Vastu Tips: ಸಂಸ್ಥೆ ಸಕ್ಸೆಸ್‌ ಆಗಲು ಕಚೇರಿ ಸ್ಥಳ ಹೀಗಿರಬೇಕು! - Vistara News

ಧಾರ್ಮಿಕ

Vastu Tips: ಸಂಸ್ಥೆ ಸಕ್ಸೆಸ್‌ ಆಗಲು ಕಚೇರಿ ಸ್ಥಳ ಹೀಗಿರಬೇಕು!

ಉತ್ತಮ ಕಚೇರಿಗೆ ಕೆಲವು ಸಲಹೆಗಳನ್ನು ವಾಸ್ತು (Vastu Tips) ತಜ್ಞರಾದ ಆಚಾರ್ಯ ಪಂಕಿತ್ ಗೋಯಲ್ ಅವರು ನೀಡಿದ್ದು, ಇದರಿಂದ ಸಮೃದ್ಧಿ ಮತ್ತು ದಕ್ಷತೆ ಹೆಚ್ಚಾಗುತ್ತದೆ ಎನ್ನುತ್ತಾರೆ. ಯಾವುದೇ ವ್ಯಾಪಾರ ಘಟಕದ ಏಳಿಗೆಯ ಚಿಂತನೆಯು ಖಾತೆಗಳ ತಂಡ, ಸರಿಯಾದ ಬೆಳಕು, ಮಾಲೀಕರ ಮೇಜು ಮತ್ತು ಲಾಕರ್‌ನ ಸ್ಥಳವನ್ನು ಆಧರಿಸಿರುತ್ತದೆ. ಇವುಗಳಿಗೆ ಸರಿಯಾದ ದಿಕ್ಕು ಮತ್ತು ಸ್ಥಳ ಯಾವುದು, ಹೇಗಿರಬೇಕು ಎನ್ನುವ ಮಾಹಿತಿ ಇಲ್ಲಿದೆ.

VISTARANEWS.COM


on

Vastu Tips
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೆಲಸದ ಸ್ಥಳದಲ್ಲಿ (office place) ಕೆಲವೊಮ್ಮೆ ಸಾಕಷ್ಟು ವಿಘ್ನಗಳು ಎದುರಾಗುತ್ತವೆ. ಇದಕ್ಕೆ ಕಾರಣ ಹುಡುಕುತ್ತಾ ಹೊರಟರೆ ವಾಸ್ತು ದೋಷವೂ (Vastu Tips) ಒಂದಾಗಿರಬಹುದು ಎನ್ನುತ್ತಾರೆ ವಾಸ್ತು ತಜ್ಞರು (Vastu experts). ಹೊಸ ಕಚೇರಿ ಸ್ಥಾಪನೆ, ಕಾರ್ಯಕ್ಷೇತ್ರದಲ್ಲಿ ಪ್ರಗತಿ, ಸಮೃದ್ಧಿ ಹೆಚ್ಚಾಗಲು ವಾಸ್ತು ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು ಎನ್ನುತ್ತಾರೆ ಖ್ಯಾತ ವಾಸ್ತು ತಜ್ಞರಾದ ಆಚಾರ್ಯ ಪಂಕಿತ್ ಗೋಯಲ್.

ಈ ಕುರಿತು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾ ಗ್ರಾಮ್‌ನಲ್ಲಿ ( social media Instagram) ಮಾಹಿತಿ ಹಂಚಿಕೊಂಡಿರುವ ಅವರು, ಕೆಲಸದ ಸ್ಥಳದಲ್ಲಿ ಯಶಸ್ಸು ಸಾಧಿಸಬೇಕಾದರೆ ಏನು ಮಾಡಬೇಕು ಎಂಬುದನ್ನು ಹೇಳಿದ್ದಾರೆ. ಈ ಕೆಲವು ಪ್ರಾಯೋಗಿಕ ಸಲಹೆಗಳನ್ನು ಅಳವಡಿಸಿಕೊಳ್ಳುವುದರಿಂದ ಅದು ಕಾರ್ಯಕ್ಷೇತ್ರದಲ್ಲಿ ನಿಮ್ಮನ್ನು ಹೆಚ್ಚು ಕ್ರಿಯಾಶೀಲರನ್ನಾಗಿ, ಕೆಲಸದಲ್ಲಿ ಸಮೃದ್ಧಿ ತರಲು ಮ್ಯಾಜಿಕ್‌ನಂತೆ ಕೆಲಸ ಮಾಡುತ್ತಾರೆ ಎನ್ನುತ್ತಾರೆ ಅವರು.

ಕಚೇರಿಗಾಗಿ ಪ್ರಮುಖ ಸಲಹೆಗಳು

Vastu Tips
Vastu Tips


ಅಕೌಂಟ್‌ ವಿಭಾಗವನ್ನು ಎಲ್ಲಿ ಇಡಬೇಕು?

ಕಚೇರಿಯ ಪಶ್ಚಿಮ, ನೈಋತ್ಯ ಅಥವಾ ಆಗ್ನೇಯ ಭಾಗಗಳಲ್ಲಿ ಅಕೌಂಟ್‌ ವಿಭಾಗವನ್ನು ಇರಿಸಬಹುದು. ಇಲ್ಲೇ ಖಾತೆಗಳನ್ನು ನಿರ್ವಹಿಸುವ ತಂಡವನ್ನು ಇಡಬಹುದು. ಇದರಿಂದ ಹಣಕಾಸಿನ ಸ್ಥಿರತೆ ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸಲು ಇದು ಸಹಾಯ ಮಾಡುತ್ತದೆ.

