ವಾಷಿಂಗ್ಟನ್: ಅಮೆರಿಕದ ಓಕ್ಲಹಾಮದಲ್ಲಿರುವ ಆಸ್ಪತ್ರೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ ಐವರು ಮೃತಪಟ್ಟಿದ್ದಾರೆ.
ಅಮೆರಿಕದ ಓಕ್ಕಹಾಮದ ಟುಲ್ಸಾ ಮೆಡಿಕಲ್ ಕಟ್ಟಡದಲ್ಲಿ ಗುಂಡಿನ ದಾಳಿ ನಡೆದಿದ್ದು, ಶೂಟರ್ ಹತನಾಗಿದ್ದಾನೆ.
ಟೆಕ್ಸಾಸ್‌ನಲ್ಲಿ ಕಳೆದ ಎಂಟು ದಿನಗಳ ಹಿಂದೆ ನಡೆದ ಗುಂಡಿನ ದಾಳಿಗೆ 19 ಮಕ್ಕಳು ಸಾವಿಗೀಡಾಗಿದ್ದರು. ಇದರ ಬೆನ್ನಲ್ಲೇ ಮತ್ತೊಂದು ದಾಳಿ ನಡೆದಿದೆ. ಆಸ್ಪತ್ರೆಯಲ್ಲಿ ಗುಂಡಿನ ದಾಳಿಗೆ ಕಾರಣ ತಿಳಿದು ಬಂದಿಲ್ಲ.
ಆಸ್ಪತ್ರೆ ಆವರಣಕ್ಕೆ ಬಂದೂಕಿನೊಂದಿಗೆ ನುಗ್ಗಿದ ಶೂಟರ್, ಮನಬಂದಂತೆ ಗುಂಡು ಹಾರಿಸಿದ್ದಾನೆ. ಕೊನೆಗೆ ತನಗೆ ತಾನೇ ಗುಂಡಿಕ್ಕಿ ಆತ್ಮಹತ್ಯೆ ಮಾಡಿದ್ದಾನೆ. ಟೆಕ್ಸಾಸ್ ಶಾಲೆಯಲ್ಲಿ ನಡೆದ ಗುಂಡಿನ ದಾಳಿ ಅಮೆರಿಕವನ್ನು ಬೆಚ್ಚಿ ಬೀಳಿಸಿತ್ತು. ಬಂದೂಕಿನ ಲಾಬಿಯನ್ನು ಹತ್ತಿಕ್ಕಬೇಕು ಎಂದು ಅಮೆರಿಕದ ಅಧ್ಯಕ್ಷ ಜೊ ಬೈಡೆನ್ ಕರೆ ನೀಡಿದ್ದರು.
ಇದನ್ನೂ ಓದಿ: ಟೆಕ್ಸಾಸ್ ಶೂಟೌಟ್; ಮಕ್ಕಳು ಬೇಡಿ ಕೊಳ್ಳುತ್ತಿದ್ದರೂ 45 ನಿಮಿಷ ಹೊರಗೇ ನಿಂತಿದ್ದರು ಪೊಲೀಸ್