ಹುಬ್ಬಳ್ಳಿ: ಇಲ್ಲಿನ ಗೋಕುಲದ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಪಾನಮತ್ತನಾಗಿ ಬಂದಿದ್ದ ಅಯ್ಯಪ್ಪ ಮಾಲಾಧಾರಿಗೆ ಗುರುಸ್ವಾಮಿಯೊಬ್ಬರು ಕಪಾಳಮೋಕ್ಷ ಮಾಡಿದ್ದಾರೆ. ವ್ರತ ಪಾಲಿಸದೆ ಅಯ್ಯಪ್ಪಸ್ವಾಮಿ ಸನ್ನಿಧಾನಕ್ಕೆ ಕುಡಿದು ಬಂದವನ ವಿರುದ್ಧ ಅವರು ಕಿಡಿಕಾರಿದ್ದಾರೆ.
ಬಾಯಿಂದ ಬರುತ್ತಿದ್ದ ಮದ್ಯದ ವಾಸನೆಗೆ ಕೋಪಗೊಂಡ ಗುರುಸ್ವಾಮಿ ಮೋಹನ ಅವರು ಯುವಕನ ಕಪಾಳಕ್ಕೆ ಬಾರಿಸಿದ್ದಲ್ಲದೆ, ಧರಿಸಿದ್ದ ಅಯ್ಯಪ್ಪ ಮಾಲೆ ತೆಗೆದುಹಾಕಿ ಕಪ್ಪುಬಟ್ಟೆಯನ್ನೂ ಬಿಚ್ಚಿಸಿದ್ದಾರೆ. ಯುವಕನನ್ನು ದೇವಸ್ಥಾನದಿಂದ ಆಚೆ ಕಳಿಸಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಶಬರಿಮಲೆಗೆ ಹೋಗುವ ವ್ರತಧಾರಿಯು 41 ದಿನಗಳ ಕಾಲ ವ್ರತಾಚರಣೆ ಮಾಡಬೇಕಾದರೆ ಸಾಕಷ್ಟು ನಿಯಮಗಳನ್ನು ಪಾಲಿಸಬೇಕು. ದುಶ್ಚಟಗಳಿಂದ ದೂರ ಉಳಿದು, ಮುಂಜಾನೆ ಎದ್ದು ತಣ್ಣೀರಿನಲ್ಲಿ ಮಿಂದು ಮಡಿಯಲ್ಲಿದ್ದು ಅಯ್ಯಪ್ಪನಾಮ ಜಪಿಸುತ್ತಿರಬೇಕು.
ಮಾಂಸಾಹಾರ, ಮದ್ಯಪಾನ, ಧೂಮಪಾನ ಸೇವನೆ ಮಾಡಬಾರದು. ನಿತ್ಯ ಎರಡು ಬಾರಿ ದೇವಸ್ಥಾನಕ್ಕೆ ತೆರಳಿ ಅಯ್ಯಪ್ಪನ ದರ್ಶನ ಮಾಡಬೇಕು. ಹೀಗೆ ಹತ್ತು ಹಲವು ನಿಮಯಗಳಿದ್ದು, ಈ ನಿಯಮವನ್ನು ಮುರಿದಿದ್ದಕ್ಕೆ ಯುವಕನಿಗೆ ಗುರುಸ್ವಾಮಿ ಕಪಾಳಮೋಕ್ಷ ಮಾಡಿದ್ದಾರೆ.
ಇದನ್ನೂ ಓದಿ | Cold Feeling | ಕೆಲವರಿಗೆ ಮಾತ್ರ ಏಕೆ ಚಳಿ ಹೆಚ್ಚು?