ವಾಸ್ತು ಮನೆಗೆ (vastu for home) ಎಷ್ಟು ಮುಖ್ಯವೋ ಅಷ್ಟೇ ನಮ್ಮ ಆಚಾರ, ವಿಚಾರದಲ್ಲಿ ಕೂಡ ಇರುವುದು ಮುಖ್ಯ. ಹಿರಿಯರು ಹೇಳುತ್ತಾರೆ ಎಂಬ ಮಾತ್ರಕ್ಕೆ ಅನುಸರಿಸುವುದಕ್ಕಿಂತ ಅದರ ಬಗ್ಗೆ ತಿಳಿದುಕೊಂಡು ಪಾಲಿಸುವುದರಲ್ಲಿ ಹೆಚ್ಚು ಅರ್ಥವಿದೆ. ನಮ್ಮ ಆಚಾರ ವಿಚಾರದಲ್ಲಿ ಕೆಲವೊಂದು ಶಿಸ್ತು ಬದ್ದ ನಿಯಮಗಳನ್ನು (Vastu Tips) ಅನುಸರಿಸುವುದರಿಂದ ಮನೆಯಲ್ಲಿ ಸಕಾರಾತ್ಮಕತೆ (positivity) ತುಂಬಿಕೊಳ್ಳುತ್ತದೆ. ಕೆಲವೊಂದು ವಾಸ್ತು ದೋಷಗಳು (Vastu Dosha) ಪರಿಹಾರವಾಗುತ್ತದೆ.
ಹಿಂದೂ ಧರ್ಮದಲ್ಲಿ ವಾಸ್ತು ಶಾಸ್ತ್ರವು ಬಹಳ ಮುಖ್ಯವಾಗಿ ಆಚರಣೆಯಲ್ಲಿದೆ. ಯಾಕೆಂದರೆ ಇದು ಭಾರತೀಯರ ಪ್ರಾಚೀನ ವಿಜ್ಞಾನವು ಹೌದು. ಇದನ್ನು ಜೀವನದಲ್ಲಿ ಪಾಲಿಸುವುದರಿಂದ ನಮ್ಮ ಸುತ್ತಮುತ್ತಲಿನ ನಕಾರಾತ್ಮಕತೆಯನ್ನು ದೂರ ಮಾಡಬಹುದು ಮತ್ತು ಸಕಾರಾತ್ಮಕತೆಯನ್ನು ಹೆಚ್ಚಿಸಿಕೊಳ್ಳಬಹುದು.
ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುವ ವಾಸ್ತು ನಿಯಮಗಳಲ್ಲಿ ಮುಖ್ಯವಾಗಿ ಸತಿಪತಿಯ ಸಂಬಂಧ ಸುಧಾರಿಸಲು ಕೆಲವು ಸಲಹೆಗಳನ್ನು ನೀಡಲಾಗಿದೆ. ಕೆಲವು ವಾಸ್ತು ದೋಷಗಳು ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ದೂರವನ್ನು ಉಂಟು ಮಾಡುತ್ತದೆ ಎನ್ನಲಾಗುತ್ತದೆ.
ಮಲಗುವ ಕೋಣೆಯ ವ್ಯವಸ್ಥೆ ಮತ್ತು ಮಲಗುವ ದಿಕ್ಕು ಕೂಡ ವೈವಾಹಿಕ ಸಂಬಂಧದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಅದು ಹೇಗೆ ಎನ್ನುವ ಕುರಿತು ಇಲ್ಲಿದೆ ಮಾಹಿತಿ.
ಮಲಗುವ ದಿಕ್ಕು
ಮಲಗುವ ದಿಕ್ಕು ಸತಿ ಪತಿಯ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ. ಮನೆಯ ಮುಖ್ಯಸ್ಥನು ತನ್ನ ತಲೆಯನ್ನು ದಕ್ಷಿಣಕ್ಕೆ ಮುಖ ಮಾಡಿ ಮಲಗಬೇಕು. ಆದರೆ ಪಾದಗಳು ಉತ್ತರದ ಕಡೆಗೆ ಇರಬೇಕು. ಈ ವ್ಯವಸ್ಥೆಯು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ.
ಪ್ರಯೋಜನ
ದಕ್ಷಿಣ ದಿಕ್ಕಿಗೆ ತಲೆ ಇಟ್ಟು ಮಲಗುವುದು ಹಲವಾರು ಪ್ರಯೋಜನಗಳನ್ನು ನೀಡುತ್ತದೆ ಎಂದು ನಂಬಲಾಗಿದೆ. ಇದು ಸಂಬಂಧಗಳಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ. ಮನೆಯಲ್ಲಿ ಸಂಪತ್ತು ಮತ್ತು ಸಕಾರಾತ್ಮಕತೆಯ ನಿರಂತರ ಹರಿವನ್ನು ಖಾತ್ರಿಗೊಳಿಸುತ್ತದೆ.
ಇದನ್ನೂ ಓದಿ: Mahabharat Story: ಕೌರವರೊಂದಿಗೆ ಸಂಧಾನಕ್ಕೆ ಹೋದ ಶ್ರೀ ಕೃಷ್ಣ ಪಾಂಡವರಿಗಾಗಿ ಕೇಳಿದ 5 ಗ್ರಾಮಗಳು ಈಗ ಎಲ್ಲಿವೆ ಗೊತ್ತೆ?
ಆಧ್ಯಾತ್ಮಿಕ ಮತ್ತು ಲೌಕಿಕ ಆಸನ ವ್ಯವಸ್ಥೆ
ಕುಳಿತುಕೊಳ್ಳುವ ಮತ್ತು ಮಲಗುವ ಸ್ಥಾನಗಳಿಗೆ ನಿರ್ದಿಷ್ಟ ಮಾರ್ಗಸೂಚಿಗಳಿವೆ. ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಿಗಾಗಿ ಹೆಂಡತಿ ತನ್ನ ಪತಿಯ ಬಲಭಾಗದಲ್ಲಿ ಕುಳಿತುಕೊಳ್ಳಬೇಕು. ಆಹಾರ ಸೇವನೆ, ಮಲಗುವುದು ಸೇರಿದಂತೆ ದೈನಂದಿನ ಚಟುವಟಿಕೆಗಳಿಗೆ ಪತ್ನಿಯು ಎಡಭಾಗದಲ್ಲಿ ಕುಳಿತುಕೊಳ್ಳಬೇಕು.
ಪ್ರಯೋಜನ ಏನು?
ಇದರಿಂದ ಸಂಬಂಧದಲ್ಲಿ ಹೆಚ್ಚು ವಿಶ್ವಾಸ, ಸತಿಪತಿಯ ನಡುವೆ ಹೊಂದಾಣಿಕೆ ಮನೋಭಾವ, ಸಕಾರಾತ್ಮಕತೆ ವೃದ್ಧಿಯಾಗುವುದು.