ವಾಷಿಂಗ್ಟನ್: ಟ್ವಿಟರ್ ಬೆನ್ನಲ್ಲೇ ಫೇಸ್‌ಬುಕ್ ಮಾತೃಸಂಸ್ಥೆ ಮೆಟಾ ಕೂಡ ಒಟ್ಟು ಉದ್ಯೋಗಿಗಳ ಪೈಕಿ ಶೇ.13ರಷ್ಟು ಅಂದರೆ, 11 ಸಾವಿರ ನೌಕರರನ್ನು (Meta Layoff) ವಜಾಗೊಳಿಸಿದೆ. ಇದರ ಬೆನ್ನಲ್ಲೇ ವಜಾಗೊಂಡಿರುವ ನೌಕರರ ಪರಿಸ್ಥಿತಿ ಬಗ್ಗೆ ಮರುಕ ವ್ಯಕ್ತಪಡಿಸಿರುವ ಮಾರ್ಕ್ ಜುಕರ್‌ಬರ್ಗ್, ಅವರಿಗೆ ಹತ್ತಾರು ವಿಶೇಷ ಸೌಲಭ್ಯಗಳನ್ನು ಘೋಷಿಸಿದ್ದಾರೆ. ಪ್ರಮುಖ ಸೌಲಭ್ಯಗಳು ಹೀಗಿವೆ…
ವಜಾಗೊಂಡ ನೌಕರರಿಗೆ ಸಿಗಲಿರುವ ಸೌಲಭ್ಯಗಳು ಹೀಗಿವೆ…
| ಪ್ರತಿಯೊಬ್ಬ ನೌಕರನಿಗೂ 16 ವಾರ ಅಂದರೆ, ನಾಲ್ಕು ತಿಂಗಳ ಮೂಲ ವೇತನ (ಬೇಸಿಕ್ ಪೇ) ಸಿಗಲಿದೆ
| ಪೇಡ್ ಟೈಮ್ ಆಫ್ (Paid Time Off-PTO) ಸೇರಿ ನ.15ರೊಳಗೆ ಎಲ್ಲ ಮೊತ್ತ (Final Settlement) ಪಾವತಿ
| ವಜಾಗೊಂಡ ನೌಕರ ಹಾಗೂ ಆತನ ಕುಟುಂಬಸ್ಥರಿಗೆ ಆರು ತಿಂಗಳವರೆಗೆ ಹೆಲ್ತ್ ಇನ್ಶುರೆನ್ಸ್ ಲಭ್ಯ
| ಗೇಟ್ ಪೇಸ್ ನೀಡಿದ ಉದ್ಯೋಗಿಗಳಿಗೆ ಮೂರು ತಿಂಗಳವರೆಗೆ ಹಲವು ರೀತಿಯಲ್ಲಿ ಕರಿಯರ್ ಸಪೋರ್ಟ್
| ಬೇರೆ ದೇಶದಿಂದ ಬಂದು, ವೀಸಾ ಪಡೆದು ನೆಲೆಸಿರುವವರಿಗೆ ವಿಶೇಷ ನೋಟಿಸ್ ಪೀರಿಯಡ್
| ವೀಸಾ ಗ್ರೇಸ್ ಅವಧಿ ಇರಲಿದೆ, ವಲಸೆ ಸೇರಿ ಹಲವು ವಿಷಯಗಳ ಕುರಿತು ತಜ್ಞರ ತಂಡದಿಂದ ನೆರವು
ಇದನ್ನೂ ಓದಿ | ಫೇಸ್‌ಬುಕ್ ಮಾತೃಸಂಸ್ಥೆ ಮೆಟಾದಲ್ಲಿ 11 ಸಾವಿರ ಉದ್ಯೋಗಿಗಳ ವಜಾಗೊಳಿಸಲು ನಿರ್ಧಾರ; Sorry ಎಂದ ಮಾರ್ಕ್ ಜುಕರ್‌ಬರ್ಗ್