃಷ್ಣದೇವರ ಪೂಜೆ ನೆರವೇರಿಸಿ, ಪರಂಪರೆಯ ಹಿರಿಯ ಗುರುಗಳ ವೃಂದಾವನಗಳಿಗೆ ಹಸ್ತೋದಕ ಸಮರ್ಪಣೆ ಮಾಡಿದರು. ವಿದ್ವಾಂಸರಿಂದ ವೇದಘೋಷವಾದನಂತರ ವ್ರತ ಸಂಕಲ್ಪ ಮಾಡಿದಾಗ ಶ್ರೀ ರಾಮೇಶ್ವರಂನಿಂದ ಆಗಮಿಸಿದ್ದ ಪ್ರಧಾನ ಅರ್ಚಕರು ಶ್ರೀಗಳಿಗೆ ದೇವರ ಪ್ರಸಾದ, ಪುಷ್ಪಮಾಲೆ ಪ್ರದಾನ ಮಾಡಿದರು.

VISTARANEWS.COM


on

Sri Vidyashreesha Theertha Swamiji ashirvachan at Vyasaraja Matha of Sosale village
Koo

ಮೈಸೂರು: ದೇವರ ಅನುಗ್ರಹ ದೊರೆತರೆ ಜೀವನದ ಎಲ್ಲ ತಾಪಗಳೂ ನಿವಾರಣೆ ಆಗುತ್ತವೆ ಎಂದು ಸೋಸಲೆ ಶ್ರೀ ವ್ಯಾಸರಾಜರ ಮಠಾಧೀಶ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ (Mysore News) ತಿಳಿಸಿದರು.

ಸೋಸಲೆ ಗ್ರಾಮದ ವ್ಯಾಸರಾಜರ ಮಠದಲ್ಲಿ ಶುಕ್ರವಾರ ವಿಧ್ಯುಕ್ತವಾಗಿ 8ನೇ ಚಾತುರ್ಮಾಸ ವ್ರತ ದೀಕ್ಷೆ ಸ್ವೀಕರಿಸಿ ಅಮೃತೋಪದೇಶ ನೀಡಿದ ಶ್ರೀಗಳು, ಸಮೃದ್ಧವಾಗಿ ಮಳೆ ಸುರಿದರೆ ಇಳೆ ತಂಪಾಗುತ್ತದೆ. ಹಲವು ರೀತಿಯ ಸಸ್ಯಗಳು ಹೂವು, ಕಾಯಿ, ಹಣ್ಣು ಬಿಡುತ್ತವೆ. ಹಾಗೆಯೇ ಶ್ರೀಕೃಷ್ಣನ ಕೃಪೆ ನಮ್ಮ ಮೇಲೆ ಬಿದ್ದರೆ ಸಂಕಷ್ಟಗಳೆಲ್ಲವೂ ಕರಗಿ ಜೀವನ ಸಮೃದ್ಧಿಯಾಗುತ್ತದೆ. ಆದ ಕಾರಣ ನಾವು ಬೇಡುವುದಾದರೆ ದೇವರ ಅನುಗ್ರಹವನ್ನೇ ಬೇಡೋಣ ಎಂದು ಅವರು ಹೇಳಿದರು.

ಇದನ್ನೂ ಓದಿ: Pralhad Joshi: ಪ್ರಸಕ್ತ ಸಕ್ಕರೆ ಋತುವಿನಲ್ಲಿ 1 ಲಕ್ಷ ಕೋಟಿ ರೂ. ರೈತರ ಬಾಕಿ ಪಾವತಿ

