ಅಯೋಧ್ಯೆ: ಕೋಟ್ಯಂತರ ಭಾರತೀಯರು ಕಂಡ ರಾಮಮಂದಿರದ (Ram Mandir) ಕನಸು ಜನವರಿ 22ರಂದು ನನಸಾಗಲಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಾಮಲಲ್ಲಾ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಲಾಗಿದೆ. ರಾಮಲಲ್ಲಾನಿಗೆ ಪ್ರಾಣಪ್ರತಿಷ್ಠಾಪನೆಗೂ ಮೊದಲು ಒಂದು ವಾರ ಅಂದರೆ ಮಂಗಳವಾರದಿಂದ (ಜನವರಿ 16) ಧಾರ್ಮಿಕ ವಿಧಿವಿಧಾನಗಳು ಆರಂಭವಾಗಿವೆ. ಪ್ರಾಣ ಪ್ರತಿಷ್ಠಾಪನೆ ಪೂರ್ವ ಧಾರ್ಮಿಕ ವಿಧಿವಿಧಾನಗಳಿಗೆ ಡಾ.ಅನಿಲ್ ಮಿಶ್ರಾ (Dr Anil Mishra) ಅವರು ಪ್ರಧಾನ ಯಜಮಾನರಾಗಿ (Pradhan Yajman) ಆಯ್ಕೆಯಾಗಿದ್ದಾರೆ.
ಯಾರಿವರು ಡಾ. ಅನಿಲ್ ಮಿಶ್ರಾ?
ಡಾ. ಅನಿಲ್ ಮಿಶ್ರಾ ಅವರು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸದಸ್ಯರಾಗಿದ್ದಾರೆ. ಉತ್ತರ ಪ್ರದೇಶದ ಅಂಬೇಡ್ಕರ್ ನಗರ ಜಿಲ್ಲೆಯಲ್ಲಿ ಜನಿಸಿದ ಇವರು ಅಯೋಧ್ಯೆ ನಗರದಲ್ಲಿ ನೆಲೆಸಿದ್ದಾರೆ. ವೃತ್ತಿಯಲ್ಲಿ ವೈದ್ಯರಾಗಿರುವ ಇವರು ಅಯೋಧ್ಯೆಯಲ್ಲಿ ಕಳೆದ ನಾಲ್ಕು ದಶಕಗಳಿಂದ ಹೋಮಿಯೋಪತಿ ಕ್ಲಿನಿಕ್ ಮುನ್ನಡೆಸುತ್ತಿದ್ದಾರೆ. ಕೆಲ ವರ್ಷಗಳ ಹಿಂದಷ್ಟೇ ಡಾ. ಅನಿಲ್ ಮಿಶ್ರಾ ಅವರು ಉತ್ತರ ಪ್ರದೇಶ ಹೋಮಿಯೋಪತಿಕ್ ಮಂಡಳಿಯ ರಿಜಿಸ್ಟ್ರಾರ್ ಹುದ್ದೆಯಿಂದ ನಿವೃತ್ತರಾಗಿದ್ದಾರೆ. ಆರ್‌ಎಸ್‌ಎಸ್ ಸದಸ್ಯರಾಗಿರುವ ಇವರು ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ನಡೆಸಿದ್ದಾರೆ. ರಾಮಮಂದಿರ ಹೋರಾಟದಲ್ಲೂ ಪಾಲ್ಗೊಂಡ ಇವರೀಗ ಪ್ರಾಣ ಪ್ರತಿಷ್ಠಾಪನೆ ಪೂರ್ವ ಧಾರ್ಮಿಕ ವಿಧಿವಿಧಾನಗಳ ಪ್ರಧಾನ ಅರ್ಚಕರಾಗಿದ್ದಾರೆ. ಇವರ ಪತ್ನಿ ಉಷಾ ಮಿಶ್ರಾ ಅವರೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ.
ಏನೆಲ್ಲ ಧಾರ್ಮಿಕ ವಿಧಿವಿಧಾನ ನಡೆಯಲಿವೆ?
