1.ರಾಜ್ಯದಲ್ಲಿ 800 ಕೋಟಿ ರೂ. ಮಹಾವಂಚನೆ; ಚೈನ್‌ಲಿಂಕ್ ಹೆಸರಲ್ಲಿ ʼಆಯುರ್ವೇದʼ ದೋಖಾ!
ರಾಜ್ಯದಲ್ಲಿ ಮತ್ತೊಂದು ಬಹುಕೋಟಿ ವಂಚನೆ ಪ್ರಕರಣ (Fraud Case) ಬೆಳಕಿಗೆ ಬಂದಿದೆ. ಚೈನ್‌ಲಿಂಕ್ (Chain Link Business) ಮೂಲಕ ಸುಮಾರು 800 ಕೋಟಿ ರೂಪಾಯಿಗೂ ಹೆಚ್ಚು ವಂಚನೆ ಮಾಡಲಾಗಿದೆ ಎಂಬ ಸಂಗತಿ ಬಯಲಾಗಿದೆ. ವೇದಿಕ್ ಆಯುರ್ ಕ್ಯೂರ್ ಹೆಲ್ತ್ ಆ್ಯಂಡ್ ರಿಟೇಲ್ಸ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ಈ ಮಹಾ ಮೋಸ ನಡೆದಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ಸುದ್ದಿ: 800 ಕೋಟಿ ರೂ. ವಂಚನೆಯ ʼಆಯುರ್ವೇದʼ ಚೈನ್‌ಲಿಂಕ್ ದೋಖಾ ನಡೆದಿದ್ದು ಹೀಗೆ
2. ಬಿಜೆಪಿ ಕಡೆ JDS ನಡೆ; ಇನ್ನೊಂದು ಹೆಜ್ಜೆ ಇಟ್ಟ HDK, ಬೊಮ್ಮಾಯಿ ಜತೆ ಜಂಟಿ ಕಹಳೆ
ಕಳೆದ ವಿಧಾನಸಭಾ ಚುನಾವಣೆಯ ನಂತರ ಹೆಜ್ಜೆ ಹೆಜ್ಜೆಗೂ ಬಿಜೆಪಿಯ ಜತೆ ಹೆಜ್ಜೆ ಹಾಕುತ್ತಿರುವ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್.ಡಿ ಕುಮಾರಸ್ವಾಮಿ ಅವರು ಈಗ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ಶುಕ್ರವಾರ ಅವರು ಬಿಜೆಪಿ ನಾಯಕ ಬಸವರಾಜ ಬೊಮ್ಮಾಯಿ ಅವರ ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಇದು ಬಿಜೆಪಿ ಕಡೆಗಿನ ಎಚ್ಡಿಕೆ ನಡೆಯ ಇನ್ನೊಂದು ಹೆಜ್ಜೆ ಎನ್ನಲಾಗುತ್ತಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ವರದಿ: Karnataka Politics : NICE ಹೆಸರಲ್ಲಿ ನೈಸಾಗಿ ಬೆಸೆದುಕೊಂಡ ಕುಮಾರಸ್ವಾಮಿ, ಬೊಮ್ಮಾಯಿ! ಜಂಟಿ ಮಾತೇನು?
3. ರಾಜ್ಯದಲ್ಲಿ ಶುರುವಾಯ್ತು ಬಜರಂಗ ದಳ ಕಾರ್ಯಕರ್ತರ ಗಡಿಪಾರು: ಮಂಗಳೂರಲ್ಲಿ ಮೂವರಿಗೆ ನೋಟಿಸ್
ಮಂಗಳೂರಿನ ಮೂವರು ಹಿಂದು ಸಂಘಟನೆಗಳ ಕಾರ್ಯಕರ್ತರ (Hindu activists) ಗಡಿಪಾರಿಗೆ ನೋಟಿಸ್ (Extradiction Notice) ನೀಡಲಾಗಿರುವುದರ ವಿರುದ್ಧ ಬಿಜೆಪಿ ಆಕ್ರೋಶ (BJP Up in arms against Government) ವ್ಯಕ್ತಪಡಿಸಿದೆ. ಪೂರ್ಣ ವಿವರಕ್ಕೆ ಈ ಲಿಂಕ್ ಕ್ಲಿಕ್ ಮಾಡಿ
4. ಹಿಂದೂ- ಮುಸ್ಲಿಂ ಗಲಭೆ ಸೃಷ್ಟಿಗೆ ಉಗ್ರರ ಸ್ಕೆಚ್, ಇಡೀ ಕರ್ನಾಟಕವೇ ಇವರ ಟಾರ್ಗೆಟ್!