ಸಜ್ಜನರು, ಸಾಧಕರು, ತಪಸ್ವಿಗಳು ಮತ್ತು ಜ್ಞಾನಿಗಳು ಯಾವಾಗಲೂ ಚಾತಕ ಪಕ್ಷಿಗಳಂತೆ ಭಗವಂತನ ಕರುಣಾ ದೃಷ್ಟಿಗಾಗಿ ಕಾಯುತ್ತಿರುತ್ತಾರೆ. ಶ್ರೀಕೃಷ್ಣನೆಂಬ ಮೇಘವು ಅನುಗ್ರಹವೆಂಬ ಮಳೆಯನ್ನು ಸುರಿಸಲಿ ಎಂದು ಪ್ರಾರ್ಥಿಸುತ್ತಾರೆ. ಕೃಪೆಯ ವೃಷ್ಟಿಯಾದರೆ ಲೌಕಿಕ ಜೀವನದ ಯಾವ ಸಮಸ್ಯೆಗಳೂ ನಮ್ಮನ್ನು ಕಾಡಲಾರವು. ಆದಕಾರಣ ದಕ್ಷಿಣಾಯಣ ಪುಣ್ಯಕಾಲದ ಚಾತುರ್ಮಾಸ ವ್ರತ ಸ್ವೀಕಾರದ ಈ ಸಂದರ್ಭದಲ್ಲಿ ನಾವೆಲ್ಲರೂ ಭಗವಂತನ ಮಹಾಕೃಪೆಗಾಗಿ ಶ್ರದ್ಧೆಯಿಂದ ಪ್ರಾರ್ಥನೆ ಸಮರ್ಪಿಸೋಣ ಎಂದು ಶ್ರೀ ವಿದ್ಯಾಶ್ರೀಶ ತೀರ್ಥರು ಹೇಳಿದರು.

ಲೋಕಹಿತಕ್ಕಾಗಿ ಪ್ರಾರ್ಥನೆ ಮಾಡೋಣ

ಚಾತುರ್ಮಾಸ ಪರ್ಯಂತ ನಾವೆಲ್ಲರೂ ವ್ರತ, ನಿಯಮ ಮತ್ತು ಆಹಾರ ಪದ್ಧತಿ ಅನುಸರಿಸೋಣ. ಶಾರೀರಿಕವಾಗಿ, ಮಾನಸಿಕವಾಗಿ ಸದೃಢರಾಗಿ ಜ್ಞಾನ ಕಾರ್ಯಗಳನ್ನು ಹೆಚ್ಚಾಗಿ ನಡೆಸೋಣ. ಮಹಾಗುರು ಶ್ರೀ ವ್ಯಾಸರಾಜರು ಹೇಳಿದ ಮಾರ್ಗದಲ್ಲಿ ಸಾಗಿ, ಮುಖ್ಯಪ್ರಾಣನನ್ನು ಅನಂತವಾಗಿ ಅರ್ಚಿಸೋಣ. ನಮ್ಮ ಪರಂಪರೆಯ 8 ಯತಿಗಳು ವೃಂದಾನವಸ್ಥರಾಗಿರುವ ಈ ಕ್ಷೇತ್ರದಲ್ಲಿ ನಮ್ಮ ಶ್ರದ್ಧಾಪೂರ್ವಕ ಆಚರಣೆಗಳನ್ನು ಮಾಡುತ್ತಾ, ಲೋಕಹಿತಕ್ಕಾಗಿ ಪ್ರಾರ್ಥನೆ ಮಾಡೋಣ ಎಂದು ಶ್ರೀಗಳು ನುಡಿದರು.

ಮಹಾ ಸಂಸ್ಥಾನದ ದಿವಾನರಾದ ಬ್ರಹ್ಮಣ್ಯ ಆಚಾರ್ಯ, ಚಾತುರ್ಮಾಸ ಸಂಕಲ್ಪ ವಿಧಿಗಳನ್ನು ಪಠಿಸಿದರು. ಸೋಸಲೆ ಮಠದ ವ್ಯವಸ್ಥಾಪಕ ಶ್ರೀಧರ, ಸಿಇಒ ಬದರೀನಾಥ, ಬಲಸೇವೆ ಕೃಷ್ಣಾಚಾರ್ಯ, ಚಾತುರ್ಮಾಸ ಸಮಿತಿ ಮುಖ್ಯಸ್ಥ ರಾಯರ ಹುಂಡಿ ಆನಂದ ಆಚಾರ್ಯ, ಮಠಾಧಿಕಾರಿಗಳಾದ ಪವಮಾನಾಚಾರ್ಯ ಕಂಬಾಲೂರು ಮತ್ತು ವೆಂಕಟಣ್ಣ ಇತರರು ಹಾಜರಿದ್ದರು.

