Site icon Vistara News

Vastu Tips: ಸಂಸ್ಥೆ ಸಕ್ಸೆಸ್‌ ಆಗಲು ಕಚೇರಿ ಸ್ಥಳ ಹೀಗಿರಬೇಕು!

Vastu Tips

ಕೆಲಸದ ಸ್ಥಳದಲ್ಲಿ (office place) ಕೆಲವೊಮ್ಮೆ ಸಾಕಷ್ಟು ವಿಘ್ನಗಳು ಎದುರಾಗುತ್ತವೆ. ಇದಕ್ಕೆ ಕಾರಣ ಹುಡುಕುತ್ತಾ ಹೊರಟರೆ ವಾಸ್ತು ದೋಷವೂ (Vastu Tips) ಒಂದಾಗಿರಬಹುದು ಎನ್ನುತ್ತಾರೆ ವಾಸ್ತು ತಜ್ಞರು (Vastu experts). ಹೊಸ ಕಚೇರಿ ಸ್ಥಾಪನೆ, ಕಾರ್ಯಕ್ಷೇತ್ರದಲ್ಲಿ ಪ್ರಗತಿ, ಸಮೃದ್ಧಿ ಹೆಚ್ಚಾಗಲು ವಾಸ್ತು ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು ಎನ್ನುತ್ತಾರೆ ಖ್ಯಾತ ವಾಸ್ತು ತಜ್ಞರಾದ ಆಚಾರ್ಯ ಪಂಕಿತ್ ಗೋಯಲ್.

ಈ ಕುರಿತು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾ ಗ್ರಾಮ್‌ನಲ್ಲಿ ( social media Instagram) ಮಾಹಿತಿ ಹಂಚಿಕೊಂಡಿರುವ ಅವರು, ಕೆಲಸದ ಸ್ಥಳದಲ್ಲಿ ಯಶಸ್ಸು ಸಾಧಿಸಬೇಕಾದರೆ ಏನು ಮಾಡಬೇಕು ಎಂಬುದನ್ನು ಹೇಳಿದ್ದಾರೆ. ಈ ಕೆಲವು ಪ್ರಾಯೋಗಿಕ ಸಲಹೆಗಳನ್ನು ಅಳವಡಿಸಿಕೊಳ್ಳುವುದರಿಂದ ಅದು ಕಾರ್ಯಕ್ಷೇತ್ರದಲ್ಲಿ ನಿಮ್ಮನ್ನು ಹೆಚ್ಚು ಕ್ರಿಯಾಶೀಲರನ್ನಾಗಿ, ಕೆಲಸದಲ್ಲಿ ಸಮೃದ್ಧಿ ತರಲು ಮ್ಯಾಜಿಕ್‌ನಂತೆ ಕೆಲಸ ಮಾಡುತ್ತಾರೆ ಎನ್ನುತ್ತಾರೆ ಅವರು.

ಕಚೇರಿಗಾಗಿ ಪ್ರಮುಖ ಸಲಹೆಗಳು


ಅಕೌಂಟ್‌ ವಿಭಾಗವನ್ನು ಎಲ್ಲಿ ಇಡಬೇಕು?

ಕಚೇರಿಯ ಪಶ್ಚಿಮ, ನೈಋತ್ಯ ಅಥವಾ ಆಗ್ನೇಯ ಭಾಗಗಳಲ್ಲಿ ಅಕೌಂಟ್‌ ವಿಭಾಗವನ್ನು ಇರಿಸಬಹುದು. ಇಲ್ಲೇ ಖಾತೆಗಳನ್ನು ನಿರ್ವಹಿಸುವ ತಂಡವನ್ನು ಇಡಬಹುದು. ಇದರಿಂದ ಹಣಕಾಸಿನ ಸ್ಥಿರತೆ ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸಲು ಇದು ಸಹಾಯ ಮಾಡುತ್ತದೆ.

ಸರಿಯಾದ ಬೆಳಕು ಇರಲಿ

ಕಚೇರಿಯ ಉತ್ತರದಲ್ಲಿ ಸ್ಪಾಟ್‌ಲೈಟ್ ಅನ್ನು ಸ್ಥಾಪಿಸಬೇಕು ಎನ್ನುತ್ತಾರೆ ತಜ್ಞರು. ಇದರಿಂದ ಹೊಸ ಅವಕಾಶಗಳು ಆಕರ್ಷಿಸಲ್ಪಡುತ್ತದೆ. ಇದು ಕಚೇರಿಯಲ್ಲಿ ನಿಮ್ಮ ಬೆಳವಣಿಗೆಯ ನಿರೀಕ್ಷೆಗಳನ್ನು ಹೆಚ್ಚಿಸುತ್ತದೆ. ಸರಿಯಾದ ಬೆಳಕು ಕೆಲಸದ ಸ್ಥಳವನ್ನು ಬೆಳಗಿಸುತ್ತದೆ ಮಾತ್ರವಲ್ಲದೆ ಸ್ಪಷ್ಟತೆ ಮತ್ತು ಜ್ಞಾನೋದಯವನ್ನು ಸಂಕೇತಿಸುತ್ತದೆ.