ರಾಜಧಾನಿಯಲ್ಲಿ ಸಿಕ್ಕಿಬಿದ್ದ ಶಂಕಿತ ಉಗ್ರರನ್ನು (Terrorists in Bengaluru) ಸಿಸಿಬಿ ಪೊಲೀಸರು ತೀವ್ರ ತನಿಖೆಗೆ ಒಳಪಡಿಸಿದ್ದು, ಈ ವೇಳೆ ಅನೇಕ ಸ್ಫೋಟಕ ಮಾಹಿತಿಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಕರ್ನಾಟಕದ ಹಲವು ಕಡೆ ಹಿಂದೂ- ಮುಸ್ಲಿಂ ಗಲಭೆ ನಡೆಯುವ ತಾಣಗಳಲ್ಲಿ ಸ್ಫೋಟ ನಡೆಸಲು ಇವರು ಸ್ಕೆಚ್ ಹಾಕಿದ್ದರು ಎಂದು ಗೊತ್ತಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
5. ರಾಜ್ಯದಲ್ಲಿ ಹಾಲಿನ ದರ ಲೀಟರ್‌ಗೆ 3 ರೂ. ಏರಿಕೆ; ಆಗಸ್ಟ್ 1ರಿಂದ ಜಾರಿ
ರಾಜ್ಯದಲ್ಲಿ ನಂದಿನಿ ಹಾಲಿನ ದರವನ್ನು ಮೂರು ರೂ. ಹೆಚ್ಚಿಸಲು ಸರ್ಕಾರ ಕೆಎಂಎಫ್‌ಗೆ ಅನುಮತಿ ನೀಡಿದೆ. ಮುಂದಿನ ಆಗಸ್ಟ್ 1ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ. ವಿಶೇಷವೇನೆಂದರೆ, ಈ ಹೆಚ್ಚಳದ ಪ್ರಮಾಣವನ್ನು ಹೈನುಗಾರರಿಗೇ ವರ್ಗಾಯಿಸಲು ಸರ್ಕಾರ ಸೂಚಿಸಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
6. ಪಾಲಕರೇ ನಿಮ್ಮ ಮಕ್ಕಳು ಹುಷಾರ್; ಅಂಗಡಿಗಳಲ್ಲಿ ಸಿಗ್ತಿದೆ ಭಾಂಗ್ ಚಾಕೊಲೇಟ್!
ಮನೆಯಲ್ಲಿ ಹೆತ್ತವರು, ಶಾಲೆಗಳಲ್ಲಿ ಶಿಕ್ಷಕರು, ಸಮಾಜದಲ್ಲಿ ಪೊಲೀಸರು ಮಕ್ಕಳನ್ನು ಹಾದಿ ತಪ್ಪದಂತೆ ನೋಡಿಕೊಳ್ಳುವ ರಕ್ಷಕರಾಗಿ ಕೆಲಸ ಮಾಡಿದರೂ ಸಮಾಜವಿದ್ರೋಹಿ ಶಕ್ತಿಗಳು ಅವರ ಕಣ್ಣಿಗೆ ಮಣ್ಣೆರಚಿ ಮಕ್ಕಳನ್ನು ಡ್ರಗ್ಸ್ ಕಡೆಗೆ ಎಳೆಯುವ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ. ಅಂಥಹುದೊಂದು ಭಯಾನಕ ವ್ಯೂಹ ಮಂಗಳೂರಿನಲ್ಲಿ ಪತ್ತೆಯಾಗಿದೆ. ಮಂಗಳೂರಿನ ಅಂಗಡಿಗಳಲ್ಲಿ ಸಿಗುತ್ತಿರುವ ಭಾಂಗ್ ಚಾಕೊಲೇಟ್ ಭಯ ಹುಟ್ಟಿಸಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
7. Free Bus Service : ಶಕ್ತಿ ಯೋಜನೆಯಿಂದ ದೇವರೂ ಶ್ರೀಮಂತರಾದರು; ಪುಣ್ಯಕ್ಷೇತ್ರಗಳಲ್ಲಿ ಹೆಚ್ಚಿದ ಆದಾಯ
