ಅಬುಜಾ: ನೈಜೀರಿಯಾದಲ್ಲಿ ಐಸಿಸ್ ಉಗ್ರರು ಹಾಗೂ ಬೋಕೊ ಹರಾಮ್ (Boko Haram) ಉಗ್ರರ ಮಧ್ಯೆಯೇ ಕಾಳಗ ನಡೆಯುತ್ತಿದೆ. ದಾಳಿಗೆ ಪ್ರತಿದಾಳಿ, ಸೇಡಿಗೆ ಸೇಡು ಎಂಬ ಮನಸ್ಥಿತಿಗೆ ಎರಡೂ ಉಗ್ರ ಸಂಘಟನೆಗಳು ಬಂದುತಲುಪಿವೆ. ಇದಕ್ಕೆ ನಿದರ್ಶನ ಎಂಬಂತೆ, ಐಸಿಸ್ ಉಗ್ರರ 33 ಪತ್ನಿಯರನ್ನು ಬೋಕೊ ಉಗ್ರರು ಹತ್ಯೆಗೈದಿದ್ದಾರೆ.
ಇಸ್ಲಾಮಿಕ್ ಸ್ಟೇಟ್ ಪಶ್ಚಿಮ ಆಫ್ರಿಕಾ ಪ್ರಾಂತ್ಯ (ISWAP) ಉಗ್ರರು ಕೆಲ ದಿನಗಳ ಹಿಂದೆ ಬೋಕೊ ಹರಾಮ್ ಉಗ್ರ ಸಂಘಟನೆಯ ಕಮಾಂಡರ್ ಮಲಾಮ್ ಅಬೌಬಕರ್ ಸೇರಿ 13 ಉಗ್ರರನ್ನು ಹತ್ಯೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ, ಬೋಕೊ ಹರಾಮ್ ಲೀಡರ್ ಅಲಿ ಎನ್‌ಗಲ್ಡ್ (Ali Ngulde)ನು ನೈಜೀರಿಯಾದ ಸಾಂಬಿಸಾ ಅರಣ್ಯಕ್ಕೆ ಉಗ್ರರನ್ನು ಕಳುಹಿಸಿದ್ದು, ಅವರು ಐಸಿಸ್ ಉಗ್ರರ 33 ಹೆಂಡತಿಯರನ್ನು ಹತ್ಯೆ ಮಾಡಿದ್ದಾರೆ. ಆ ಮೂಲಕ ಐಸಿಸ್ ವಿರುದ್ಧ ಸೇಡು ತೀರಿಸಿಕೊಂಡಿದ್ದಾರೆ.
ಐಸಿಸ್ ಉಗ್ರರು ಹಾಗೂ ಬೋಕೊ ಹರಾಮ್ ಉಗ್ರರ ಮಧ್ಯೆ ನೈಜೀರಿಯಾದಲ್ಲಿ ಇತ್ತೀಚೆಗೆ ಕಾಳಗಗಳು, ಸೇಡಿನ ದಾಳಿಗಳು ಹೆಚ್ಚಾಗಿವೆ. ಬೋಕೊ ಹರಾಮ್ ಕೂಡ ಐಸಿಸ್‌ನಂತೆ ಇಸ್ಲಾಮಿಕ್ ಉಗ್ರ ಸಂಘಟನೆಯಾಗಿದ್ದರೂ, ಎರಡೂ ಸಂಘಟನೆಗಳ ಮಧ್ಯೆ ಭಾರಿ ಭಿನ್ನಾಭಿಪ್ರಾಯ ಇದೆ.
ಇದನ್ನೂ ಓದಿ | ISIS Leader Killed | ಐಸಿಸ್ ಮುಖಂಡ ಅಬು ಹಸನ್ ಹತ್ಯೆ, ನೂತನ ಮುಖಂಡನ ಘೋಷಣೆ