ಕೆಲವೊಮ್ಮೆ ನೀವು ಗಮನಿಸಿರಬಹುದು, ಎಷ್ಟೇ ಹೊಂದಿಕೆ ಮಾಡಿಕೊಂಡರೂ ಸಂಬಂಧದಲ್ಲಿ (relationships) ಕೆಲವೊಮ್ಮೆ ಕೆಲವರ ಜೊತೆ ಹೊಂದಿಕೆ ಸಾಧ್ಯವಾಗುವುದೇ ಇಲ್ಲ. ನೀವ್ಯಾಕೆ ಒಬ್ಬರನ್ನೊಬ್ಬರು ಕಂಡರೆ ಹಾವು ಮುಂಗುಸಿ ಥರ ಆಡುತ್ತೀರಿ ಎಂದು ಕೆಲವರು ಹೇಳುವುದನ್ನೂ ನೀವು ನೋಡಿರಬಹುದು. ಅದ್ಯಾಕೋ, ಇಂಥವರ ಜೊತೆಗೆ ನನ್ನ ಮೃಗವೇ ಸರಿ ಬರುವುದಿಲ್ಲ ಎಂದು ಕೆಲವರು ಗೊಣಗಾಡುವುದನ್ನೂ ನೋಡಿರಬಹುದು! ಇದು ರಾಶಿ ಹೊಂದಾಣಿಕೆ (zodiac compatibility) ಮಹತ್ವ.
ಹೌದು. ಜೀವನದಲ್ಲಿ ಎಲ್ಲರ ಜೊತೆಗೂ ಒಂದೇ ಬಗೆಯಲ್ಲಿ ಇರುವುದು ಕಷ್ಟ. ಕೆಲವರು ಬಹುಬೇಗನೆ ಹತ್ತಿರವಾಗುತ್ತಾರೆ. ಇನ್ನೂ ಕೆಲವರು ಬಹುಬೇಗನೆ ಹತ್ತಿರವಾಗಿ ಅಷ್ಟೇ ವೇಗವಾಗಿ ದೂರವಾಗುತ್ತಾರೆ. ಕೆಲವರು, ಹತ್ತಿರವೂ ಆಗದೆ, ದೂರವೂ ಆಗದೆ ಎಷ್ಟು ವರ್ಷಗಳಾದರೂ ಸದಾ ಪರಿಚಿತ ವರ್ಗದಲ್ಲೇ ಇದ್ದು ಬಿಡುತ್ತಾರೆ. ಕೆಲವರಲ್ಲಿ ಮಾತೂ ಸಾಧ್ಯವಾಗುವುದಿಲ್ಲ. ಇನ್ನು ಕೆಲವು ಜೋಡಿಗಳು, ಹೆಚ್ಚು ಕಾಲ ಜೊತೆಯಲ್ಲಿರಲು ಸಾಧ್ಯವಾಗುವುದಿಲ್ಲ. ಬಹುಬೇಗನೆ ದೂರಾಗುತ್ತಾರೆ. ಇನ್ನೂ ಕೆಲವರು ವೈಮನಸ್ಸಿನಲ್ಲಿಯೇ ಸಂಸಾರ ರಥ ಸಾಗಿಸುತ್ತಾರೆ. ಇವಕ್ಕೆಲ್ಲ ಬೇರೆ ಬೇರೆ ಕಾರಣಗಳಿವೆ ನಿಜ. ನಮ್ಮ ಆಸಕ್ತಿ, ಭಾವುಕತೆ, ನಮ್ಮ ಗುಣಗಳು ಅವರ ಜೊತೆ ತಾಳಮೇಳ ಸರಿಯಾಗದೆ ಇರುವುದೂ ಕಾರಣ ನಿಜವೇ. ಹೀಗೆ ಕೆಲವರು ನಮಗೆ ಹೊಂದಿಕೆಯಾಗದೆ ಇರುವುದಕ್ಕೆ ಕೇವಲ ಇಷ್ಟೇ ಕಾರಣವಾಗಿರುವುದಿಲ್ಲವಂತೆ. ಅದಕ್ಕೆ ನಿಮ್ಮ ಜನ್ಮರಾಶಿಯೂ ಕಾರಣವಂತೆ! ಹೌದು, ಬನ್ನಿ ಹಾವು ಮುಂಗುಸಿ ಥರ ಆಡುವ (viral zodiacs) ಜನ್ಮರಾಶಿಗಳಾವುವು, ಯಾವ ರಾಶಿಗೆ ಯಾವ ರಾಶಿ ಸರಿ ಹೊಂದಲಾರದು, ಯಾವ ರಾಶಿ ಜೋಡಿಗಳು ಜೊತೆ ಸೇರಿ ಬಾಳಲಾರವು ಎಂಬುದನ್ನು ನೋಡೋಣ (relationship guide).
1. ಮೇಷ ಹಾಗೂ ಕಟಕ ರಾಶಿ: ಈ ಎರಡೂ ರಾಶಿಗಳ ಮಂದಿಯಲ್ಲಿ ವಿರುದ್ಧ ಸ್ವಭಾವಗಳಿರುತ್ತವೆ. ಜೀವನದ ಬಗ್ಗೆ ಬೇರೆ ಬೇರೆ ನಿಲುವುಗಳಿರುತ್ತದೆ. ಇವರ ಸಂವಹನ ಕ್ರಮದಲ್ಲೇ ವಿರೋಧಾಬಾಸಗಳಿರುವುದರಿಂದ ಇವರಬ್ಬರಲ್ಲೂ ಸಾಮರಸ್ಯ ಬೆಳೆಯಲಾರದು.
