Site icon Vistara News

Vastu Tips: ಮಕ್ಕಳ ಮದುವೆ ವಿಳಂಬವಾಗುತ್ತಿದೆಯೆ? ವಾಸ್ತು ದೋಷವೂ ಕಾರಣವಿರಬಹುದು!

Vastu Tips

ಪ್ರೀತಿ, ವಿಶ್ವಾಸ, ನಂಬಿಕೆ, ಹೊಂದಾಣಿಕೆ ದಾಂಪತ್ಯ ಜೀವನದಲ್ಲಿ (marriage life) ಬಹುಮುಖ್ಯವಾಗಿರುತ್ತದೆ. ಇದರಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಾದರೂ ಜೀವನದಲ್ಲಿ ಬಿರುಗಾಳಿ ಏಳಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಇಲ್ಲಿ ನಮ್ಮ ನಿರ್ಧಾರಗಳು ಮಾತ್ರ ಪ್ರಮುಖ ಪಾತ್ರವಹಿಸುವುದಿಲ್ಲ. ಮನೆಯ ವಾಸ್ತು (Vastu Tips) ಅಂಶಗಳೂ ಕಾರಣವಾಗುತ್ತದೆ.

ವಾಸ್ತು ಶಾಸ್ತ್ರವು ಶಕ್ತಿ, ಪ್ರಾಚೀನ ಭಾರತೀಯ ವಿಜ್ಞಾನ, ನಮ್ಮ ಜೀವನ, ಪರಿಸರ ಮತ್ತು ಜೀವನದ ನಡುವೆ ಇರುವ ಸಂಕೀರ್ಣ ಸಂಬಂಧಗಳ ಆಳವಾದ ಗ್ರಹಿಕೆಗೆ ಕೀಲಿಯನ್ನು ಹೊಂದಿದೆ. ದಾಂಪತ್ಯವನ್ನು ಬಲಪಡಿಸುವ ಅಥವಾ ದುರ್ಬಲಗೊಳಿಸುವ ಸೂಕ್ಷ್ಮ ಮತ್ತು ಪ್ರಬಲವಾದ ಶಕ್ತಿಗಳ ಕುರಿತು ವಾಸ್ತು ಒಳನೋಟವುಳ್ಳ ಮಾಹಿತಿಯನ್ನು ಒದಗಿಸುತ್ತದೆ.

ಕುಟುಂಬದಲ್ಲಿ ಮದುವೆ ಮುರಿದು ಬೀಳುತ್ತದೆ ಅಥವಾ ಮದುವೆ ವಿಳಂಬವಾಗುತ್ತಿದ್ದರೆ ಇದಕ್ಕೆ ಕಾರಣ ಕಂಡುಹಿಡಿಯಲು ವಾಸ್ತು ಸಹಾಯ ಮಾಡುತ್ತದೆ. ವ್ಯಕ್ತಿಯ ಜನ್ಮ ಕುಂಡಲಿಯು ಮನೆಯೊಳಗಿನ ಶಕ್ತಿಗಳ ಜೋಡಣೆಯ ಸಂಪೂರ್ಣ ವಿಶ್ಲೇಷಣೆಯ ಜೊತೆಗೆ ವೈವಾಹಿಕ ಆನಂದದ ಮೇಲೆ ಪರಿಣಾಮ ಬೀರುವ ಕಾರಣಗಳನ್ನು ವಾಸ್ತು ಬಹಿರಂಗಪಡಿಸುತ್ತದೆ.

ವಾಸ್ತು ತಜ್ಞ ರಾಹುಲ್ ಕೌಶ್ಲ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಕುರಿತು ವಿಡಿಯೋವೊಂದನ್ನು ಅಪ್‌ಲೋಡ್ ಮಾಡಿದ್ದು, ಮದುವೆ ಸಮಸ್ಯೆಗಳಿಗೆ ಕುರಿತು ಕೆಲವು ಪ್ರಮುಖ ವಿವರಗಳನ್ನು ಬಹಿರಂಗಪಡಿಸಿದ್ದಾರೆ.

ಕುಟುಂಬ ಸದಸ್ಯರಲ್ಲಿ ಯಾರಾದರೂ ಏಳು ಮತ್ತು ಆರು ಸಂಖ್ಯೆಗಳನ್ನು ಹೊಂದಿಲ್ಲ ಅಥವಾ ಅವು ಒಟ್ಟಿಗೆ ಇಲ್ಲ ಅಥವಾ ಆರು ಇಲ್ಲ ಎಂದಾದರೆ ಅದು ಮದುವೆ ಸಮಸ್ಯೆಗಳನ್ನು ಸೃಷ್ಟಿಸುತ್ತದೆ ಅಥವಾ ಮದುವೆಯಲ್ಲಿ ಅಡಚಣೆ ಉಂಟಾಗುವುದು ಮತ್ತು ತಡವಾಗಿ ಮದುವೆಗೆ ಕಾರಣವಾಗಬಹುದು ಎಂಬುದನ್ನು ಸೂಚಿಸುತ್ತದೆ. ಸಂಖ್ಯೆ 7ಕ್ಕೆ ಕಂಕಣ ಬಲವಿದೆ ಮತ್ತು ಸಂಖ್ಯೆ 6ಕ್ಕೆ ಡೈಮಂಡ್ ಕಟ್ ಎಂದು ಕರೆಯಲಾಗುತ್ತದೆ.


ಮನೆಯಲ್ಲಿ ಮದುವೆ ಕಾರ್ಯಕ್ರಮವನ್ನು ಆಯೋಜಿಸಲು ಬಯಸುತ್ತೇವೆ. ಆದರೆ ಅದು ಸಂಭವಿಸುವುದಿಲ್ಲ ಏಕೆ ಎಂಬ ಬಗ್ಗೆ ಅವರು ವಿಡಿಯೋದಲ್ಲಿ ಬಹಿರಂಗಪಡಿಸಿದ್ದಾರೆ. ಸಾಮಾನ್ಯವಾಗಿ ಏನಾಗುತ್ತದೆ ಎಂದರೆ ನಿಮ್ಮ ಕುಂಡಲಿಯಲ್ಲಿ ಏಳು ಮತ್ತು ಆರು ಕಾಣೆಯಾದಾಗ ಅಥವಾ ಏಳು ಮತ್ತು ಆರು ಸಂಖ್ಯೆಗಳು ದುರ್ಬಲವಾದಾಗ ಅದರ ಫಲಿತಾಂಶ ಮನೆಯಲ್ಲಿ ನಡೆಯುವ ಶುಭ ಕಾರ್ಯಗಳ ಮೇಲೆ ಬೀಳುತ್ತದೆ.

ಇದನ್ನೂ ಓದಿ: Vastu Tips: ಈ ದಿಕ್ಕಿಗೆ ತಲೆ ಹಾಕಿ ಮಲಗಿದರೆ ಅಪಾಯ ಗ್ಯಾರಂಟಿ!

ರಾಹುಲ್ ಕೌಶ್ಲ್ ಅವರು ತಮ್ಮ ವಿಡಿಯೋದಲ್ಲಿ ಹಲವು ಪ್ರಮುಖ ವಿವರಗಳನ್ನು ಬಹಿರಂಗಪಡಿಸಿದ್ದಾರೆ. ಈ ಸಮಸ್ಯೆಯನ್ನು ಪರಿಹರಿಸಲು ಸಲಹೆಯನ್ನು ನೀಡಿದ್ದಾರೆ.

Exit mobile version