ಬೆಳಗಾವಿ: ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಮಂಗಳವಾರ ವಟ ಸಾವಿತ್ರಿ ವ್ರತವನ್ನು ಕೈಗೊಂಡು ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ.
ನಿಪ್ಪಾಣಿ ಕ್ಷೇತ್ರದ ಭಿವಶಿ ಗ್ರಾಮದಲ್ಲಿ, ಸುಮಂಗಲಿಯರ ಜತೆಗೂಡಿ, ಆಲದ ಮರಕ್ಕೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿದ ಅವರು ವ್ರತದ ನಿಯಮಗಳನ್ನು ಅನುಸರಿಸಿದರು. ʼʼಪತಿ-ಪತ್ನಿಯರ ನಡುವಿನ ಪವಿತ್ರ ಬಾಂಧವ್ಯದ ಶ್ರೇಷ್ಠತೆಯನ್ನು ಬಿಂಬಿಸುವ, ಸಂಸಾರದೊಂದಿಗೆ ಪಾರಮಾರ್ಥಿಕ ಚಿಂತನೆಯನ್ನು ಬೋಧಿಸುವ ವಿಶೇಷ ಆಚರಣೆ ಇದಾಗಿದೆ. ಹೀಗಾಗಿ ಪತಿಯ ಆಯುಷ್ಯ, ಆರೋಗ್ಯ ವೃದ್ಧಿಯಾಗಿ ಈ ವಿಶೇಷ ಆಚರಣೆಯನ್ನು ಮಾಡಲಾಗುತ್ತದೆ.ʼʼ ಎಂದವರು ಈ ವ್ರತದ ಕುರಿತು ಹೇಳಿದ್ದಾರೆ.
ಸಾವಿತ್ರಿಯು ಸತ್ಯವಾನನ ಪ್ರಾಣಹರಣದ ನಂತರ ಯಮಧರ್ಮನೊಂದಿಗೆ ಮೂರು ದಿನಗಳ ವರೆಗೆ ಶಾಸ್ತ್ರ ಚರ್ಚೆ ನಡೆಸುತ್ತಾಳೆ. ಆಗ ಪ್ರಸನ್ನನಾದ ಯಮಧರ್ಮನು ಸತ್ಯವಾನನನ್ನು ಪುನಃ ಜೀವಂತಗೊಳಿಸಿದನು. ಈ ಚರ್ಚೆಯು ವಟ ವೃಕ್ಷದ (ಆಲದಮರ) ಕೆಳಗೆ ನಡೆದುದ್ದರಿಂದ ವಟವೃಕ್ಷಕ್ಕೆ ಸಾವಿತ್ರಿಯ ಹೆಸರನ್ನು ಜೋಡಿಸಲಾಯಿತು. ಸಾವಿತ್ರಿಯಂತೆಯೇ ತಮ್ಮ ಪತಿಯ ಆಯುಷ್ಯವು ಹೆಚ್ಚಾಗಲಿ ಎಂದು ಸ್ತ್ರೀಯರು ಈ ವ್ರತವನ್ನು ಮಾಡುತ್ತಾರೆ.
ಇದನ್ನೂ ಓದಿ| Festival 2022| ಹಬ್ಬಗಳ ಸರಣಿಯ ಹೊಸ್ತಿಲು ಈ ಕಾರ ಹುಣ್ಣಿಮೆ ಹಬ್ಬ