Site icon Vistara News

Pakistan: ದೇಗುಲ ಧ್ವಂಸ ಬೆನ್ನಲ್ಲೇ 30 ಪಾಕ್ ಹಿಂದೂಗಳ ಅಪಹರಣ! ನೆರವಿಗೆ ಮನವಿ ಮಾಡಿದ ಆಯೋಗ

Kidnap

ಇಸ್ಲಾಮಾಬಾದ್, ಪಾಕಿಸ್ತಾನ: ನೆರೆಯ ಪಾಕಿಸ್ತಾನದ (Pakistan) ಸಿಂಧ್ (Sindh) ಪ್ರಾಂತದಲ್ಲಿ ಡಕಾಯಿತ ತಂಡವೊಂದು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 30 ಹಿಂದೂಗಳನ್ನು (Hindus) ಒತ್ತೆಯಾಳುಗಳನ್ನಾಗಿಸಿಕೊಂಡಿದೆ ಎಂದು ಪಾಕಿಸ್ತಾದ ಮಾನವ ಹಕ್ಕಗಳು ಆಯೋಗ(Human Rights Commission of Pakistan – HRCP) ಹೇಳಿದೆ. ಸಿಂಧ್‌ನ ಕಾಶ್ಮೋರ್ ಮತ್ತು ಘೋಟ್ಕಿ ಜಿಲ್ಲೆಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿರುವ ವರದಿಗಳಿಂದ ಎಚ್‌ಆರ್‌ಸಿಪಿ ಆತಂಕಕ್ಕೊಳಗಾಗಿದೆ. ಮಹಿಳೆಯರು, ಮಕ್ಕಳು ಸೇರಿದಂತೆ ಅಲ್ಲಿನ ಸುಮಾರು 30 ಹಿಂದೂ ಸಮುದಾಯದವರನ್ನು ಸಂಘಟಿತ ಕ್ರಿಮಿನಲ್ ಗ್ಯಾಂಗ್‌ ಒತ್ತೆಯಾಳುಗಳನ್ನಾಗಿಸಿಕೊಂಡಿದೆ ಎಂದು ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗ ಟ್ವೀಟ್ ಮಾಡಿದೆ.

ಈ ಗ್ಯಾಂಗ್‌ಗಳು ಹಿಂದೂಗಳ ದೇವಾಲಯಗಳು ಮೇಲೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿವೆ. ಸಿಂಧ್ ಪ್ರಾಂತ್ಯದ ಗೃಹ ಇಲಾಖೆಯು ಕೂಡಲೇ ಈ ಕುರಿತು ತನಿಖೆ ನಡೆಸಬೇಕು. ಈ ಪ್ರದೇಶದ ಎಲ್ಲ ನಾಗರಿಕರ ರಕ್ಷಣೆ ಮಾಡಬೇಕೆಂದು ಆಯೋಗ ಹೇಳಿದೆ.

ರಾಷ್ಟ್ರೀಯ ಡೇಟಾ ಮತ್ತು ನೋಂದಣಿ ಪ್ರಾಧಿಕಾರದಿಂದ (NADRA) ಸಂಗ್ರಹಿಸಿದ ಮಾಹಿತಿಗಳ ಪ್ರಕಾರ, ಪಾಕಿಸ್ತಾನದ ಒಟ್ಟು ಜನಸಂಖ್ಯೆಯಲ್ಲಿ ಅಲ್ಪಸಂಖ್ಯಾತರು ಐದು ಶೇಕಡಾಕ್ಕಿಂತ ಕಡಿಮೆ ಇದ್ದಾರೆ. ಹಿಂದೂಗಳು ಅತಿದೊಡ್ಡ ಅಲ್ಪಸಂಖ್ಯಾತ ಸಮುದಾಯವಾಗಿದೆ. ಕಳೆದ ಕೆಲವು ತಿಂಗಳಲ್ಲಿ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದೂಗಳನ್ನು ಗುರಿಯಾಗಿಸಿಕೊಂಡು ಅನೇಕ ದಾಳಿಗಳು ನಡೆದಿವೆ. ಇದೇ ವೇಳೆ, ಹಿಂದೂಗಳ ದೇಗುಲಗಳ ಮೇಲೆ ದಾಳಿಯು ಮುಂದುವರಿದಿದೆ.

ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದ ಸೀಮಾ ಹೈದರ್‌ (Seema Haider) ಎಂಬ ಮಹಿಳೆಯು ಭಾರತದ ಹಿಂದು ಯುವಕನನ್ನು ಮದುವೆಯಾದಳು ಎಂಬ ಕಾರಣಕ್ಕಾಗಿ ಪಾಕಿಸ್ತಾನದಲ್ಲಿರುವ ಹಿಂದು ದೇವಾಲಯದ (Pakistan Temple Attack) ಮೇಲೆ ಇಸ್ಲಾಮಿಕ್‌ ಮೂಲಭೂತವಾದಿಗಳು ರಾಕೆಟ್‌ ದಾಳಿ ನಡೆಸಿದ್ದಾರೆ.

ಈ ಸುದ್ದಿಯನ್ನೂ ಓದಿ: ಹಿಂದೂ ದೇಗುಲಗಳ ಮೇಲೆ ದಾಳಿ: ಆಸ್ಟ್ರೇಲಿಯಾ ಪಿಎಂ ಭದ್ರತೆಯ ಭರವಸೆ ನೀಡಿದ್ದಾರೆ ಅಂದ್ರು ಪ್ರಧಾನಿ ಮೋದಿ

ಹೌದು, ದಕ್ಷಿಣ ಸಿಂಧ್‌ ಪ್ರಾಂತ್ಯದಲ್ಲಿರುವ ಸಣ್ಣ ದೇವಾಲಯದ ಮೇಲೆ ಡಕಾಯಿತರು ರಾಕೆಟ್‌ ದಾಳಿ ಮೂಲಕ ಅದನ್ನು ಧ್ವಂಸಗೊಳಿಸಿದ್ದಾರೆ. ಕಳೆದ 24 ಗಂಟೆಯಲ್ಲಿ ಪಾಕಿಸ್ತಾನದಲ್ಲಿ ಹಿಂದು ದೇವಾಲಯದ ಮೇಲೆ ನಡೆಯುತ್ತಿರುವ ಎರಡನೇ ದಾಳಿ ಇದಾಗಿದೆ. ಸೀಮಾ ಹೈದರ್‌ ಅವರು ಹಿಂದು ಯುವಕನನ್ನು ಪ್ರೀತಿಸಿ, ಭಾರತಕ್ಕೆ ಬಂದು ನೆಲೆಸಿರುವುದೇ ದಾಳಿಗೆ ಕಾರಣ ಎಂದು ತಿಳಿದುಬಂದಿದೆ. ಆದಾಗ್ಯೂ, ಪೊಲೀಸರು ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ. ಜುಲೈ 16ರಂದು ಘಟನೆ ನಡೆದಿದ್ದು, ಅಲ್ಪಸಂಖ್ಯಾತರಾಗಿರುವ ಹಿಂದುಗಳು ಕೃತ್ಯವನ್ನು ಖಂಡಿಸಿದ್ದಾರೆ.

ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version