Site icon Vistara News

ಗಗನಸಖಿ ಪೆಟ್ಟಿಗೆ ಕರಗಿತು ವಿಶ್ವದ ಕುಬೇರನ $10 ಬಿಲಿಯನ್‌ ಆಸ್ತಿ

ಕ್ಯಾಲಿಫೋರ್ನಿಯಾ:ಲೈಂಗಿಕ ಕಿರುಕುಳ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ವಿಶ್ವದ ಕುಬೇರ, ಟೆಸ್ಲಾ ವ್ಯವಸ್ಥಾಪಕ, ಸಿಇಒ ಎಲಾನ್‌ ಮಸ್ಕ್‌ ಒಂದು ದಿನದಲ್ಲೇ 10 ಬಿಲಿಯನ್‌ ಯುಎಸ್‌ ಡಾಲರ್‌(77,595 ಕೋಟಿ ರೂ.) ಕಳೆದುಕೊಂಡಿದ್ದಾರೆ.

ಬ್ಲೂಮ್‌ಮರ್ಗ್‌ ಬಿಲಿಯನೇರ್ಸ್ ಇಂಡೆಕ್ಸ್‌ ಪ್ರಕಾರ ವಿಶ್ವ ಕುಬೇರನ ನಿಖರ ನಿವ್ವಳ ಆಸ್ತಿ $212 ಬಿಲಿಯನ್‌ ಇತ್ತು. ಇದೀಗ ಅವರ ಆಸ್ತಿ $201 ಬಿಲಿಯನ್‌ಗೆ ಇಳಿದಿದ್ದು, ಈಗಲೂ ಪ್ರಪಂಚದ ಅತ್ಯಂತ ಶ್ರೀಮಂತರಾಗಿಯೇ ಇದ್ದಾರೆ. ಆದರೂ ಸ್ಪೇಸ್ ಎಕ್ಸ್‌ ಸಂಸ್ಥೆಯ ಕಾರ್ಪೋರೇಟ್‌ ಜೆಟ್‌ನಲ್ಲಿ ಗಗನಸಖಿಯೊಂದಿಗೆ ಅಸಭ್ಯಕರವಾಗಿ ವರ್ತಿಸಿದ್ದಾರೆ ಎಂಬ ಆರೋಪ ಮಸ್ಕ್‌ ವಿರುದ್ಧ ಕೇಳಿಬಂದಿತ್ತು. ಈ ಬಗ್ಗೆ ಇಂಗ್ಲಿಷ್‌ ಮಾಧ್ಯಮದಲ್ಲಿ ವರದಿ ಪ್ರಕಟವಾಗಿತ್ತು. ಈ ಪ್ರಕರಣದಲ್ಲಿ ಗಗನಸಖಿ ನ್ಯಾಯ ಹೋರಾಟಕ್ಕೂ ಸಿದ್ಧವಾಗಿದ್ದಳು. ಆದರೆ ಸ್ಪೇಸ್‌ಎಕ್ಸ್‌ ಈ ವಿಷಯ ಬಹಿರಂಗಪಡಿಸದಿರಲು ಆಕೆಗೆ 2018ರಲ್ಲಿ $2.5 ಲಕ್ಷ ನೀಡಲಾಗಿತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಇದೆಲ್ಲಾ ತನ್ನ ವಿರುದ್ಧ ದುರುದ್ದೇಶದಿಂದ ಮಾಡಲಾದ ಆರೋಪ ಎಂದು ಮಸ್ಕ್‌ ಪ್ರತಿ ಆರೋಪ ಮಾಡಿದ್ದಾರೆ. ಆದರೆ ಈ ವಿಷಯ ಬಹಿರಂಗ ಆಗುತ್ತಿದ್ದಂತೆ ಅತ್ಯಂತ ಶ್ರೀಮಂತ ವ್ಯಕ್ತಿಯ ಸಂಪತ್ತು ಮಂಜುಗಡ್ಡೆಯಂತೆ ಕರಗಿಹೋಗುತ್ತಿದೆ. ಕಳೆದ ತಿಂಗಳಿನಲ್ಲಿ ಮೈಕ್ರೋಬ್ಲಾಗಿಂಗ್‌ ಸೈಟ್‌ ಟ್ವಿಟರ್‌ ಅನ್ನು $44 ಬಿಲಿಯನ್‌ಗೆ(3.36 ಲಕ್ಷ ಕೋಟಿ ರೂ.) ಖರೀದಿಸಲು ಮಸ್ಕ್‌ ಒಪ್ಪಂದ ಮಾಡಿಕೊಂಡಿದ್ದರು. ಪ್ರಸ್ತುತ ತಾತ್ಕಾಲಿಕವಾಗಿ ಈ ಒಪ್ಪಂದವನ್ನು ನಿಲ್ಲಿಸಿದ್ದಾರೆ. ಸ್ಪಾಮ್‌, ಫೇಕ್‌ ಅಕೌಂಟ್‌ಗಳ ಕಾರಣದಿಂದಲೇ ಒಪ್ಪಂದಕ್ಕೆ ಬ್ರೇಕ್‌ ನೀಡಲಾಗಿದೆ ಎಂದು ಮಸ್ಕ್‌ ತಿಳಿಸಿದ್ದಾರೆ.

Exit mobile version