ಸಂಸ್ಥಾನ ಪೂಜೆ- ಹಸಿ ದರ್ಬಾರ್

ಚಾತುರ್ಮಾಸ ಸಂಕಲ್ಪಕ್ಕೂ ಮುನ್ನ ಸ್ವಾಮೀಜಿ, ಸಂಸ್ಥಾನ ಪ್ರತಿಮಾ ಶ್ರೀ ಮೂಲ ಗೋಪಾಲಕೃಷ್ಣದೇವರ ಪೂಜೆ ನೆರವೇರಿಸಿ, ಪರಂಪರೆಯ ಹಿರಿಯ ಗುರುಗಳ ವೃಂದಾವನಗಳಿಗೆ ಹಸ್ತೋದಕ ಸಮರ್ಪಣೆ ಮಾಡಿದರು. ವಿದ್ವಾಂಸರಿಂದ ವೇದಘೋಷವಾದನಂತರ ವ್ರತ ಸಂಕಲ್ಪ ಮಾಡಿದಾಗ ಶ್ರೀ ರಾಮೇಶ್ವರಂನಿಂದ ಆಗಮಿಸಿದ್ದ ಪ್ರಧಾನ ಅರ್ಚಕರು ಶ್ರೀಗಳಿಗೆ ದೇವರ ಪ್ರಸಾದ, ಪುಷ್ಪಮಾಲೆ ಪ್ರದಾನ ಮಾಡಿದರು. ನಂತರ ವಿಶೇಷ ವೇದಿಕೆಯಲ್ಲಿ ಶ್ರೀಗಳು ಸಾಂಪ್ರದಾಯಿಕ ವಸ್ತ್ರ, ಪೇಟಾ ಧರಿಸಿ ಹಸಿ ದರ್ಬಾರ್ ನಡೆಸಿ, ನೂರಾರು ಭಕ್ತರಿಗೆ ಮಂತ್ರಾಕ್ಷತೆ ಅನುಗ್ರಹ ಮಾಡಿದ್ದು ವಿಶೇಷವಾಗಿತ್ತು.

Continue Reading

ಧಾರ್ಮಿಕ

Vastu Tips: ಗಲ್ಲಾ ಪೆಟ್ಟಿಗೆಯಲ್ಲಿ ಇಂಥ ವಸ್ತುಗಳನ್ನು ಇಟ್ಟರೆ ಲಾಸ್‌!

ವಾಸ್ತು ಶಾಸ್ತ್ರವು ಪ್ರಾಚೀನ ಭಾರತೀಯ ವಾಸ್ತುಶಿಲ್ಪ ವಿಜ್ಞಾನವಾಗಿದೆ. ಇದರಲ್ಲಿ ಮನೆ ಮತ್ತು ಜೀವನದ ವಿವಿಧ ಅಂಶಗಳಿಗೆ ನಿರ್ದಿಷ್ಟ ನಿಯಮಗಳನ್ನು ಹೇಳಲಾಗಿದೆ. ಇವುಗಳಲ್ಲಿ ಮನೆಯಲ್ಲಿ ನಗದು ಪೆಟ್ಟಿಗೆ ಎಲ್ಲಿರಬೇಕು ಎಂಬುದು ಮುಖ್ಯ ವಿಷಯವಾಗಿರುತ್ತದೆ. ಇದಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ನಿರ್ಲಕ್ಷಿಸುವುದರಿಂದ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಯನ್ನು ಅಸಮಾಧಾನಗೊಳಿಸಬಹುದು. ಇದು ಹಲವು ತೊಂದರೆಗಳಿಗೆ ಕಾರಣವಾಗಬಹುದು. ನಗದು ಪೆಟ್ಟಿಗೆಗೆ ಸಂಬಂಧಿಸಿ ವಾಸ್ತು ನಿಯಮದಲ್ಲಿ (Vastu Tips) ಏನು ಹೇಳಲಾಗಿದೆ ಗೊತ್ತೇ? ಈ ಲೇಖನ ಓದಿ.

