Site icon Vistara News

Turkey Earthquake: ಟರ್ಕಿಯಲ್ಲಿ 24 ಗಂಟೆಯೊಳಗೆ 3ನೇ ಪ್ರಬಲ ಭೂಕಂಪ, 2,400 ದಾಟಿದ ಸಾವಿನ ಸಂಖ್ಯೆ

Turkey Earthquakes

#image_title

ಇಸ್ತಾಂಬುಲ್‌: ಶತಮಾನ ಕಂಡ ಭೂಕಂಪಗಳಿಗೆ ಟರ್ಕಿ ಹಾಗೂ ಸಿರಿಯಾ (Turkey Earthquake) ನಲುಗಿಹೋಗಿವೆ. ನಗರಗಳ ತುಂಬ ಕಟ್ಟಡಗಳು ಕುಸಿದು ಊರಿಗೆ ಊರುಗಳೇ ಮಸಣದಂತಾಗಿವೆ. ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿದ ಜನರನ್ನು ರಕ್ಷಿಸಲು ಭದ್ರತಾ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಕೇವಲ ೨೪ ಗಂಟೆಯಲ್ಲಿ ಮೂರು ಬಾರಿ ಪ್ರಬಲ ಭೂಕಂಪ ಸಂಭವಿಸಿದ ಕಾರಣ ಮೃತರ ಸಂಖ್ಯೆ ೨,೪೦೦ ದಾಟಿದ್ದು, ಇನ್ನೂ ಸಾವಿನ ಸಂಖ್ಯೆ ಜಾಸ್ತಿಯಾಗುವ ಎಲ್ಲ ಲಕ್ಷಣಗಳು ಗೋಚರಿಸಿವೆ.

ಸೋಮವಾರ ಬೆಳಗಿನ ಜಾವ ಸಂಭವಿಸಿದ ಭೂಕಂಪದ ಪ್ರಮಾಣವು ರಿಕ್ಟರ್‌ ಮಾಪನದಲ್ಲಿ ೭.೮ ತೀವ್ರತೆಯ ದಾಖಲಾಗಿತ್ತು. ಸಂಜೆ ೭.೫ ತೀವ್ರತೆಯ ಭೂಕಂಪ ದಾಖಲಾಗಿತ್ತು. ಇದರ ಬೆನ್ನಲ್ಲೇ, ಸೋಮವಾರ ರಾತ್ರಿಯೂ ಪ್ರಬಲ ಭೂಕಂಪ ಸಂಭವಿಸಿದೆ. ಇದರಿಂದಾಗಿ ಟರ್ಕಿಯಲ್ಲಿ ೧,೫೦೦ಕ್ಕೂ ಹೆಚ್ಚು ಜನ ಮೃತಪಟ್ಟರೆ, ಸಿರಿಯಾದಲ್ಲಿ ೯೦೦ಕ್ಕೂ ಅಧಿಕ ಜನ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಟರ್ಕಿ ಹಾಗೂ ಸಿರಿಯಾದ ಪ್ರಮುಖ ನಗರಗಳಲ್ಲಿ ಸಾಲು ಸಾಲು ಕಟ್ಟಡಗಳು ಕುಸಿದಿದ್ದು, ಜನರ ರಕ್ಷಣೆ ಕಷ್ಟವಾಗುತ್ತಿದೆ. ಅದರಲ್ಲೂ, ಒಂದಾದ ಮೇಲೆ ಒಂದು ಭೂಕಂಪ ಸಂಭವಿಸುತ್ತಿರುವ ಕಾರಣ ಗಾಯಾಳುಗಳ ಸಂಖ್ಯೆಯೂ ಇನ್ನಿಲ್ಲದಂತೆ ಏರಿಕೆಯಾಗುತ್ತಿದೆ. ಹಾಗಾಗಿ, ಸಾವಿನ ಸಂಖ್ಯೆಯೂ ಜಾಸ್ತಿಯಾಗಲಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: Turkey Earthquake: ಟರ್ಕಿಯಲ್ಲಿ ಎರಡನೇ ಬಾರಿಗೆ ಕಂಪಿಸಿದ ಭೂಮಿ, ಮೃತರ ಸಂಖ್ಯೆ 1800ಕ್ಕೆ ಏರಿಕೆ

Exit mobile version