ಸರಿಯಾದ ಬೆಳಕು ಇರಲಿ

ಕಚೇರಿಯ ಉತ್ತರದಲ್ಲಿ ಸ್ಪಾಟ್‌ಲೈಟ್ ಅನ್ನು ಸ್ಥಾಪಿಸಬೇಕು ಎನ್ನುತ್ತಾರೆ ತಜ್ಞರು. ಇದರಿಂದ ಹೊಸ ಅವಕಾಶಗಳು ಆಕರ್ಷಿಸಲ್ಪಡುತ್ತದೆ. ಇದು ಕಚೇರಿಯಲ್ಲಿ ನಿಮ್ಮ ಬೆಳವಣಿಗೆಯ ನಿರೀಕ್ಷೆಗಳನ್ನು ಹೆಚ್ಚಿಸುತ್ತದೆ. ಸರಿಯಾದ ಬೆಳಕು ಕೆಲಸದ ಸ್ಥಳವನ್ನು ಬೆಳಗಿಸುತ್ತದೆ ಮಾತ್ರವಲ್ಲದೆ ಸ್ಪಷ್ಟತೆ ಮತ್ತು ಜ್ಞಾನೋದಯವನ್ನು ಸಂಕೇತಿಸುತ್ತದೆ.


ಗ್ರಾಹಕರನ್ನು ಆಕರ್ಷಿಸುವುದು ಹೇಗೆ?

ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಲು ಮತ್ತು ಅವರಿಗೆ ಸ್ಥಳವನ್ನು ಹೆಚ್ಚು ಆಕರ್ಷಕವಾಗಿಸಲು ಯುನಿಕಾರ್ನ್ ಹಾರ್ಸ್ ಪ್ರತಿಮೆಗಳನ್ನು ಕಚೇರಿಯಲ್ಲಿ ಇಡಬೇಕು ಎನ್ನುತ್ತಾರೆ ವಾಸ್ತು ತಜ್ಞರು. ಗ್ರಾಹಕರನ್ನು ಆಕರ್ಷಿಸಲು ಮತ್ತು ಸಾಮಾನ್ಯವಾಗಿ ವ್ಯಾಪಾರ ಸಂಬಂಧಗಳನ್ನು ಸುಧಾರಿಸಲು ಇದು ವಿಶಿಷ್ಟವಾದ ವಾಸ್ತು ಸಲಹೆಗಳಲ್ಲಿ ಒಂದಾಗಿದೆ.

Vastu Tips
Vastu Tips


ಮಾಲೀಕರ ಸ್ಥಾನ

ಕಚೇರಿಯ ಯಶಸ್ಸಿನ ಪ್ರಮುಖ ವಿಷಯವೆಂದರೆ ಮಾಲೀಕರ ಟೇಬಲ್ ಇಡುವ ಸ್ಥಳ ಅಥವಾ ಅವರು ಕುಳಿತುಕೊಳ್ಳುವ ಜಾಗ. ಇದನ್ನು ಪೂರ್ವ ಅಥವಾ ಉತ್ತರಕ್ಕೆ ಮುಖಮಾಡಿ ಪಶ್ಚಿಮದಲ್ಲಿ ಇಡಬೇಕೆಂದು ವಾಸ್ತು ತಜ್ಞರಾದ ಗೋಯಲ್ ಸೂಚಿಸುತ್ತಾರೆ. ಇಲ್ಲದಿದ್ದರೆ ಅದನ್ನು ಉತ್ತರಕ್ಕೆ ಎದುರಾಗಿ ದಕ್ಷಿಣದಲ್ಲಿ ಇರಿಸಬಹುದು. ಇದು ವ್ಯಕ್ತಿಯಲ್ಲಿ ನಾಯಕತ್ವದ ಗುಣಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಮಾಲೀಕರ ವ್ಯಕ್ತಿತ್ವದಲ್ಲಿ ಉತ್ತಮ ನಿರ್ಧಾರವನ್ನು ತರುತ್ತದೆ.

ಇದನ್ನೂ ಓದಿ: Vastu Tips: ಮಕ್ಕಳ ಮದುವೆ ವಿಳಂಬವಾಗುತ್ತಿದೆಯೆ? ವಾಸ್ತು ದೋಷವೂ ಕಾರಣವಿರಬಹುದು!

ಲಾಕರ್ ಎಲ್ಲಿ ಇಡಬೇಕು?

ಲಾಕರ್ ಇಡಲು ಕೆಲವು ಮಂಗಳಕರ ಸ್ಥಾನಗಳನ್ನು ಸೂಚಿಸಿರುವ ಗೋಯಲ್ ಅಲ್ಮೇರಾವನ್ನು ಪಶ್ಚಿಮ, ಉತ್ತರ ಅಥವಾ ದಕ್ಷಿಣ ಭಾಗದಲ್ಲಿ ಇರಿಸಬಹುದು ಎಂದಿದ್ದಾರೆ. ಅವರ ಪ್ರಕಾರ, ಈ ಪ್ರತಿಯೊಂದು ಸ್ಥಾನಗಳು ವ್ಯವಹಾರಕ್ಕೆ ಭದ್ರತೆ ಮತ್ತು ಬೆಳವಣಿಗೆಯನ್ನು ಒದಗಿಸುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಧಾರ್ಮಿಕ

Vastu Tips: ಮಕ್ಕಳ ಮದುವೆ ವಿಳಂಬವಾಗುತ್ತಿದೆಯೆ? ವಾಸ್ತು ದೋಷವೂ ಕಾರಣವಿರಬಹುದು!

ಕುಟುಂಬದಲ್ಲಿ ಮದುವೆ ಮುರಿದು ಬೀಳುತ್ತದೆ ಅಥವಾ ಮದುವೆ ವಿಳಂಬವಾಗುತ್ತಿದ್ದರೆ ಇದಕ್ಕೆ ಕಾರಣ ಕಂಡುಹಿಡಿಯಲು ವಾಸ್ತು ಸಹಾಯ ಮಾಡುತ್ತದೆ. ವ್ಯಕ್ತಿಯ ಜನ್ಮ ಕುಂಡಲಿಯು ಮನೆಯೊಳಗಿನ ಶಕ್ತಿಗಳ ಜೋಡಣೆಯ ಸಂಪೂರ್ಣ ವಿಶ್ಲೇಷಣೆಯ ಜೊತೆಗೆ ವೈವಾಹಿಕ ಆನಂದದ ಮೇಲೆ ಪರಿಣಾಮ ಬೀರುವ ಕಾರಣಗಳನ್ನು ವಾಸ್ತು (Vastu Tips) ಬಹಿರಂಗಪಡಿಸುತ್ತದೆ. ಈ ಕುರಿತ ವಿಡಿಯೊ ಇಲ್ಲಿದೆ.