VISTARANEWS.COM


on

By

Vastu Tips
Koo

ಮನೆಯಲ್ಲಿ ಸಂಪತ್ತು (Wealth) ಸದಾ ಸ್ಥಿರವಾಗಿ ಹೆಚ್ಚುತ್ತಲೇ ಇರಬೇಕು ಎಂಬುದು ಎಲ್ಲರ ಬಯಕೆ. ಆದರೆ ಎಲ್ಲ ಸಂದರ್ಭದಲ್ಲೂ ಇದು ಸಾಧ್ಯವಾಗುವುದೇ ಇಲ್ಲ. ಅದಕ್ಕಾಗಿ ನಮ್ಮ ಕಠಿಣ ಪರಿಶ್ರಮದ ಜೊತೆಗೆ ಸರಿಯಾದ ಯೋಜನೆಯೂ ಇರಬೇಕಾಗಿರುತ್ತದೆ. ಜೊತೆಗೆ ಇದರೊಂದಿಗೆ ಮನೆಯಲ್ಲಿ ಸಂಪತ್ತು (Attract Wealth) ನಿರಂತರ ಹೆಚ್ಚಾಗಲು ವಾಸ್ತು ನಿಯಮಗಳನ್ನು (Vastu Tips) ಅನುಸರಿಸುವುದು ಬಹಳ ಮುಖ್ಯ.

ವಾಸ್ತು ಶಾಸ್ತ್ರವು ಪ್ರಾಚೀನ ಭಾರತೀಯ ವಾಸ್ತುಶಿಲ್ಪ ವಿಜ್ಞಾನವಾಗಿದೆ. ಇದರಲ್ಲಿ ಮನೆ ಮತ್ತು ಜೀವನದ ವಿವಿಧ ಅಂಶಗಳಿಗೆ ನಿರ್ದಿಷ್ಟ ನಿಯಮಗಳನ್ನು ಹೇಳಲಾಗಿದೆ. ಇವುಗಳಲ್ಲಿ ಮನೆಯಲ್ಲಿ ತಿಜೋರಿ ಅಥವಾ ನಗದು ಪೆಟ್ಟಿಗೆ ಎಲ್ಲಿರಬೇಕು ಎಂಬುದು ಮುಖ್ಯ ವಿಷಯವಾಗಿರುತ್ತದೆ. ಇದಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ನಿರ್ಲಕ್ಷಿಸುವುದರಿಂದ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಯನ್ನು ಅಸಮಾಧಾನಗೊಳಿಸಬಹುದು ಎನ್ನಲಾಗಿದೆ.

ಮನೆಯಲ್ಲಿ ನಗದು ಪೆಟ್ಟಿಗೆಯು ಸಮೃದ್ಧಿಯನ್ನು ಆಕರ್ಷಿಸುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಕೆಲವು ವಾಸ್ತು ಸಲಹೆಗಳನ್ನು ಪಾಲಿಸುವುದು ಸೂಕ್ತ.

Vastu Tips
Vastu Tips


ಕನ್ನಡಿ ತಪ್ಪಿಸಿ

ವಾಸ್ತು ಶಾಸ್ತ್ರದ ಪ್ರಕಾರ ನಗದು ಪೆಟ್ಟಿಗೆಯೊಳಗೆ ಕನ್ನಡಿಯನ್ನು ಇಡುವುದು ಅಶುಭವೆಂದು ಪರಿಗಣಿಸಲಾಗಿದೆ. ಕನ್ನಡಿ ವಾಸ್ತು ದೋಷವನ್ನು ಆಹ್ವಾನಿಸಬಹುದು. ಹಠಾತ್ ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು. ನಗದು ಪೆಟ್ಟಿಗೆಯಲ್ಲಿ ಕನ್ನಡಿಯನ್ನು ಹೊಂದಿದ್ದರೆ ಹಣಕಾಸಿನ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ. ಇದನ್ನು ತಪ್ಪಿಸಲು ತಕ್ಷಣವೇ ಅದನ್ನು ತೆಗೆದುಹಾಕಿ.

