Site icon Vistara News

Russia Ukraine War | ಉಕ್ರೇನ್‌ನ ನಗರಗಳ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ, ಕಗ್ಗತ್ತಲಿನತ್ತ ಕೀವ್‌, ಲ್ವಿವ್‌ ನಗರಗಳು

Russia Ukraine War

ಕೀವ್‌: ಕಳೆದ ಫೆಬ್ರವರಿಯಿಂದಲೇ ಉಕ್ರೇನ್‌ನಲ್ಲಿ ರಕ್ತಪಿಪಾಸುತನ ಮೆರೆಯುತ್ತಿರುವ ರಷ್ಯಾದ ಕ್ರೌರ್ಯಕ್ಕೆ ಎಣೆಯೇ ಇಲ್ಲದಂತಾಗಿದೆ. ಈಗಾಗಲೇ ಸತತ ದಾಳಿಗಳಿಂದ ಬಸವಳಿದಿರುವ ಉಕ್ರೇನ್‌ ಮೇಲೆ ರಷ್ಯಾ (Russia Ukraine War) 120 ಕ್ಷಿಪಣಿಗಳ ದಾಳಿ ಮಾಡುವ ಮೂಲಕ ಇಡೀ ದೇಶವನ್ನು ಬೆಚ್ಚಿಬೀಳಿಸಿದೆ.

ಉಕ್ರೇನ್‌ ರಾಜಧಾನಿ ಕೀವ್‌, ಕಾರ್ಖೀವ್‌, ಜಿಟೋಮಿರ್‌, ಲ್ವಿವ್‌ ಹಾಗೂ ಒಡೇಸಾ ಸೇರಿ ಹಲವು ನಗರಗಳ ಮೇಲೆ ನೂರಾರು ಕ್ಷಿಪಣಿಗಳ ದಾಳಿ ನಡೆದಿದೆ. ಕ್ಷಿಪಣಿ ದಾಳಿಗಳಿಂದಾಗಿ ನಗರಗಳು ಮಸಣದಂತಾಗಿದ್ದು, ವಿದ್ಯುತ್‌ ಕೊರತೆಯಿಂದ ಜನ ಪರದಾಡುವಂತಾಗಿದೆ. ಕ್ಷಿಪಣಿಗಳ ದಾಳಿಯಿಂದ ಅಪಾರ ಸಾವು-ನೋವು ಸಂಭವಿಸಿದ್ದು, ನಿಖರ ಮಾಹಿತಿ ಮಾತ್ರ ಲಭ್ಯವಾಗಿಲ್ಲ.

ಕಗ್ಗತ್ತಲಿನತ್ತ ಉಕ್ರೇನ್‌
ನೂರಾರು ಕ್ಷಿಪಣಿಗಳ ಏಕಾಏಕಿ ದಾಳಿಯಿಂದಾಗಿ ಉಕ್ರೇನ್‌ ಕಗ್ಗತ್ತಲಿನತ್ತ ಸಾಗುತ್ತಿದೆ. ರಾಜಧಾನಿ ಕೀವ್‌ನಲ್ಲಿ ಶೇ.40ರಷ್ಟು ಜನ ವಿದ್ಯುತ್‌ ಸಂಪರ್ಕ ಇಲ್ಲದೆ ಕಷ್ಟ ಅನುಭವಿಸುತ್ತಿದ್ದಾರೆ. ಇನ್ನು ಲ್ವಿವ್‌ ನಗರದಲ್ಲಂತೂ ಶೇ.90ರಷ್ಟು ಜನರಿಗೆ ವಿದ್ಯುತ್‌ ಪೂರೈಕೆ ಇಲ್ಲ. ಒಡೇಸಾದಲ್ಲೂ ವಿದ್ಯುತ್‌ ಸಂಪರ್ಕ ಕಡಿತವಾಗಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ | Ukraine Thanks India | ಮೋದಿ, ಜೆಲೆನ್‌ಸ್ಕಿ ಮಾತುಕತೆ, ನೆರವು ನೀಡಿದ ಕಾರಣ ಭಾರತಕ್ಕೆ ಧನ್ಯವಾದ ಹೇಳಿದ ಉಕ್ರೇನ್‌ ಅಧ್ಯಕ್ಷ

Exit mobile version