VISTARANEWS.COM


on

By

Vastu Tips
Koo

ಪ್ರೀತಿ, ವಿಶ್ವಾಸ, ನಂಬಿಕೆ, ಹೊಂದಾಣಿಕೆ ದಾಂಪತ್ಯ ಜೀವನದಲ್ಲಿ (marriage life) ಬಹುಮುಖ್ಯವಾಗಿರುತ್ತದೆ. ಇದರಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಾದರೂ ಜೀವನದಲ್ಲಿ ಬಿರುಗಾಳಿ ಏಳಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಇಲ್ಲಿ ನಮ್ಮ ನಿರ್ಧಾರಗಳು ಮಾತ್ರ ಪ್ರಮುಖ ಪಾತ್ರವಹಿಸುವುದಿಲ್ಲ. ಮನೆಯ ವಾಸ್ತು (Vastu Tips) ಅಂಶಗಳೂ ಕಾರಣವಾಗುತ್ತದೆ.

ವಾಸ್ತು ಶಾಸ್ತ್ರವು ಶಕ್ತಿ, ಪ್ರಾಚೀನ ಭಾರತೀಯ ವಿಜ್ಞಾನ, ನಮ್ಮ ಜೀವನ, ಪರಿಸರ ಮತ್ತು ಜೀವನದ ನಡುವೆ ಇರುವ ಸಂಕೀರ್ಣ ಸಂಬಂಧಗಳ ಆಳವಾದ ಗ್ರಹಿಕೆಗೆ ಕೀಲಿಯನ್ನು ಹೊಂದಿದೆ. ದಾಂಪತ್ಯವನ್ನು ಬಲಪಡಿಸುವ ಅಥವಾ ದುರ್ಬಲಗೊಳಿಸುವ ಸೂಕ್ಷ್ಮ ಮತ್ತು ಪ್ರಬಲವಾದ ಶಕ್ತಿಗಳ ಕುರಿತು ವಾಸ್ತು ಒಳನೋಟವುಳ್ಳ ಮಾಹಿತಿಯನ್ನು ಒದಗಿಸುತ್ತದೆ.

ಕುಟುಂಬದಲ್ಲಿ ಮದುವೆ ಮುರಿದು ಬೀಳುತ್ತದೆ ಅಥವಾ ಮದುವೆ ವಿಳಂಬವಾಗುತ್ತಿದ್ದರೆ ಇದಕ್ಕೆ ಕಾರಣ ಕಂಡುಹಿಡಿಯಲು ವಾಸ್ತು ಸಹಾಯ ಮಾಡುತ್ತದೆ. ವ್ಯಕ್ತಿಯ ಜನ್ಮ ಕುಂಡಲಿಯು ಮನೆಯೊಳಗಿನ ಶಕ್ತಿಗಳ ಜೋಡಣೆಯ ಸಂಪೂರ್ಣ ವಿಶ್ಲೇಷಣೆಯ ಜೊತೆಗೆ ವೈವಾಹಿಕ ಆನಂದದ ಮೇಲೆ ಪರಿಣಾಮ ಬೀರುವ ಕಾರಣಗಳನ್ನು ವಾಸ್ತು ಬಹಿರಂಗಪಡಿಸುತ್ತದೆ.

ವಾಸ್ತು ತಜ್ಞ ರಾಹುಲ್ ಕೌಶ್ಲ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಕುರಿತು ವಿಡಿಯೋವೊಂದನ್ನು ಅಪ್‌ಲೋಡ್ ಮಾಡಿದ್ದು, ಮದುವೆ ಸಮಸ್ಯೆಗಳಿಗೆ ಕುರಿತು ಕೆಲವು ಪ್ರಮುಖ ವಿವರಗಳನ್ನು ಬಹಿರಂಗಪಡಿಸಿದ್ದಾರೆ.

ಕುಟುಂಬ ಸದಸ್ಯರಲ್ಲಿ ಯಾರಾದರೂ ಏಳು ಮತ್ತು ಆರು ಸಂಖ್ಯೆಗಳನ್ನು ಹೊಂದಿಲ್ಲ ಅಥವಾ ಅವು ಒಟ್ಟಿಗೆ ಇಲ್ಲ ಅಥವಾ ಆರು ಇಲ್ಲ ಎಂದಾದರೆ ಅದು ಮದುವೆ ಸಮಸ್ಯೆಗಳನ್ನು ಸೃಷ್ಟಿಸುತ್ತದೆ ಅಥವಾ ಮದುವೆಯಲ್ಲಿ ಅಡಚಣೆ ಉಂಟಾಗುವುದು ಮತ್ತು ತಡವಾಗಿ ಮದುವೆಗೆ ಕಾರಣವಾಗಬಹುದು ಎಂಬುದನ್ನು ಸೂಚಿಸುತ್ತದೆ. ಸಂಖ್ಯೆ 7ಕ್ಕೆ ಕಂಕಣ ಬಲವಿದೆ ಮತ್ತು ಸಂಖ್ಯೆ 6ಕ್ಕೆ ಡೈಮಂಡ್ ಕಟ್ ಎಂದು ಕರೆಯಲಾಗುತ್ತದೆ.


ಮನೆಯಲ್ಲಿ ಮದುವೆ ಕಾರ್ಯಕ್ರಮವನ್ನು ಆಯೋಜಿಸಲು ಬಯಸುತ್ತೇವೆ. ಆದರೆ ಅದು ಸಂಭವಿಸುವುದಿಲ್ಲ ಏಕೆ ಎಂಬ ಬಗ್ಗೆ ಅವರು ವಿಡಿಯೋದಲ್ಲಿ ಬಹಿರಂಗಪಡಿಸಿದ್ದಾರೆ. ಸಾಮಾನ್ಯವಾಗಿ ಏನಾಗುತ್ತದೆ ಎಂದರೆ ನಿಮ್ಮ ಕುಂಡಲಿಯಲ್ಲಿ ಏಳು ಮತ್ತು ಆರು ಕಾಣೆಯಾದಾಗ ಅಥವಾ ಏಳು ಮತ್ತು ಆರು ಸಂಖ್ಯೆಗಳು ದುರ್ಬಲವಾದಾಗ ಅದರ ಫಲಿತಾಂಶ ಮನೆಯಲ್ಲಿ ನಡೆಯುವ ಶುಭ ಕಾರ್ಯಗಳ ಮೇಲೆ ಬೀಳುತ್ತದೆ.

