Site icon Vistara News

Viral News: 85ರ ವ್ಯಕ್ತಿಯನ್ನು ಮದುವೆಯಾದ 24 ವರ್ಷದ ಯುವತಿ, ಮದುವೆಯ ಫೋಟೊಗಳು ವೈರಲ್

US Marriage

#image_title

ವಾಷಿಂಗ್ಟನ್‌: ಸಾಮಾನ್ಯವಾಗಿ ಮದುವೆಯಾಗುವ ವರ ಹಾಗೂ ವಧುವಿನ ವಯಸ್ಸಿನ ಅಂತರ ೨-೩ ವರ್ಷ ಇದ್ದರೆ ಉತ್ತಮ ಎಂಬ ಮಾತಿದೆ. ಕೆಲವೊಂದು ಸಲ ವಧುವೇ ವರನಿಗಿಂತ ಒಂದೆರಡು ವರ್ಷ ಹಿರಿಯವಳಾಗಿರುತ್ತಾಳೆ. ಆಗ, ಒಂದೆರಡು ವರ್ಷ ಅಂತರ ಸಾಮಾನ್ಯ ಎಂಬ ಮಾತುಗಳು ಕೇಳಿಬರುತ್ತವೆ. ಆದರೆ, ಅಮೆರಿಕದಲ್ಲಿ ಮದುವೆಯಾದ ವಧು ಹಾಗೂ ವರನ ನಡುವೆ ೬೧ ವರ್ಷ ಅಂತರವಿದೆ. ಆದರೂ, ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದು, ಮದುವೆಯಾದ ಫೋಟೊಗಳು ವೈರಲ್‌ (Viral News) ಆಗಿವೆ.

ಹೌದು, ೨೪ ವರ್ಷದ ಯುವತಿಯು ೮೫ ವರ್ಷದ ವ್ಯಕ್ತಿಯನ್ನು ಮದುವೆಯಾಗುವ ಮೂಲಕ ಪ್ರೀತಿಗೆ ಕಣ್ಣಿಲ್ಲ, ವಯಸ್ಸಿನ ಹಂಗಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ಬಟ್ಟೆ ತೊಳೆಯುವ ಕೆಲಸದಲ್ಲಿದ್ದ ಮಿರಾಕಲ್‌ ಪೋಗ್‌ಳನ್ನು ಚಾರ್ಲ್ಸ್‌ ಪೋಗ್‌ ೨೦೧೯ರಲ್ಲಿ ಭೇಟಿಯಾದರು. ಭೇಟಿ ಸ್ನೇಹಕ್ಕೆ ತಿರುಗಿತು, ಸ್ನೇಹ ಪ್ರೀತಿಗೆ ತಿರುಗಿ, ಈಗ ಇಬ್ಬರೂ ಮದುವೆಯಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

“ನಾವಿಬ್ಬರೂ ಭೇಟಿಯಾದಾಗ ಯಾವುದೇ ಭಾವನೆ ಇರಲಿಲ್ಲ. ಆದರೆ, ಚಾರ್ಲ್ಸ್‌ ಅವರು ದಿನ ಕಳೆದಂತೆ ಹತ್ತಿರವಾದರು. ನನ್ನಲ್ಲೊಂದು ವಿನೀತ ಭಾವ ಮೂಡಿಸಿದರು. ಅವರ ಜತೆ ಇದ್ದರೆ ನಾನು ಖುಷಿಯಿಂದ ಇರುತ್ತೇನೆ ಎಂದು ಅನಿಸಿತು. ಹಾಗಾಗಿ, ವಯಸ್ಸಿನ ಹಂಗು ತೊರೆದು ಮದುವೆಯಾದೆ” ಎಂದು ಮಿರಾಕಲ್‌ ಹೇಳಿದ್ದಾರೆ. ಅಂದಹಾಗೆ, ಮಿರಾಕಲ್‌ನ ಅಜ್ಜನಿಗಿಂತ ಆಕೆಯ ಗಂಡ ಚಾರ್ಲ್ಸ್‌ ಹಿರಿಯ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Viral Video: ಇದು ಬಾಲ್‌ ಬ್ಯಾಲೆನ್ಸಿಂಗ್‌ ಡಾಗ್‌, ಹೇಗಿದೆ ನೋಡಿ ವೈರಲ್‌ ವಿಡಿಯೊ

Exit mobile version