ಕಪ್ಪು ಬಣ್ಣ ಬಳಸಬೇಡಿ

ಹಿಂದೂ ಸಂಪ್ರದಾಯದ ಪ್ರಕಾರ ಕಪ್ಪು ಬಣ್ಣವು ಸಾಮಾನ್ಯವಾಗಿ ನಕಾರಾತ್ಮಕತೆಯೊಂದಿಗೆ ಸಂಬಂಧಿಸಿದೆ. ಮಂಗಳಕರ ಚಟುವಟಿಕೆಗಳಲ್ಲಿ ದೂರವಿರುತ್ತದೆ. ಆದ್ದರಿಂದ ನಗದು ಪೆಟ್ಟಿಗೆಯಲ್ಲಿ ಯಾವುದೇ ವಸ್ತುಗಳನ್ನು ಕಟ್ಟಲು ಕಪ್ಪು ಬಟ್ಟೆಯನ್ನು ಬಳಸುವುದನ್ನು ಸರಿಯಲ್ಲ. ಬದಲಾಗಿ ಕೆಂಪು ಬಟ್ಟೆಯನ್ನು ಬಳಸಿ. ಇದು ಮಂಗಳಕರವೆಂದು ಪರಿಗಣಿಸಲಾಗುತ್ತದೆ ಮತ್ತು ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ.

ಹಳೆಯ ವಸ್ತುಗಳನ್ನು ಸಂಗ್ರಹಿಸಬೇಡಿ

ಸ್ಕ್ರ್ಯಾಪ್ ಪೇಪರ್‌ಗಳಂತಹ ಹಳೆಯ ಅಥವಾ ತ್ಯಾಜ್ಯ ವಸ್ತುಗಳು ನಗದು ಪೆಟ್ಟಿಗೆಯಲ್ಲಿ ಸಂಗ್ರಹಿಸುವುದು ಸರಿಯಲ್ಲ ಎನ್ನುತ್ತದೆ ವಾಸ್ತು ಶಾಸ್ತ್ರ. ಹಾಗೆ ಮಾಡುವುದರಿಂದ ಆರ್ಥಿಕ ತೊಂದರೆಗಳು ಮತ್ತು ಬಡತನವೂ ಉಂಟಾಗಬಹುದು. ನಗದು ಬಾಕ್ಸ್ ಸ್ವಚ್ಛವಾಗಿಟ್ಟು ಮೌಲ್ಯಯುತವಾದ ವಸ್ತುಗಳು ಮತ್ತು ದಾಖಲೆಗಳನ್ನು ಮಾತ್ರ ಅದರಲ್ಲಿ ಇರಿಸಬೇಕು.

ಸುಗಂಧ ದ್ರವ್ಯಗಳನ್ನು ಇಡಬೇಡಿ

ಸುಗಂಧ ದ್ರವ್ಯಗಳನ್ನು ನಗದು ಪೆಟ್ಟಿಗೆಯಲ್ಲಿ ಇಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಈ ಅಭ್ಯಾಸವು ವಾಸ್ತು ದೋಷವನ್ನು ಆಕರ್ಷಿಸುತ್ತದೆ. ಇದರಿಂದ ಮನೆಯ ಸದಸ್ಯರಿಗೆ ಆರ್ಥಿಕ ತೊಂದರೆ ಉಂಟು ಮಾಡಬಹುದು. ಸುಗಂಧ ದ್ರವ್ಯಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸುವುದು ಉತ್ತಮ.

Vastu Tips
Vastu Tips


ಯಾವ ದಿಕ್ಕು ಸೂಕ್ತ?

ಹಣದ ಪೆಟ್ಟಿಗೆಯನ್ನು ಉತ್ತರ ದಿಕ್ಕಿನಲ್ಲಿ ಇರಿಸಿ. ಯಾಕೆಂದರೆ ಇದು ವಾಸ್ತು ಶಾಸ್ತ್ರದಲ್ಲಿ ಸಂಪತ್ತು ಮತ್ತು ಸಮೃದ್ಧಿಗೆ ಸಂಬಂಧಿಸಿದೆ.

ಇದನ್ನೂ ಓದಿ: Vastu Tips: ಮನೆ ಖರೀದಿ ಮಾಡುವಾಗ ಈ ಸಂಗತಿಗಳನ್ನು ತಪ್ಪದೇ ಗಮನಿಸಿ

ಆಕಾರ ಮತ್ತು ವಸ್ತು

ಲೋಹ ಅಥವಾ ಮರದಿಂದ ಮಾಡಿದ ಆಯತಾಕಾರದ ಅಥವಾ ಚೌಕಾಕಾರದ ನಗದು ಪೆಟ್ಟಿಗೆಗೆ ಆದ್ಯತೆ ನೀಡಬೇಕು.