ಇದನ್ನೂ ಓದಿ: Vastu Tips: ಈ ದಿಕ್ಕಿಗೆ ತಲೆ ಹಾಕಿ ಮಲಗಿದರೆ ಅಪಾಯ ಗ್ಯಾರಂಟಿ!

ರಾಹುಲ್ ಕೌಶ್ಲ್ ಅವರು ತಮ್ಮ ವಿಡಿಯೋದಲ್ಲಿ ಹಲವು ಪ್ರಮುಖ ವಿವರಗಳನ್ನು ಬಹಿರಂಗಪಡಿಸಿದ್ದಾರೆ. ಈ ಸಮಸ್ಯೆಯನ್ನು ಪರಿಹರಿಸಲು ಸಲಹೆಯನ್ನು ನೀಡಿದ್ದಾರೆ.

Continue Reading

ಧಾರ್ಮಿಕ

Vastu Tips: ನಿಮ್ಮ ಮಕ್ಕಳು ತುಂಬಾ ಹಠ ಮಾಡುತ್ತಾರಾ? ಇಲ್ಲಿದೆ ಸರಳ ಪರಿಹಾರ!

ಮಕ್ಕಳ ಕೆಲವೊಂದು ವಿಚಾರಗಳಲ್ಲಿ ನಾವು ಏನನ್ನೂ ಮಾಡಲು ಸಾಧ್ಯವಾಗುತ್ತಿಲ್ಲ, ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಭಾವನೆ ನಿಮ್ಮನ್ನು ಕಾಡಲು ಪ್ರಾರಂಭಿಸಿದರೆ ವಾಸ್ತು ಶಾಸ್ತ್ರ (Vastu Tips) ಹೇಳಿರುವ ಮೂರು ಸರಳ ಪರಿಹಾರಗಳನ್ನು ಇಲ್ಲಿ ತಿಳಿಸಲಾಗಿದೆ. ನೀವು ಟ್ರೈ ಮಾಡಿ ನೋಡಬಹುದು.

VISTARANEWS.COM


on

By

Vastu Tips
Koo

ಮನೆಯಲ್ಲಿ ಮಕ್ಕಳು ಹಠ (Stubborn Kid) ಮಾಡುವುದು, ಮೊಂಡುತನ ಪ್ರದರ್ಶಿಸುವುದು ಸಾಮಾನ್ಯ ಎಂದು ನಾವೆಂದುಕೊಳ್ಳುತ್ತೇವೆ. ಆದರೆ ಇದಕ್ಕೆ ಮನೆಯ ವಾಸ್ತು (Vastu Tips) ದೋಷವೂ ಕಾರಣವಾಗಿರುತ್ತದೆ. ಇದನ್ನು ತಿಳಿದುಕೊಂಡು ಸರಿಪಡಿಸಿಕೊಂಡರೆ ಮಕ್ಕಳ ಹಠವನ್ನು ನಿಯಂತ್ರಿಸಬಹುದು. ಅವರನ್ನು ಸಜ್ಜನ, ವಿನಯಶೀಲ ಮಗುವನ್ನಾಗಿ ಮಾಡಬಹುದು ಎನ್ನುತ್ತದೆ ವಾಸ್ತುಶಾಸ್ತ್ರ.

ಉತ್ತಮ ಸಲಹೆಗಳು ಮತ್ತು ಪರಿಹಾರಗಳನ್ನು ಹುಡುಕಲು ವಾಸ್ತು ಶಾಸ್ತ್ರ ಯಾವಾಗಲೂ ಜನರಿಗೆ ಸಹಾಯ ಮಾಡುತ್ತದೆ. ಇದರಲ್ಲಿ ಮಗುವಿಗೆ ಸಂಬಂಧಿಸಿ ಹಲವಾರು ಸಮಸ್ಯೆಗಳಿಗೆ ಪರಿಹಾರಗಳೂ ಇವೆ.

ಮಕ್ಕಳ ಬಗ್ಗೆ ಸಾಕಷ್ಟು ವಿಷಯಗಳು ಕೆಲವೊಮ್ಮೆ ನಮ್ಮ ಗಮನಕ್ಕೆ ಬರುವುದಿಲ್ಲ. ಬಂದರೂ ಅದು ಸಾಮಾನ್ಯ ಎಂದುಕೊಳ್ಳುತ್ತೇವೆ. ಮಕ್ಕಳ ಹಠ, ಗೊಂದಲ, ಖಿನ್ನತೆ ಆತಂಕಪಡುವ ವಿಷಯವಾಗಿದೆ.

ಮಕ್ಕಳ ಕೆಲವೊಂದು ವಿಚಾರಗಳಲ್ಲಿ ನಾವು ಏನನ್ನೂ ಮಾಡಲು ಸಾಧ್ಯವಾಗುತ್ತಿಲ್ಲ, ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಭಾವನೆ ನಿಮ್ಮನ್ನು ಕಾಡಲು ಪ್ರಾರಂಭಿಸಿದರೆ ವಾಸ್ತು ಶಾಸ್ತ್ರ ಹೇಳಿರುವ ಮೂರು ಪರಿಹಾರಗಳನ್ನು ಇಲ್ಲಿ ತಿಳಿಸಲಾಗಿದೆ. ನೀವು ಟ್ರೈ ಮಾಡಿ ನೋಡಬಹುದು.

ಹೆಚ್ಚು ಹಠ ಮಾಡುವ ಮಕ್ಕಳನ್ನು ನಿಯಂತ್ರಣದಲ್ಲಿ ಇಡಲು ವಾಸ್ತು ತಜ್ಞ ರಾಹುಲ್ ಅವರು ವಾಸ್ತು ನಿಯಮದಲ್ಲಿರುವ ಕೆಲವು ಸಲಹೆಗಳನ್ನು ಬಹಿರಂಗಪಡಿಸಿದ್ದಾರೆ.