ಕಾಂಗ್ರೆಸ್‌ನ ಮಹತ್ವಾಕಾಂಕ್ಷಿ ಶಕ್ತಿ ಯೋಜನೆಯಿಂದ (Shakti scheme) ಮಹಿಳೆಯರಿಗೆ ಮಾತ್ರ ಲಾಭವಾಗಿದ್ದಲ್ಲ. ರಾಜ್ಯದ ಹಲವು ಪುಣ್ಯ ಕ್ಷೇತ್ರಗಳಿಗೂ (Temples of Karnataka) ಇದರ ಲಾಭ ಸಿಕ್ಕಿದೆ! ಹೌದು, ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ಕಲ್ಪಿಸಿದ ಬಳಿಕ ದೇವಾಲಯಗಳಿಗೆ ಹೋಗುವ ಮಹಿಳೆಯರ ಸಂಖ್ಯೆ ಏಕಾಏಕಿ ಹೆಚ್ಚಾಗಿದೆ. ಹೀಗಾಗಿ ದೇವಾಲಯಗಳ ಆದಾಯವೂ ಹೆಚ್ಚಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
8.ಜ್ಞಾನವ್ಯಾಪಿ ಮಸೀದಿ ವೈಜ್ಞಾನಿಕ ಸರ್ವೆಗೆ ಕೋರ್ಟ್ ಅಸ್ತು; ಹಿಂದೂಗಳಿಗೆ ಭಾರಿ ಮುನ್ನಡೆ
ಕಾಶಿ ವಿಶ್ವನಾಥ ದೇವಾಲಯಕ್ಕೆ ಅಂಟಿಕೊಂಡಂತಿರುವ ಜ್ಞಾನವಾಪಿ (Gyanvapi Case) ಮಸೀದಿಯಲ್ಲಿ ವೈಜ್ಞಾನಿಕ ಸಮೀಕ್ಷೆ ನಡೆಸಲು ವಾರಾಣಸಿ ನ್ಯಾಯಾಲಯವು ಅನುಮತಿ ನೀಡಿದೆ. ಇದರಿಂದಾಗಿ ಹಿಂದು ಅರ್ಜಿದಾರರಿಗೆ ಭಾರಿ ಮುನ್ನಡೆ ಸಿಕ್ಕಂತಾಗಿದೆ. ಜ್ಞಾನವಾಪಿ ಮಸೀದಿಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ISI) ವೈಜ್ಞಾನಿಕ ಸಮೀಕ್ಷೆ ನಡೆಸಲಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
9. ಅಡಿಕೆ, ಕಾಳುಮೆಣಸು ಬೆಳೆಗಾರರಿಗೆ ಸಿಹಿ- ಫಸಲ್ ಬಿಮಾ ಯೋಜನೆ ಅಡಿ ವಿಮಾ ಸೌಲಭ್ಯಕ್ಕೆ ಅವಕಾಶ
ಬೆಂಗಳೂರು: ರಾಜ್ಯದ ಅಡಿಕೆ ಮತ್ತು ಕಾಳುಮೆಣಸು ಬೆಳೆಗಾರರಿಗೆ ಸಿಹಿ ಸುದ್ದಿ ಇಲ್ಲಿದೆ. ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆ (PMFBY Scheme) ಅಡಿಯಲ್ಲಿ ಬೆಳೆ ವಿಮಾ ಸೌಲಭ್ಯ ಪಡೆಯಲು ರಾಜ್ಯದ ಎಲ್ಲ ಜಿಲ್ಲೆಗಳ ಅಡಿಕೆ ಮತ್ತು ಕಾಳು ಮೆಣಸು ಬೆಳೆಗಾರರಿಗೆ ಈಗ ಅವಕಾಶ ನೀಡಲಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
10. Viral News: ದುಬೈನಿಂದ ಬೆಂಗಳೂರಿಗೆ ಟೊಮ್ಯಾಟೊ ತಂದು ತಾಯಿಗೆ ಗಿಫ್ಟ್ ಕೊಟ್ಟ ಮಗಳು!
ಬೆಂಗಳೂರು ಸೇರಿ ಟೊಮ್ಯಾಟೊ ಬೆಲೆ 100 ರೂ. ದಾಟಿದ್ದು, ಸೇಬು ಹಣ್ಣು ಹಾಗೂ ಟೊಮ್ಯಾಟೊ (Tomato) ಬೆಲೆ ಒಂದು ಕೆ.ಜಿಗೆ ಸಮನಾಗಿದೆ. ಈ ಮಧ್ಯೆ ದುಬೈನಿಂದ ಬೆಂಗಳೂರಿಗೆ ಬಂದ ಮಹಿಳೆಯು, ತಾಯಿಗೆ 10 ಕೆ.ಜಿ ಟೊಮ್ಯಾಟೊ ಗಿಫ್ಟ್ ನೀಡುವ ಮೂಲಕ ತಾಯಿಯನ್ನು ಖುಷಿಪಡಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