ಸ್ವಚ್ಛತೆಗೆ ಆದ್ಯತೆ ನೀಡಿ

ನಗದು ಪೆಟ್ಟಿಗೆಯನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ. ಧನಾತ್ಮಕ ಶಕ್ತಿ ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯವು ಧಾರ್ಮಿಕ ಆಚರಣೆಯಲ್ಲಿ ಇದಕ್ಕೆ ಪೂಜೆ ಸಲ್ಲಿಸಿ.

Continue Reading
Advertisement
Filmfare South 2024 mollywood tollywood 69th Filmfare Awards
South Cinema14 mins ago

Filmfare South 2024: ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್; ತೆಲುಗು, ತಮಿಳು ಹಾಗೂ ಮಲಯಾಳಂ ಪ್ರಶಸ್ತಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ

Amith Shah
ದೇಶ20 mins ago

Amit Shah: 2029ರ ಚುನಾವಣೆಯಲ್ಲೂ ಬಿಜೆಪಿಗೆ ಗೆಲುವು, ಕಾಂಗ್ರೆಸ್‌ ಪ್ರತಿಪಕ್ಷದಲ್ಲೇ; ಅಮಿತ್‌ ಶಾ ಭವಿಷ್ಯ

HD Deve Gowda
ದೇಶ22 mins ago

HD Deve Gowda: ದೆಹಲಿ ಮೆಟ್ರೋದಲ್ಲಿ ಸಂಚರಿಸಿದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ

ಕ್ರೀಡೆ26 mins ago

Paris Olympics: ಶೂಟೌಟ್​ನಲ್ಲಿ ಗೆದ್ದು ಸೆಮಿಗೆ ಲಗ್ಗೆಯಿಟ್ಟ ಭಾರತ; ಒಲಿಂಪಿಕ್ಸ್​ನಿಂದ ಗ್ರೇಟ್​ ಬ್ರಿಟನ್ ಕಿಕ್​ ಔಟ್​

ಕರ್ನಾಟಕ51 mins ago

Officer Dismissed: ಸುಳ್ಳು ದಾಖಲೆ ನೀಡಿ ನೇಮಕ; ಸಹಾಯಕ ತೋಟಗಾರಿಕೆ ಅಧಿಕಾರಿ ವಜಾ

Dhruva Sarja martin trailer Out
ಸ್ಯಾಂಡಲ್ ವುಡ್53 mins ago

Dhruva Sarja : ʻಮಾರ್ಟಿನ್’ ಟ್ರೈಲರ್ ಬಿಡುಗಡೆ: ಧ್ರುವ ಸರ್ಜಾ ಅಭಿಮಾನಿಗಳ ಅಬ್ಬರ ಬಲು ಜೋರು!

Drowned in water
ಬೆಳಗಾವಿ58 mins ago

Drowned in water : ಮಾರ್ಕಂಡೇಯ ನದಿಗೆ ಆಯತಪ್ಪಿ ಬಿದ್ದು ಕಣ್ಮರೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ

PSI Parashuram Case
ಕರ್ನಾಟಕ2 hours ago

PSI Parashuram Case: ಸರ್ಕಾರಿ ಯೋಜನೆ ಹಣ ಬಿಡುಗಡೆಗೂ ಕಮಿಷನ್‌ಗೆ ಬೇಡಿಕೆ; ಎ2 ಪಂಪನಗೌಡ ವಿರುದ್ಧ ಮತ್ತೊಂದು ಆರೋಪ

Wayanad Landslide
ದೇಶ2 hours ago

Wayanad Landslide: ವಯನಾಡಿಗಾಗಿ ಮಿಡಿಯಿತು ವಿದೇಶಿಗರ ಮನ; ಸಂತ್ರಸ್ತರ ನೆರವಿಗೆ ಧಾವಿಸಿದ ಇಂಗ್ಲೆಂಡ್‌ನ ವಿದ್ಯಾರ್ಥಿನಿಯರು

Vastu Tips
ಧಾರ್ಮಿಕ2 hours ago

Vastu Tips: ಮನೆ ಸಂತೋಷದ ತಾಣವಾಗಬೇಕೆಂದರೆ ಮಲಗುವ ಕೋಣೆ ಹೀಗಿರಲಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

assault case
ಬೆಳಗಾವಿ2 hours ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 day ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ5 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ5 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ6 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ6 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

ಟ್ರೆಂಡಿಂಗ್‌