1. ಬೆಳಗ್ಗೆ ಎದ್ದಾಕ್ಷಣ ಬೆಡ್ ಶೀಟ್ ಅನ್ನು ಮಡಚಿ ಸರಿಯಾಗಿ ಜೋಡಿಸಿ ಇಡಿ. ಚಪ್ಪಲಿಗಳು ಎಲ್ಲೆಲ್ಲಿ, ಅಂಕುಡೊಂಕಾಗಿದ್ದರೆ ಅದನ್ನು ಸರಿಪಡಿಸಿ.

2. ರುದ್ರಾಕ್ಷಿ, ಹರಳಿನ ಕಂಕಣವನ್ನು ಧರಿಸಿ. ಮೂರು ಬಾರಿ ಗಾಯತ್ರಿ ಮಂತ್ರವನ್ನು ಪಠಿಸಿ.

ಇದನ್ನೂ ಓದಿ: Vastu Tips: ಮನೆಯಲ್ಲಿ ಸಂಪತ್ತು ಸದಾ ತುಂಬಿರಬೇಕೆ? ಈ ನಿಯಮ ಪಾಲಿಸಿ

3. ಹಾಸಿಗೆಯ ಮೇಲೆ ಕುಳಿತು ಗಾಯತ್ರಿ ಮಂತ್ರವನ್ನು ಕನಿಷ್ಠ 11 ಬಾರಿ ಜಪಿಸಿ. ಮಗುವಿಗೂ ಪಠಿಸುವಂತೆ ಮಾಡಿ. ಇದನ್ನು ಕನಿಷ್ಠ 40 ದಿನಗಳವರೆಗೆ ಮಾಡಿ. ಇದರಿಂದ ಅದ್ಭುತ ಫಲಿತಾಂಶಗಳು ದೊರೆಯುವುದು.

ಗಾಯತ್ರಿ ಮಂತ್ರವು ಮಕ್ಕಳಲ್ಲಿ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ವೃದ್ಧಿಸುತ್ತದೆ. ಮೆದುಳು ಸ್ಪಷ್ಟವಾಗಿ ಯೋಚಿಸುವಂತೆ ಮಾಡುತ್ತದೆ.

Continue Reading

ಬೆಂಗಳೂರು

Guru Purnima 2024: ನಮ್ಮ ಆಚಾರ-ವಿಚಾರಗಳು ಹಿಂದೂ ಸಂಸ್ಕೃತಿಗನುಸಾರ ಇರಬೇಕು; ಮೋಹನ ಗೌಡ

Guru Purnima 2024: ನಮ್ಮ ಆಚಾರ-ವಿಚಾರಗಳು ಹಿಂದೂ ಸಂಸ್ಕೃತಿಗನುಸಾರ ಇರಬೇಕು. ‘ರಾಮ-ಕೃಷ್ಣʼ ನಮ್ಮ ಆದರ್ಶವಾಗಿದ್ದಾರೆ. ನಮ್ಮ ನಿತ್ಯ ವ್ಯವಹಾರದಲ್ಲಿ ನಮ್ಮ ಸಂಸ್ಕೃತಿಯ ರಕ್ಷಣೆ ಮತ್ತು ಪಾಲನೆ ಮಾಡಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ರಾಜ್ಯ ವಕ್ತಾರ ಮೋಹನ ಗೌಡ ತಿಳಿಸಿದ್ದಾರೆ.

VISTARANEWS.COM


on

Hindu Jana Jagruti Samiti State Spokesperson Mohan Gowda speech
Koo

ಬೆಂಗಳೂರು: ರಾಮರಾಜ್ಯಕ್ಕಾಗಿ ಸಾಧನೆ ಮಾಡುವುದರ ಜತೆಗೆ ಭ್ರಷ್ಟಾಚಾರ, ಅನೈತಿಕತೆ ಮತ್ತು ಅರಾಜಕತೆಯ ವಿರುದ್ಧ ಹೋರಾಡಬೇಕಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ರಾಜ್ಯ ವಕ್ತಾರ ಮೋಹನ ಗೌಡ (Guru Purnima 2024) ತಿಳಿಸಿದರು.

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ನಗರದ ಕಾಮಾಕ್ಷಿಪಾಳ್ಯದ ಧನಂಜಯ ಪ್ಯಾಲೇಸ್‌ನಲ್ಲಿ ಆಯೋಜಿಸಲಾಗಿದ್ದ ಗುರುಪೂರ್ಣಿಮಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವೈಯಕ್ತಿಕ ಜೀವನದಲ್ಲಿ ಆಧ್ಯಾತ್ಮಿಕ ಸಾಧನೆಯಿಂದ ಅಂತರಂಗದಲ್ಲಿ ರಾಮರಾಜ್ಯದ ಸ್ಥಾಪನೆ ಮಾಡಬಹುದು ಆದರೆ ಸಾಮಾಜಿಕ ಮತ್ತು ರಾಷ್ಟ್ರೀಯ ಜೀವನದಲ್ಲಿ ರಾಮರಾಜ್ಯದ ಸ್ಥಾಪನೆಗಾಗಿ ನಾವು ಕರ್ತವ್ಯನಿಷ್ಠರಾಗಿ ನಿಭಾಯಿಸುವುದರೊಂದಿಗೆ ಭ್ರಷ್ಟಾಚಾರ, ಅನೈತಿಕತೆ ಮತ್ತು ಅರಾಜಕತೆಯ ವಿರುದ್ಧ ಹೋರಾಡಬೇಕಿದೆ.

ನಮ್ಮ ಆಚಾರ-ವಿಚಾರಗಳು ಹಿಂದೂ ಸಂಸ್ಕೃತಿಗನುಸಾರ ಇರಬೇಕು. ‘ರಾಮ-ಕೃಷ್ಣʼ ನಮ್ಮ ಆದರ್ಶವಾಗಿದ್ದಾರೆ. ನಮ್ಮ ನಿತ್ಯ ವ್ಯವಹಾರದಲ್ಲಿ ನಮ್ಮ ಸಂಸ್ಕೃತಿಯ ರಕ್ಷಣೆ ಮತ್ತು ಪಾಲನೆ ಮಾಡಬೇಕು ಎಂದು ಅವರು ಕರೆ ನೀಡಿದರು.

