ಡಮಾಸ್ಕಸ್: ಸಿರಿಯಾ ಸೈನಿಕರ ಮೇಲೆ ಉಗ್ರರು ಬಾಂಬ್ ದಾಳಿ (Syria Attack) ನಡೆಸಿದ್ದು, ೧೮ ಯೋಧರು ಮೃತಪಟ್ಟರೆ, ೨೭ ಸೈನಿಕರಿಗೆ ಗಾಯಗಳಾಗಿವೆ. ಸಿರಿಯಾ ರಾಜಧಾನಿ ಡೆಮಾಸ್ಕಸ್ ಬಳಿ ಮಿಲಿಟರಿ ಬಸ್ ಮೇಲೆ ಬಾಂಬ್ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.
“ಡೆಮಾಸ್ಕಸ್ ಬಳಿ ಮಿಲಿಟರಿ ವಾಹನ ತೆರಳುವ ಮಾರ್ಗದಲ್ಲಿ ಸ್ಫೋಟಕ ಅಡಗಿಸಿಟ್ಟು, ವಾಹನ ತೆರಳುವಾಗ ಸ್ಫೋಟಿಸಲಾಗಿದೆ. ಇದರಿಂದ ೧೮ ಯೋಧರು ಮೃತಪಟ್ಟಿದ್ದಾರೆ. ಇದುವರೆಗೆ ಯಾವುದೇ ಉಗ್ರ ಸಂಘಟನೆಯು ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಜಿಹಾದಿಸ್ಟ್ ಉಗ್ರ ಸಂಘಟನೆಯು ಇದರ ಹಿಂದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ” ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
೨೦೧೧ರಿಂದಲೂ ಸಿರಿಯಾದಲ್ಲಿ ಸೈನಿಕರು ಹಾಗೂ ಉಗ್ರರ ಮಧ್ಯೆ ಯುದ್ಧಾರಂಭವಾಗಿದೆ. ಉಗ್ರರ ದಾಳಿಯಿಂದಾಗಿ ಸುಮಾರು ೫೦ ಲಕ್ಷ ಜನ ಇದುವರೆಗೆ ನಿರಾಶ್ರಿತರಾಗಿದ್ದಾರೆ. ಹಾಗೆಯೇ, ಕಳೆದ ೧೧ ವರ್ಷಗಳಲ್ಲಿ ಹಲವು ಬಾರಿ ಸೈನಿಕರ ಮೇಲೆ ದಾಳಿ ನಡೆದಿವೆ. ಕಳೆದ ಜೂನ್‌ನಲ್ಲಷ್ಟೇ ಸೈನಿಕರ ಮೇಲೆ ಉಗ್ರರು ದಾಳಿ ನಡೆಸಿದ್ದರು. ದಾಳಿಯಲ್ಲಿ ೧೩ ಯೋಧರು ಮೃತಪಟ್ಟಿದ್ದರು.
ಇದನ್ನೂ ಓದಿ | ಬೆಂಗಳೂರು ಶಾಲೆ ಬಾಂಬ್ ಬೆದರಿಕೆ ಪ್ರಕರಣ: ಸಿರಿಯಾ, ಪಾಕಿಸ್ತಾನದಿಂದ ಇಮೇಲ್ ಶಂಕೆ