Site icon Vistara News

Road Rage: ರಸ್ತೆ ಜಗಳದಲ್ಲಿ 4 ವರ್ಷದ ಮಗುವಿಗೆ ಗುಂಡು ಹಾರಿಸಿ, ಕೊಂದ ದುಷ್ಟರು

4 year old shot dead while road rage in USA

ನವದೆಹಲಿ: ರಸ್ತೆ ಜಗಳದಲ್ಲಿ (Road Rage) ನಾಲ್ಕು ವರ್ಷದ ಬಾಲಕನೊಬ್ಬನನ್ನು (4 year old dead) ಆತನ ತಂದೆ ತಾಯಿ ಮುಂದೆಯೇ ಗುಂಡು ಹೊಡೆದು ಕೊಂದ ಘಟನೆ ಅಮೆರಿಕದ ಲಂಕಾಸ್ಟೆರ್‌ನಲ್ಲಿ ನಡೆದಿದೆ(Lancaster). ಮೃತ ಬಾಲಕ ಕಾರಿನ ಹಿಂಭಾಗದಲ್ಲಿ ಕುಳಿತಿದ್ದ, ವ್ಯಕ್ತಿಯು ಹಾರಿಸಿ ಗುಂಡು ಬಾಲಕನೇ ದೇಹಕ್ಕೆ ತಾಗಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿಯ ಮಧ್ಯೆಯೇ ಬಾಲಕನ ಮೃತಪಟ್ಟಿದ್ದಾನೆ ಎಂದು ಆಸ್ಪತ್ರೆಯವರು ಘೋಷಿಸಿದರು.

ಲಂಕಾಸ್ಟರ್‌ನ ಹೆದ್ದಾರಿಯಲ್ಲಿ ದುಷ್ಕರ್ಮಿಗಳು ಕುಟುಂಬದ ಕಾರನ್ನು ಅಡ್ಡಗಟ್ಟಿ, ಮಾರಣಾಂತಿಕ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. “ಇದು ಊಹಿಸಲೂ ಸಾಧ್ಯವಿಲ್ಲ. ಇದು ನಮ್ಮ ಯಾವುದೇ ಕುಟುಂಬಗಳಿಗೂ ಆಗಬಹುದು. ಅದು ನಮ್ಮಲ್ಲಿ ಯಾರಾದರೂ ಆಗಿರಬಹುದು” ಎಂದು ಲ್ಯಾಂಕಾಸ್ಟರ್ ಮೇಯರ್ ಆರ್. ರೆಕ್ಸ್ ಪ್ಯಾರಿಸ್ ಲಾಸ್ ಏಂಜಲೀಸ್ ಎಬಿಸಿ ಸ್ಟೇಷನ್ ತಿಳಿಸಿದ್ದಾರೆ.

29 ವರ್ಷದ ಪುರುಷ ಮತ್ತು 27 ವರ್ಷದ ಮಹಿಳೆಯನ್ನು ಬಂಧಿಸಿ ಲಾಸ್ ಏಂಜಲೀಸ್ ಕೌಂಟಿ ಜೈಲಿನಲ್ಲಿ ಕೊಲೆಯ ಶಂಕೆಯ ಮೇಲೆ ಆರೋಪ ಹೊರಿಸಲಾಗಿದೆ ಎಂದು ಲಾಸ್ ಏಂಜಲೀಸ್ ಕೌಂಟಿ ಶೆರಿಫ್ ಇಲಾಖೆ ಭಾನುವಾರ ಎಬಿಸಿ ನ್ಯೂಸ್‌ಗೆ ಹೇಳಿಕೆಯಲ್ಲಿ ತಿಳಿಸಿದೆ. ಶಂಕಿತರ ಹೆಸರುಗಳನ್ನು ತಕ್ಷಣ ಬಹಿರಂಗಪಡಿಸಲಾಗಿಲ್ಲ.

ಘಟನೆಯ ಸಮಯದಲ್ಲಿ ಸಂತ್ರಸ್ತ ಕುಟುಂಬದ ಕಾರನ್ನು ಶಂಕಿತ ಚಾಲಕ ಫಾಲೋ ಮಾಡಿದ್ದಾನೆ. ಶಂಕಿತರು ಹಿಂಬಾಲಿಸುತ್ತಿರುವಾಗ, ಸಂತ್ರಸ್ತ ಚಾಲಕನು ತನ್ನ ವಾಹನವನ್ನು ನಿಧಾನಗೊಳಿಸಿದ್ದಾನೆ, ಆ ಸಮಯದಲ್ಲಿ ಶಂಕಿತ ಚಾಲಕನು ಸಂತ್ರಸ್ತ ಕಾರಿನ ಪ್ರಯಾಣಿಕರ ಬದಿಯಲ್ಲಿ ನಿಲ್ಲಿಸಿ ಗುಂಡು ಹಾರಿಸಲು ಪ್ರಾರಂಭಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆಗ ಹಿಂಬದಿಯಲ್ಲಿ ಕುಳಿತಿದ್ದ ನಾಲ್ಕು ವರ್ಷದ ಮಗುವಿಗೆ ಗುಂಡು ತಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೂಡಲೇ ಮಗುವಿನ ತಂದೆ ತಾಯಿ ಅವರು, ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಮಗು ದಾರಿಯ ಮಧ್ಯೆಯೇ ಮೃತಪಟ್ಟಿದೆ ಎಂದು ಆಸ್ಪತ್ರೆಯವರು ಘೋಷಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಈ ಘಟನೆಯಲ್ಲಿ ಮಗುವಿನ ತಂದೆ ತಾಯಿಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ.

ಈ ಸುದ್ದಿಯನ್ನು ಓದಿ: RPF Firing: ರೈಲಿನಲ್ಲಿ ಶೂಟೌಟ್‌ ಪ್ರಕರಣ; ಬೀದರ್‌ನ ವ್ಯಕ್ತಿ ಸಾವು!

Exit mobile version