ಇದನ್ನೂ ಓದಿ: Union Budget 2024: ಕೇಂದ್ರ ಬಜೆಟ್‌ನಲ್ಲಿ ರೈಲ್ವೇ ವಲಯದ 9 ಪ್ರಮುಖ ನಿರೀಕ್ಷೆಗಳಿವು

ಗುರು ಪೂರ್ಣಿಮಾ ಮಹೋತ್ಸವದಲ್ಲಿ ಬೆಳಿಗ್ಗೆ ಶ್ರೀ ವ್ಯಾಸ ಪೂಜೆ ಮತ್ತು ಪರಮಪೂಜ್ಯ ಭಕ್ತರಾಜ ಮಹಾರಾಜರ ಪ್ರತಿಮೆಯ ಪೂಜೆ ನೆರವೇರಿಸಲಾಯಿತು.

ಮಹೋತ್ಸವದಲ್ಲಿ ರಾಷ್ಟ್ರ ಧರ್ಮ ಸಂಘಟನೆಯ ಸಂಸ್ಥಾಪಕ ಸಂತೋಷ ಕೆಂಚಾಂಬ, ಅಖಿಲ ಭಾರತ ಅಸಂಘಟಿತ ಪುರೋಹಿತ ಕಾರ್ಮಿಕ ಪರಿಷತ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎನ್. ಮಹೇಶ್, ಆನೇಕಲ್‌ನ ಶ್ರೀ ಚೌಡೇಶ್ವರಿ ದೇವಸ್ಥಾನದ ಅಧ್ಯಕ್ಷ ಸೋಮೇಶ್ ರೆಡ್ಡಿ ಹಾಗೂ ರಾಜರಾಜೇಶ್ವರಿ ನಗರದ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಟ್ರಸ್ಟಿ ಶಶಾಂಕ ಆಚಾರ್ ಪಾಲ್ಗೊಂಡಿದ್ದರು.

ಇದನ್ನೂ ಓದಿ: Gold Rate Today: ಆಭರಣ ಪ್ರಿಯರಿಗೆ ಗುಡ್‌ನ್ಯೂಸ್‌; ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಇಳಿಕೆ

ಬೆಂಗಳೂರಿನ ಬಸವನಗುಡಿಯ ಭವಾನಿ ಕಲ್ಯಾಣ ಮಂಟಪ, ಯಲಹಂಕದ ಆರ್.ವಿ. ಕಲ್ಯಾಣ ಮಂಟಪ ಹಾಗೂ ಚಂದಾಪುರದ ಯಾರೆಂಡಳ್ಳಿಯ ಸಾಯಿಬಾಬಾ ಯೋಗ ಕೇಂದ್ರದಲ್ಲಿ ಸೇರಿದಂತೆ ದೇಶದಾದ್ಯಂತ 71 ಕ್ಕೂ ಅಧಿಕ ಕಡೆಗಳಲ್ಲಿ ಗುರುಪೂರ್ಣಿಮಾ ಮಹೋತ್ಸವ ಆಚರಿಸಲಾಯಿತು.

Continue Reading

ರಾಜಕೀಯ

Swami Avimukteshwaranand: ಬಿಜೆಪಿಯನ್ನು ಸದಾ ಕುಟುಕುವ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ! ಏನಿವರ ಹಿನ್ನೆಲೆ?

ಅವಿಮುಕ್ತೇಶ್ವರಾನಂದ ಸರಸ್ವತಿ (Swami Avimukteshwaranand) ಅವರು ಮಾಡಿದ್ದ ಕೇದಾರನಾಥ ದೇವಾಲಯದ ಚಿನ್ನದ ಹಗರಣ ಆರೋಪವು ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ಕಾಂಗ್ರೆಸ್ ಪಕ್ಷಕ್ಕೆ ಬಹಿರಂಗವಾಗಿ ಬೆಂಬಲ ನೀಡುತ್ತಿರುವ ಅವರು ಅನೇಕ ರಾಜಕೀಯ ಭಾಷಣಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಆಗಾಗ್ಗೆ ಬಿಜೆಪಿಯ ನೀತಿಗಳನ್ನು ಟೀಕಿಸುತ್ತಾರೆ. ಈ ಸ್ವಾಮೀಜಿಯ ಹಿನ್ನೆಲೆಯ ಕುರಿತು ಇಲ್ಲಿದೆ ಮಾಹಿತಿ.

VISTARANEWS.COM


on

By

Swami Avimukteswarananda
Koo

ಕೇದಾರನಾಥ ದೇವಾಲಯದಿಂದ (Kedarnath Temple) 228 ಕೆ.ಜಿ ಚಿನ್ನ ನಾಪತ್ತೆಯಾಗಿದೆ ಎಂದು ಆರೋಪಿಸಿ ಅದನ್ನು ಚಿನ್ನದ ಹಗರಣ (gold scam) ಎಂದು ಕರೆದಿದ್ದ ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ (Swami Avimukteshwaranand) ಅವರು ಬಿಜೆಪಿ ಮತ್ತು ಮೋದಿ ವಿರುದ್ಧ ಬಹಿರಂಗವಾಗಿ ಸತತ ಹೇಳಿಕೆ ನೀಡುತ್ತ ಸುದ್ದಿಯಲ್ಲಿದ್ದಾರೆ.

ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಮಾಡಿದ್ದ ಚಿನ್ನದ ಹಗರಣ ಆರೋಪವು ಸಾಕಷ್ಟು ವಿವಾದವನ್ನು ಹುಟ್ಟುಹಾಕಿದೆ. ರಾಹುಲ್‌ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಬಹಿರಂಗವಾಗಿ ಬೆಂಬಲ ನೀಡುತ್ತಿರುವ ಅವರು ಅನೇಕ ರಾಜಕೀಯ ಭಾಷಣಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಆಗಾಗ ಬಿಜೆಪಿಯ ನೀತಿಗಳನ್ನು ಟೀಕಿಸುತ್ತಾರೆ. 2019ರಲ್ಲಿ ವಾರಣಾಸಿ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಯತ್ನಿಸಿದ್ದ ಅವರು 2024ರ ಹೊತ್ತಿಗೆ ಇಂಡಿಯಾ ಮೈತ್ರಿಕೂಟದ ಅಡಿಯಲ್ಲಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವಲ್ಲಿ ಯಶಸ್ವಿಯಾಗಿದ್ದರು. ರಾಜಕೀಯವಾಗಿ ತಮ್ಮ ನಿಲುವನ್ನು ಸ್ಪಷ್ಟವಾಗಿ ಈ ಮೂಲಕ ಪ್ರದರ್ಶಿಸಿದ್ದಾರೆ.

ಸಣ್ಣ ವಯಸ್ಸಿನಲ್ಲೇ ನಾಯಕತ್ವ ಪ್ರದರ್ಶನ

ಉತ್ತರ ಪ್ರದೇಶದ ಪ್ರತಾಪಗಢ ಜಿಲ್ಲೆಯ ಪತ್ತಿ ತೆಹಸಿಲ್‌ನ ಬ್ರಹ್ಮನ್‌ಪುರ ಗ್ರಾಮದಲ್ಲಿ ಉಮಾಶಂಕರ್ ಉಪಾಧ್ಯಾಯ ಇವರ ಮೂಲ ಹೆಸರು. ಸ್ವಾಮಿ ಅವಿಮುಕ್ತೇಶ್ವರಾನಂದರು ವಾರಣಾಸಿಯ ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ತಮ್ಮ ಶಿಕ್ಷಣವನ್ನು ಪಡೆದರು. ಅಲ್ಲಿ ಅವರು ಶಾಸ್ತ್ರಿ ಮತ್ತು ಆಚಾರ್ಯ ಪದವಿಗಳನ್ನು ಪೂರ್ಣಗೊಳಿಸಿದರು. ವಿದ್ಯಾರ್ಥಿ ರಾಜಕೀಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಅವರು 1994ರಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಗೆದ್ದು ಸಣ್ಣ ವಯಸ್ಸಿನಲ್ಲೇ ನಾಯಕತ್ವದ ಸಾಮರ್ಥ್ಯವನ್ನು ಪ್ರದರ್ಶಿಸಿದ್ದರು.

ವಿವಿಧ ಕಾರಣಗಳಿಗಾಗಿ ಹೋರಾಟ

ವೃತ್ತಿಜೀವನದುದ್ದಕ್ಕೂ ಸ್ವಾಮಿ ಅವಿಮುಕ್ತೇಶ್ವರಾನಂದರು ವಿವಿಧ ಕಾರಣಗಳಿಗಾಗಿ ಧ್ವನಿ ಎತ್ತುತ್ತಲೇ ಬಂದಿದ್ದಾರೆ. ಕಾಶಿ ವಿಶ್ವನಾಥ ಕಾರಿಡಾರ್ ನಿರ್ಮಾಣದ ಸಂದರ್ಭದಲ್ಲಿ ದೇವಾಲಯಗಳ ಧ್ವಂಸವನ್ನು ಅವರು ನಿರಂತರ ವಿರೋಧಿಸಿದರು. 2008ರಲ್ಲಿ ಅವರು ಗಂಗಾ ನದಿಯನ್ನು ರಾಷ್ಟ್ರೀಯ ನದಿ ಎಂದು ಘೋಷಿಸಲು ದೀರ್ಘಾವಧಿಯ ಉಪವಾಸ ಸತ್ಯಾಗ್ರಹವನ್ನು ಕೈಗೊಂಡಿದ್ದರು. ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದ ಅನಂತರ ಅವರ ಗುರುಗಳು ಸೂಚನೆ ಮೇರೆಗೆ ಉಪವಾಸವನ್ನು ಕೊನೆಗೊಳಿಸಿದರು.


ಶಾರದಾ ಪೀಠದಲ್ಲಿ ಸ್ಥಾನಮಾನ

ಗುರು, ಜಗದ್ಗುರು ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರ ಮರಣದ ಅನಂತರ 2022ರ ಸೆಪ್ಟೆಂಬರ್‌ನಲ್ಲಿ ಸ್ವಾಮಿ ಅವಿಮುಕ್ತೇಶ್ವರಾನಂದರನ್ನು ಜ್ಯೋತಿಷ್ ಪೀಠದ ಶಂಕರಾಚಾರ್ಯ ಎಂದು ಘೋಷಿಸಲಾಯಿತು. ಶಾರದಾ ಪೀಠದ ದ್ವಾರಕಾದ ಶಂಕರಾಚಾರ್ಯ ಎಂದು ಹೆಸರಿಸಲ್ಪಟ್ಟ ಸ್ವಾಮಿ ಸದಾನಂದ ಸರಸ್ವತಿಯವರೊಂದಿಗೆ ಅವರ ನೇಮಕವಾಯಿತು.

ಇದನ್ನೂ ಓದಿ : Keshav Prasad Maurya: ʼಮಾನ್ಸೂನ್‌ ಆಫರ್‌ʼ ಕೊಟ್ಟ ಅಖಿಲೇಶ್‌ ಯಾದವ್‌ಗೆ ಬಿಜೆಪಿ ಟಾಂಗ್‌