2. ವೃಷಭ ಹಾಗೂ ಕುಂಭ ರಾಶಿ: ವೃಷಭ ರಾಶಿಯ ಮಂದಿ ನಂಬಿರುವುದು ಸ್ಥಿತಪ್ರಜ್ಞತೆ, ಅಚಲತೆ ಹಾಗೂ ವ್ಯಾವಹಾರಿಕತೆಯನ್ನು. ಆದರೆ, ಕುಂಭ ರಾಶಿಯ ಮಂದಿ ಹೆಚ್ಚು ಸ್ವಾತಂತ್ರ್ಯ ಪ್ರಿಯರು. ಇವರಿಬ್ಬರ ಬದುಕಿನ ದೃಷ್ಟಿಕೋನವೇ ಬೇರೆ ಬೇರೆ ಇರುವುದರಿಂದ ಇಬ್ಬರಿಬ್ಬರು ಜೋಡಿಯಾದರೂ ಹೊಂದಾಣಿಕೆಯೇ ಸವಾಲೆನಿಸುತ್ತದೆ.
3. ಮಿಥುನ ಹಾಗೂ ಕನ್ಯಾ ರಾಶಿ: ಮಿಥುನ ರಾಶಿಯ ಬದಲಾಗುವ ಗುಣಕ್ಕೂ ಕನ್ಯಾ ರಾಶಿಯವರ ಗುಣಕ್ಕೂ ಹೊಂದಿಕೆ ಸಾಧ್ಯವಾಗದೆ ಇರುವುದರಿಂದ ಇವರೂ ಒಳ್ಳೆಯ ಸ್ನೇಹಿತರಾಗಲಾರರು.
4. ಸಿಂಹ ಹಾಗೂ ವೃಶ್ಚಿಕ ರಾಶಿ: ಸಿಂಹ ರಾಶಿಯ ಮಂದಿಯ ಗಮನ ಸೆಳೆಯುವ ಪ್ರವೃತ್ತಿ ಹಾಗೂ ವೃಶ್ಚಿಕ ರಾಶಿಯ ಮಂದಿಯ ಖಾಸಗಿತನಕ್ಕೂ ತಾಳ ಮೇಳ ಸರಿ ಬರದು. ಹೀಗಾಗಿ ಇಬ್ಬರಲ್ಲೂ ಮಾನಸಿಕ ಹೊಂದಾಣಿಕೆ ಸಾಧ್ಯವಾಗದು.
ಇದನ್ನೂ ಓದಿ: Relationship Tips: ಸಂಗಾತಿಯ ಜೊತೆಗೆ ಈ ಎಂಟು ತಪ್ಪುಗಳನ್ನು ಮಾಡಬೇಡಿ!
5. ತುಲಾ ಹಾಗೂ ಮಕರ ರಾಶಿ: ತುಲಾ ರಾಶಿಯ ಮಂದಿ ಸಂಬಂಧ ಶಾಂತಿಯಿಂದ ನೆಮ್ಮದಿಗಳು ಮುಖ್ಯ ಎಂದು ಬಯಸುವವರು. ಆದರೆ ಮಕರ ರಾಶಿಯ ಮಂದಿ ಯಾವಾಗಲೂ ವ್ಯಾವಹಾರಿಕ ಹಾಗೂ ತಮ್ಮ ವೃತ್ತಿ ಸಂಬಂಧಿತ ಗುರಿಗಳನ್ನೇ ಬದುಕು ಎಂದು ನಂಬುವವರಾದ್ದರಿಂದ ಇವರಿಬ್ಬರ ನಡುವೆ ಬಾಂಧವ್ಯ ಕಷ್ಟ ಸಾಧ್ಯ.
6. ಧನು ಹಾಗೂ ಮೀನ ರಾಶಿ: ಧನು ರಾಶಿಯ ಮಂದಿ ಯಾವಾಗಲೂ ಸ್ವತಂತ್ರ ಪ್ರವೃತ್ತಿಯನ್ನು ಹಾಗೂ ಸಾಹಸವನ್ನು ಬಯಸುವವರು. ಆದರೆ ಮೀನರಾಶಿಯ ಮಂದಿ ಭಾವುಕರು. ಇವರಿಗೆ ಸಂಬಂಧದಲ್ಲಿ ಭಾವುಕತೆ ಹಾಗೂ ಸೂಕ್ಷ್ಮತೆಯೇ ಮುಖ್ಯ. ಹಾಗಾಗಿ ಇವರಿಬ್ಬರ ಬದುಕಿನ ಭಾಷ್ಯವೇ ಬೇರೆಯಾಗಿರುವುದರಿಂದ ಇವರ ನಡುವೆ ಆಪ್ತತೆ ಬೆಳೆಯುವುದು ಕಷ್ಟ.
ಇದನ್ನೂ ಓದಿ: Relationship Tips: ಇರಬೇಕಾದರೆ ಸಂಸಾರ ಸುಸೂತ್ರ, ಪಾಲಿಸಿ ಸುಗಮ ದಾಂಪತ್ಯದ 5 ಸೂತ್ರ!