ಚೀನಾ:ಈಗಾಗಲೇ ಕೊರೊನಾ ಸಂಖ್ಯೆ ಹೆಚ್ಚಿದ ಹಿನ್ನಲೆಯಲ್ಲಿ ಶಾಂಘೈ ಸಂಪೂರ್ಣ ಲಾಕ್‌ಡೌನ್ ಮಾಡಲಾಗಿದೆ ಹಾಗೂ ಯಾರೂ ಮನೆಯಿಂದ ಹೊರಬರದಂತೆ ಸೂಚನೆ ನೀಡಲಾಗಿದೆ. ಆದರೆ, ಈಗ ಪತಿ-ಪತ್ನಿ ಕೂಡ ಒಟ್ಟಿಗೆ ಮಲಗುವಂತಿಲ್ಲ ಎಂದು ಮತ್ತೊಂದು ಹೊಸ ನಿರ್ಭಂಧ ಹೇರಲಾಗಿದೆ. ಕೊರೊನಾ ಭೀತಿಯಲ್ಲಿ ಶಾಂಘೈ ನಿವಾಸಿಗಳು ಜೀವನ ಅತಂತ್ರವಾಗಿದೆ. ಅಲ್ಲಿಯ ಜನಸಾಮಾನ್ಯರು ದಿನ ನಿತ್ಯದ ಬಳಕೆಗೆ ಅಗತ್ಯ ವಸ್ತುಗಳ ಕೊರತೆಯಿದ್ದು, ಈ ಕುರಿತು ಜನರು ಪ್ರತಿಭಟಿಸಿದ್ದರು.
ಈ ಪ್ರತಿಭಟನೆಗೆ ಪ್ರತಿಕ್ರಿಯಿಸಿ, ಶಾಂಘೈನಲ್ಲಿ ಡ್ರೋನ್ ಮೂಲಕ ʼಈಗ ಕೋವಿಡ್ ಸೊಂಕು ಹೆಚ್ಚುತ್ತಿದೆ ಹಾಗಾಗಿ ಕಠಿಣ ನಿಯಮಗಳನ್ನು ಜಾರಿ ಗೊಳಿಸಲಾಗಿದೆ. ಇದಕ್ಕೆ ಎಲ್ಲರೂ ಸಹಕರಿಸಬೆಕು ಹಾಗೂ ನಿಮ್ಮ ಬಯಕೆಗಳನ್ನು ನಿಯಂತ್ರಣಗೊಳಿಸಿʼ ಎಂದು ಘೊಷಣೆ ಕೂಗಲಾಗಿತ್ತು. ಅಲ್ಲದೆ, ʼಇಂದಿನಿಂದ ಪತಿ-ಪತ್ನಿ ಕೂಡ ಒಟ್ಟಿಗೆ ಮಲಗುವಂತಿಲ್ಲ, ಪರಸ್ಪರ ಚುಂಬಿಸುವಂತಿಲ್ಲ, ಹಾಗೂ ಒಟ್ಟಿಗೆ ಆಹಾರ ಸೇವನೆ ಮಾಡುವಂತಿಲ್ಲ ಎಂದು ಘೋಷಣೆ ಕೂಗಲಾಗಿತ್ತು.
ಮತ್ತಷ್ಟು ಓದು: ಮುಂಬೈಯಲ್ಲಿ ಕೊರೋನ ಹೊಸ ರೂಪಾಂತರಿ ಪತ್ತೆ!: ಮಹಿಳೆಯಲ್ಲಿ ಕಾಣಿಸಿಕೊಂಡ XE
ಈ ಹಿಂದೆ, ಶಾಂಘೈನಲ್ಲಿ ರೋಬೋಟ್‌ಗಳು ಆರೋಗ್ಯದ ಕುರಿತು ಅರಿವು ಮೂಡಿಸುವಂತಹ ಮಾಹಿತಿಗಳನ್ನು ನೀಡುತ್ತಿದ್ದ ವಿಡಿಯೋ ಸಾಮಾಸಿಕ ಜಾಲತಾನದಲ್ಲಿ ವೈರಲ್ ಆಗಿತ್ತು. ಈಗ ಶಾಂಘೈನಲ್ಲಿ ಕೊರೊನಾ ಸಂಖ್ಯೆ ಕಡಿಮೆಯಾಗುತ್ತಿದ್ದರೂ ವಿಶ್ವದಲ್ಲಿ ಅತೀ ಹೆಚ್ಚು ಸೋಂಕು ಪೀಡಿತ ಪ್ರದೇಶವಾಗಿದೆ. ಹಾಗಾಗಿ ಕೊರೊನ ಸೋಂಕು ಹತೋಟಿಗೆ ತರುವ ಉದ್ದೇಶದಿಂದ ಕಠಿಣ ಲಾಕ್‌ಡೌನ್ ನಿಯಮಗಳನ್ನು ಜಾರಿಗೊಳಿಸಲಾಗಿದೆ.
ಈ ಹಿನ್ನಲೆಯಲ್ಲಿ ಮಾತನಾಡಿದ ಶಾಂಘೈ ಉಪ ಮೇಯರ್ ಚೆನ್ ಟಾಂಗ್ ʼಶಾಂಘೈನಲ್ಲಿ ಸರ್ವರಿಗೂ ಸಾಕಾಗುವಷ್ಟು ಟಗತ್ಯ ವಸ್ತುಗಳ ಸಂಗ್ರಹವಿದೆ ಆದರೆ ಕಠಿಣ ನಿಯಮಗಳಿಂದ ತಲುಪಿಸಲು ತೊಡಕು ಉಂಟಾಗುತ್ತಿದೆʼ ಎಂದು ಹೆಳಿದರು. ಸದ್ಯದಲ್ಲೆ, ಕೆಲವು ಆಹಾರ ಅಂಗಡಿಗಳು ಹಾಗೂ ಅಗತ್ಯ ವಸ್ತುಗಳ ಮಾರುಕಟ್ಟೆಯನ್ನು ತೆರೆಯಲಾಗುವುದು ಎಂದು ತಿಳಿಸಿದರು. ಕೊರೊನಾ ಸೋಂಕು ಹರಡದಂತೆ ತಡೆಯುವ ನಿಟ್ಟಿನಲ್ಲಿ ಜಾರಿ ಗೊಳಿಸಿದ ಕಠಿಣ ನಿಯಮಗಳ ಪರಿಣಾಮವಾಗಿ ಚೀನಾದ ಆರ್ಥಿಕ ಕೇಂದ್ರ ದೊಡ್ಡ ಮಟ್ಟದಲ್ಲಿ ಕುಸಿದಿದೆ.
ಮತ್ತಷ್ಟು ಓದು: ಭಾರತದ ಸುತ್ತ ಚೀನಾ ಸಾಲದ ಸುಳಿ: ಭೌಗೋಳಿಕ ರಾಜಕೀಯ ಹಿಡಿತಕ್ಕೆ ಹೊಸ ಮಾರ್ಗ