ಹೇಳಿಕೆಗಳಿಂದ ವಿವಾದಗಳು ಹಲವು

ದಿಟ್ಟ ಹೇಳಿಕೆಗಳಿಂದಲೇ ಆಗಾಗ್ಗೆ ಸುದ್ದಿಯಲ್ಲಿರುವ ಸ್ವಾಮಿ ಅವಿಮುಕ್ತೇಶ್ವರಾನಂದರು ಇತ್ತೀಚೆಗೆ ದೆಹಲಿಯಲ್ಲಿ ಕೇದಾರನಾಥ ದೇವಾಲಯದ ಪ್ರತಿಕೃತಿ ನಿರ್ಮಾಣವನ್ನು ಟೀಕಿಸಿದರು. ಅದರ ಮೂಲ ದೇವಾಲಯವು ಹಿಮಾಲಯದಲ್ಲಿದೆ ಎಂದು ವಾದಿಸಿದರು. ಇದು ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ. ಧಾರ್ಮಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಕ್ರಿಯಾತ್ಮಕ ಪಾತ್ರವನ್ನು ತೋರಿಸುತ್ತಿರುವ ಅವರ ಬೆಂಬಲ ಕಾಂಗ್ರೆಸ್ ಪಕ್ಷಕ್ಕೆ ಇರುದರಿಂದ ಭಾರತೀಯ ರಾಜಕೀಯದಲ್ಲಿ ಅವರು ಗುರುತಿಸಿಕೊಳ್ಳುವಂತಾಗಿದೆ. ರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲೂ ಇವರು ಬಿಜೆಪಿಯನ್ನು ಟೀಕಿಸಿ ಸಂಚಲನ ಮೂಡಿಸಿದ್ದರು. ರಾಮ ಮಂದಿರ ಉದ್ಘಾಟನೆಯ ವಿಧಿ ವಿಧಾನ ಸಮರ್ಪಕವಾಗಿ ಆಗಿಲ್ಲ ಎಂದು ಟೀಕಿಸಿದ್ದರು.

Continue Reading
Advertisement
union budget 2024
ದೇಶ13 mins ago

Union Budget 2024: ಕೇಂದ್ರ ಬಜೆಟ್‌ನಲ್ಲಿ ಮಾಲ್ಡೀವ್ಸ್‌ಗೆ ಅನುದಾನದಲ್ಲಿ ಭಾರೀ ಕಡಿತ! ನೆರೆಯ ರಾಷ್ಟ್ರಗಳಿಗೆ ಎಷ್ಟೆಷ್ಟು ನೆರವು ಘೋಷಣೆ?

rain in karnataka
ಪ್ರಮುಖ ಸುದ್ದಿ17 mins ago

Rain in Karnataka: ಬೆಳಗಾವಿಯಲ್ಲಿ ನಗರದೊಳಗೆ ಬಂದ ನದಿಗಳು, ಮನೆ ಖಾಲಿ ಮಾಡಿದ ಜನ

ರಾಜಮಾರ್ಗ ಅಂಕಣ Kargil Vijay Diwas 2024
ಅಂಕಣ54 mins ago

ರಾಜಮಾರ್ಗ ಅಂಕಣ: ಕಾರ್ಗಿಲ್, ಇದು‌ ಕೆಚ್ಚಿನ ಕಲಿಗಳ ಸಮರಗಾಥೆ

Health Article Kannada
ಆರೋಗ್ಯ60 mins ago

Health Article Kannada: ಸ್ವೀಟ್‌ ತಿನ್ನುವ ಚಪಲವೇ? ಆರೋಗ್ಯಕರವಾಗಿ ಸಿಹಿ ತಿನ್ನುವ ಉಪಾಯ ಇಲ್ಲಿದೆ!

Travel Tips
ಪ್ರವಾಸ2 hours ago

Travel Tips: ಪ್ರಯಾಣದ ಪ್ರಯಾಸದಿಂದ ಪಾರಾಗುವುದು ಹೇಗೆ?

ರಾಜಮಾರ್ಗ ಅಂಕಣ Kargil Vijay Diwas 2024
ದೇಶ2 hours ago

Kargil Vijay Diwas 2024: ಕಾರ್ಗಿಲ್‌ ಯುದ್ಧ; ಮೇ 3ರಿಂದ ಜುಲೈ 26ರವರೆಗಿನ ಘಟನಾವಳಿಗಳ ಚಿತ್ರಣ ಇಲ್ಲಿದೆ

Vastu Tips
ಧಾರ್ಮಿಕ2 hours ago

Vastu Tips: ಸಂಸ್ಥೆ ಸಕ್ಸೆಸ್‌ ಆಗಲು ಕಚೇರಿ ಸ್ಥಳ ಹೀಗಿರಬೇಕು!

karnataka weather Forecast
ಮಳೆ2 hours ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಅಬ್ಬರಿಸುವ ವರುಣ; ಒಳನಾಡಿಗೂ ಅಲರ್ಟ್‌

Kargil Vijay Diwas 2024
ದೇಶ3 hours ago

Kargil Vijay Diwas 2024: ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲು ಕ್ಷಣವೂ ಯೋಚಿಸದ ಈ ವೀರ ಯೋಧರಿಗೊಂದು ಸಲಾಮ್

dina Bhavishya
ಭವಿಷ್ಯ3 hours ago

Dina Bhavishya : ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದೀತು ಎಚ್ಚರ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ15 hours ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್18 hours ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ19 hours ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

Actor Darshan
ಸಿನಿಮಾ20 hours ago

Actor Darshan: ಆಧ್ಯಾತ್ಮದತ್ತ ವಾಲಿದ ದರ್ಶನ್‌; ಜೈಲಲ್ಲಿ ಹೇಗಿದೆ ಗೊತ್ತಾ ನಟನ ಬದುಕು

karnataka Weather Forecast
ಮಳೆ2 days ago

Karnataka Weather : ರಭಸವಾಗಿ ಸುರಿಯುವ ಮಳೆ; 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

karnataka weather Forecast
ಮಳೆ3 days ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

Udupi News
ಉಡುಪಿ3 days ago

Udupi News : ಹಳೆ ಲಾರಿ ಚಾಸ್ಸಿಯಲ್ಲೇ ಕಿರು ಸೇತುವೆ ನಿರ್ಮಾಣ! ಬೈಂದೂರು ಶಾಸಕರ ಪರಿಕಲ್ಪನೆಗೆ ಜನರು ಫಿದಾ

murder case
ರಾಮನಗರ3 days ago

Murder Case : ರಾಮನಗರದಲ್ಲೊಂದು ಪೈಶಾಚಿಕ ಕೃತ್ಯ; ಅತ್ಯಾಚಾರವೆಸಗಿ 4 ವರ್ಷದ ಬಾಲಕಿಯನ್ನು ಕೊಂದ ದುಷ್ಟ

karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ6 days ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

ಟ್ರೆಂಡಿಂಗ್‌