ಢಾಕಾ: ಕೆನಡಾದಲ್ಲಿ ಖಲಿಸ್ತಾನಿ ಉಗ್ರರು ಹಿಂದು ದೇವಾಲಯಗಳನ್ನು ಧ್ವಂಸಗೊಳಿಸಿದ ಬೆನ್ನಲ್ಲೇ ಬಾಂಗ್ಲಾದೇಶದಲ್ಲೂ ಮೂಲಭೂತವಾದಿಗಳು ಒಂದೇ ದಿನ ೧೪ ಹಿಂದು ದೇವಾಲಯಗಳನ್ನು (Hindu Temples Vandalised) ಧ್ವಂಸಗೊಳಿಸಿದ್ದಾರೆ.
“ಠಾಕೂರ್‌ಗಾಂವ್ ಜಿಲ್ಲೆಯ ಹಲವೆಡೆ ದೇವಾಲಯಗಳಿಗೆ ಹತ್ತಾರು ದುಷ್ಕರ್ಮಿಗಳು ನುಗ್ಗಿದ್ದು, ದೇವಾಲಯಗಳಲ್ಲಿರುವ ಮೂರ್ತಿಗಳನ್ನು ಧ್ವಂಸಗೊಳಿಸಿದ್ದಾರೆ. ದಂಟಾಲಿಯಾ, ಪಾರಿಯಾ ಹಾಗೂ ಚಾರುಲ್ ಸೇರಿ ಹಲವೆಡೆ ದೇವಾಲಯಗಳಿಗೆ ನುಗ್ಗಿ ಧ್ವಂಸಗೊಳಿಸಲಾಗಿದೆ” ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಹಿಂದು ದೇವಾಲಯಗಳ ಮೇಲೆ ದಾಳಿ ಮಾಡಿರುವುದನ್ನು ಹಿಂದು ಸಂಘಟನೆಗಳು ಖಂಡಿಸಿವೆ. ಅಲ್ಲದೆ, ಹಲವೆಡೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದು, ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Temple Defaced : ಕೆನಡಾದ ದೇಗುಲವನ್ನು ವಿರೂಪಗೊಳಿಸಿದ ಖಲಿಸ್ತಾನಿ ಉಗ್ರರು