ಗ್ರಾಹಕರನ್ನು ಆಕರ್ಷಿಸುವುದು ಹೇಗೆ?

ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಲು ಮತ್ತು ಅವರಿಗೆ ಸ್ಥಳವನ್ನು ಹೆಚ್ಚು ಆಕರ್ಷಕವಾಗಿಸಲು ಯುನಿಕಾರ್ನ್ ಹಾರ್ಸ್ ಪ್ರತಿಮೆಗಳನ್ನು ಕಚೇರಿಯಲ್ಲಿ ಇಡಬೇಕು ಎನ್ನುತ್ತಾರೆ ವಾಸ್ತು ತಜ್ಞರು. ಗ್ರಾಹಕರನ್ನು ಆಕರ್ಷಿಸಲು ಮತ್ತು ಸಾಮಾನ್ಯವಾಗಿ ವ್ಯಾಪಾರ ಸಂಬಂಧಗಳನ್ನು ಸುಧಾರಿಸಲು ಇದು ವಿಶಿಷ್ಟವಾದ ವಾಸ್ತು ಸಲಹೆಗಳಲ್ಲಿ ಒಂದಾಗಿದೆ.


ಮಾಲೀಕರ ಸ್ಥಾನ

ಕಚೇರಿಯ ಯಶಸ್ಸಿನ ಪ್ರಮುಖ ವಿಷಯವೆಂದರೆ ಮಾಲೀಕರ ಟೇಬಲ್ ಇಡುವ ಸ್ಥಳ ಅಥವಾ ಅವರು ಕುಳಿತುಕೊಳ್ಳುವ ಜಾಗ. ಇದನ್ನು ಪೂರ್ವ ಅಥವಾ ಉತ್ತರಕ್ಕೆ ಮುಖಮಾಡಿ ಪಶ್ಚಿಮದಲ್ಲಿ ಇಡಬೇಕೆಂದು ವಾಸ್ತು ತಜ್ಞರಾದ ಗೋಯಲ್ ಸೂಚಿಸುತ್ತಾರೆ. ಇಲ್ಲದಿದ್ದರೆ ಅದನ್ನು ಉತ್ತರಕ್ಕೆ ಎದುರಾಗಿ ದಕ್ಷಿಣದಲ್ಲಿ ಇರಿಸಬಹುದು. ಇದು ವ್ಯಕ್ತಿಯಲ್ಲಿ ನಾಯಕತ್ವದ ಗುಣಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಮಾಲೀಕರ ವ್ಯಕ್ತಿತ್ವದಲ್ಲಿ ಉತ್ತಮ ನಿರ್ಧಾರವನ್ನು ತರುತ್ತದೆ.

ಇದನ್ನೂ ಓದಿ: Vastu Tips: ಮಕ್ಕಳ ಮದುವೆ ವಿಳಂಬವಾಗುತ್ತಿದೆಯೆ? ವಾಸ್ತು ದೋಷವೂ ಕಾರಣವಿರಬಹುದು!

ಲಾಕರ್ ಎಲ್ಲಿ ಇಡಬೇಕು?

ಲಾಕರ್ ಇಡಲು ಕೆಲವು ಮಂಗಳಕರ ಸ್ಥಾನಗಳನ್ನು ಸೂಚಿಸಿರುವ ಗೋಯಲ್ ಅಲ್ಮೇರಾವನ್ನು ಪಶ್ಚಿಮ, ಉತ್ತರ ಅಥವಾ ದಕ್ಷಿಣ ಭಾಗದಲ್ಲಿ ಇರಿಸಬಹುದು ಎಂದಿದ್ದಾರೆ. ಅವರ ಪ್ರಕಾರ, ಈ ಪ್ರತಿಯೊಂದು ಸ್ಥಾನಗಳು ವ್ಯವಹಾರಕ್ಕೆ ಭದ್ರತೆ ಮತ್ತು ಬೆಳವಣಿಗೆಯನ್ನು ಒದಗಿಸುತ್ತದೆ.

Exit mobile version