Site icon Vistara News

ಫ್ರಾನ್ಸ್‌ನಲ್ಲಿ ಏರ್‌ ಶೋ ವೇಳೆ ಎರಡು ರಫೇಲ್‌ ವಿಮಾನಗಳ ಡಿಕ್ಕಿ!

ರಫೇಲ್‌

ಕೊಗ್ನಾಕ್: ಫ್ರಾನ್ಸ್‌ನಲ್ಲಿ ನಡೆದ ಏರ್‌ ಶೋ ವೇಳೆ ಎರಡು ರಫೇಲ್‌ ವಿಮಾನಗಳು ಒಂದಕ್ಕೊಂದು ಡಿಕ್ಕಿ ಹೊಡೆದಿದೆ. ಎರಡು ವಿಮಾನಗಳು ಆಕಾಶದಲ್ಲಿ ಕಸರತ್ತು ನಡೆಸುತ್ತಿರುವಾಗ ಈ ಅವಘಡ ಸಂಭವಿಸಿ, ವೀಕ್ಷಕರಲ್ಲಿ ಆತಂಕ ಉಂಟುಮಾಡಿತ್ತು. ಆದರೆ, ಈ ಅಪಘಾತದಲ್ಲಿ ಯಾವುದೇ ಜೀವಹಾನಿಯಾಗಿಲ್ಲ. ಈ ವಿಡಿಯೋ ಈಗ ಎಲ್ಲೆಡೆ ವೈರಲ್‌ ಆಗಿದೆ.

ಫ್ರಾನ್ಸ್‌ನ ಕೊಗ್ನಾಕ್‌ ಪ್ರದೇಶದಲ್ಲಿ ಏರ್‌ ಶೋ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ವಾಯುಪಡೆಯ ಎರಡು ರಫೇಲ್‌ ವಿಮಾನಗಳು ತೀರ ಹತ್ತಿರಕ್ಕೆ ಬಂದು ಒಂದಕ್ಕೊಂದು ಉಜ್ಜಿಕೊಂಡು ಹೋದವು ಎಂದು ಕರ್ನಲ್‌ ನಿಕೊಲಸ್‌ ಲಿಯೊಟ್‌ ಮಾಹಿತಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಒಂದು ವಿಮಾನದ ಟೇಲ್‌ಫಿನ್‌ ಕಳಚಿ ಬಿದ್ದಿದೆ ಹಾಗೂ ವಿವಿಧ ಭಾಗಗಳು ಹಾನಿಯಾಗಿವೆ. ಸ್ಥಳೀಯ ಪ್ರದೇಶದ ಒಂದು ಮನೆಗೆ ಕೂಡ ಈ ಅಪಘಾತದಿಂದ ಹಾನಿ ಉಂಟಾಗಿದೆ.

ಕಳಚಿ ಬಿದ್ದರುವ ಟೇಲ್‌ಫಿನ್

ಆದರೆ ಅಂತಿಮವಾಗಿ ಎರಡೂ ವಿಮಾನಗಳು ಸುರಕ್ಷಿತವಾಗಿ ಭೂಸ್ಪರ್ಶ ಮಾಡುವಲ್ಲಿ ಯಶಸ್ವಿಯಾಗಿವೆ. ಪೈಲಟ್‌ ಗಳು ಆಶ್ಚರ್ಯಕರ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ:ಜಪಾನ್‌ನಿಂದ ಹಿಂದಿರುಗಿದ ತಕ್ಷಣ ತುರ್ತು ಸಚಿವ ಸಂಪುಟ ಸಭೆ ನಡೆಸಿದ ಪ್ರಧಾನಿ ಮೋದಿ

Exit mobile version