ಜನವರಿ 18
ಗಣೇಶ ಅಂಬಿಕಾ ಪೂಜೆಗಳೊಂದಿಗೆ ಔಪಚಾರಿಕ ಪೂಜಾ ವಿಧಿ ವಿಧಾನಗಳು ಶುರುವಾಗಲಿವೆ. ವರುಣ ಪೂಜೆ, ಮತ್ರಿಕಾ ಪೂಜೆ, ಬ್ರಾಹ್ಮಿಣ್ ವರನ್, ವಾಸ್ತು ಪೂಜೆ ಸೇರಿದಂತೆ ವಿವಿಧ ಪೂಜೆ ಕಾರ್ಯಕ್ರಮಗಳು ನಡೆಯಲಿವೆ.
ಜನವರಿ 19
ಅಗ್ನಿ ಸ್ಥಾಪನೆ, ನವಗ್ರಹ ಸ್ಥಾಪನೆ ಮತ್ತು ಹವನ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.
ಜನವರಿ 20
ದೇವಾಲಯದ ಗರ್ಭಗುಡಿಯನ್ನು ಸರಯುವಿನ ಪವಿತ್ರ ನೀರಿನಿಂದ ತೊಳೆದ ನಂತರ ವಾಸ್ತು ಶಾಂತಿ ಪೂಜಾ ವಿಧಿವಿಧಾನಗಳು ನಡೆಯಲಿವೆ.
ಜನವರಿ 21
125 ಕಲಶಗಳಿರುವ ದೈವ ಸ್ನಾನದ ನಂತರ ಶಯಾಧಿವಾಸ ನಡೆಯಲಿದೆ.
ಜನವರಿ 22
ಬೆಳಗಿನ ಪೂಜೆಯ ನಂತರ ಮಧ್ಯಾಹ್ನ ಮೃಗಶಿರ ನಕ್ಷತ್ರದಲ್ಲಿ ರಾಮಲಲ್ಲಾ ದೇವರ ಪ್ರತಿಷ್ಠಾಪನೆ ನಡೆಯಲಿದೆ.
ಇದನ್ನೂ ಓದಿ: Ram Temples: ಅಯೋಧ್ಯೆ ಜತೆಗೆ ದೇಶಾದ್ಯಂತ ಇವೆ 7 ಭವ್ಯ ರಾಮಮಂದಿರಗಳು; ಭೇಟಿ ಕೊಡಿ
ಪ್ರಾಣಪ್ರತಿಷ್ಠಾಪನೆಗೆ ಮೋದಿಯೇ ಪ್ರಧಾನ ಯಜಮಾನ
ಜನವರಿ 22ರಂದು ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಪ್ರಧಾನ ಯಜಮಾನರಾಗಿರುತ್ತಾರೆ ಎಂದು ಕಾಶಿಯ ಹಿರಿಯ ವೈದಿಕ ಕರ್ಮಕಾಂಡ ವಿದ್ವಾಂಸ, ಪಂಡಿತ ಲಕ್ಷ್ಮೀಕಾಂತ್ ಮಥುರಾನಾಥ ದೀಕ್ಷಿತ್ ಅವರು ಹೇಳಿದ್ದಾರೆ. ಇವರು ರಾಮಲಲ್ಲಾ ವಿಗ್ರಹವನ್ನು ಪ್ರಾಣ ಪ್ರತಿಷ್ಠಾಪನೆಯ ವೈದಿಕ ವಿದ್ವಾಂಸರು ಮತ್ತು ಪುರೋಹಿತರ ತಂಡವನ್ನು ಮುನ್ನಡೆಸುತ್ತಿದ್ದಾರೆ. ದೀಕ್ಷಿತ್ ಅವರು ‘ಪ್ರಾಣ ಪ್ರತಿಷ್ಠಾಪನೆ’ಯ ಪ್ರಧಾನ ಆಚಾರ್ಯರಾಗಿದ್ದಾರೆ. ಕಾಶಿ ವಿದ್ವಾಂಸ ಮತ್ತು ಪುರೋಹಿತ ಗಣೇಶ್ವರ ಶಾಸ್ತ್ರಿ ದ್ರಾವಿಡ್ ಅವರು 121 ಆಚಾರ್ಯರ ತಂಡದೊಂದಿಗೆ ನಡೆಸುವ ವಿಧಿವಿಧಾನಗಳ ಮೇಲ್ವಿಚಾರಣೆ ಮತ್ತು ಸಮನ್ವಯತೆಯನ್ನು ನೋಡಿಕೊಳ್ಳಲಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