Site icon Vistara News

4,651 ಪ್ಯಾಲೆಸ್ತೀನ್ ನಾಗರಿಕರ ಸಾವು, ಈ ಪೈಕಿ ಶೇ.40 ಮಕ್ಕಳು! 14,245 ಮಂದಿಗೆ ಗಾಯ

4,651 killed and 14,245 Palestinians injured

ಗಾಜಾ ಸಿಟಿ: ಅಕ್ಟೋಬರ್ 7ರಿಂದ ಇಲ್ಲಿಯವರೆಗೆ ಇಸ್ರೇಲ್ (Israel Attack) ಸೇನೆ ನಡೆಸಿದ ದಾಳಿಯಲ್ಲಿ 4,651 ಪ್ಯಾಲೆಸ್ತೀನಿಯರು (Palestinians Killed) ಮೃತಪಟ್ಟಿದ್ದಾರೆ. ಈ ಪೈಕಿ ಶೇ.40ರಷ್ಟು ಮಕ್ಕಳಿದ್ದಾರೆ. 14,245ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಈ ಪೈಕಿ ಶೇ.70ರಷ್ಟು ಮಕ್ಕಳು (Palestine Children) ಮತ್ತು ಮಹಿಳೆಯರಿದ್ದಾರೆ (Women) ಎಂದು ಗಾಜಾ ಪಟ್ಟಿಯ ಆರೋಗ್ಯ ಇಲಾಖೆಯ ವಕ್ತಾರರು (Gaza health ministry spokesman) ತಿಳಿಸಿದ್ದಾರೆ.

ಇದೇ ವೇಳೆ ಕಳೆದ 24 ಗಂಟೆಯಲ್ಲಿ ಇಸ್ರೇಲ್ ನಡೆಸಿದ ದಾಳಿಯಲ್ಲಿ 177 ಮಕ್ಕಳು ಸೇರಿದಂತೆ 266 ಪ್ಯಾಲೆಸ್ತೀನಿಯರನ್ನು ಮೃತಪ್ಟಟಿದ್ದಾರೆ ಎಂದು ಗಾಜಾ ಪಟ್ಟಿಯ ಆರೋಗ್ಯ ಸಚಿವಾಲಯದ ವಕ್ತಾರ ಅಶ್ರಫ್ ಅಲ್ ಕುದ್ರ ಅವರು ತಿಳಿಸಿದ್ದಾರೆ. ಅಕ್ಟೋಬರ್ 7ರಂದು ಹಮಾಸ್ ಬಂಡುಕೋರರು ದಕ್ಷಿಣ ಇಸ್ರೇಲ್ ಮೇಲೆ ಸಾವಿರಾರು ರಾಕೆಟ್ ದಾಳಿ ಮಾಡಿ, 1,700ಕ್ಕೂ ಅಧಿಕ ಇಸ್ರೇಲಿಗಳನ್ನು ಕೊಂದು ಹಾಕಿದ್ದರು. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಗಾಜಾ ಪಟ್ಟಿಯ ಮೇಲೆ ಪೂರ್ಣ ಪ್ರಮಾಣದ ಯುದ್ಧವನ್ನು ಆರಂಭಿಸಿದೆ.

ಇಸ್ರೇಲ್‌ ದಾಳಿಗೆ ಗಾಜಾ ಮಸೀದಿಗಳು ಉಡೀಸ್, ಉಗ್ರರು ಮಟಾಷ್!

ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ಸಂಘರ್ಷದಿಂದಾಗಿ (Israel Palestine War) ಮಸಣದಂತಾಗಿರುವ ಗಾಜಾ ನಗರಕ್ಕೆ (Gaza City) ಜಗತ್ತಿನ ಹಲವು ಭಾಗಗಳಿಂದ ಅಗತ್ಯ ವಸ್ತುಗಳ ನೆರವು ಸಿಗುತ್ತಲೇ ಇಸ್ರೇಲ್‌ ಮತ್ತೆ ನಗರದ ಮೇಲೆ ವಾಯುದಾಳಿಯನ್ನು ತೀವ್ರಗೊಳಿಸಿದೆ. ಭಾರತ ಸೇರಿ ಹಲವು ರಾಷ್ಟ್ರಗಳು ವೈದ್ಯಕೀಯ ಉಪಕರಣಗಳು ಸೇರಿ ಹಲವು ರೀತಿಯಲ್ಲಿ ನೆರವು ನೀಡುತ್ತಿವೆ. ಆದರೆ, ಗಾಜಾ ನಗರದ ಗಡಿಯಿಂದ ಇಸ್ರೇಲ್‌ ರಾಕೆಟ್‌ಗಳು ಗಾಜಾದ ಮಸೀದಿಗಳು, ಉಗ್ರರ ನೆಲೆಗಳನ್ನು ಧ್ವಂಸಗೊಳಿಸುತ್ತಿವೆ.

ಈ ಸುದ್ದಿಯನ್ನೂ ಓದಿ: ಇವರೇ ನಮ್ಮ ಆಧುನಿಕ ದುರ್ಗೆಯರು! ನವರಾತ್ರಿ, ದುರ್ಗಾಪೂಜೆ ಶುಭಾಶಯ ಕೋರಿದ ಇಸ್ರೇಲ್ ರಾಯಭಾರಿ

ಇಸ್ರೇಲ್‌ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿರುವ ಕಾರಣ ಗಾಜಾ ನಗರದಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ಬಿಡಿ, ಅನ್ನ, ನೀರೂ ಸಿಗದಂತಾಗಿದೆ. ಇಸ್ರೇಲ್‌ ರಾಕೆಟ್‌ ದಾಳಿಗೆ ವೆಸ್ಟ್‌ ಬ್ಯಾಂಕ್‌ನಲ್ಲಿರುವ ಮಸೀದಿಯು ಸಂಪೂರ್ಣವಾಗಿ ಧ್ವಂಸಗೊಂಡಿದೆ. “ಇಸ್ರೇಲ್‌ ಮೇಲೆ ಮತ್ತೆ ದಾಳಿ ನಡೆಸಲು ಹಮಾಸ್‌ ಉಗ್ರರು ಸಂಚು ರೂಪಿಸುತ್ತಿದ್ದಾರೆ. ಅವರು ವೆಸ್ಟ್‌ ಬ್ಯಾಂಕ್‌ನ ಜೆನಿನ್‌ ಎಂಬಲ್ಲಿರುವ ಮಸೀದಿ ಸೇರಿ ಹಲವೆಡೆ ಕುಳಿತು ಪಿತೂರಿ ನಡೆಸುತ್ತಿದ್ದಾರೆ. ಹಾಗಾಗಿ ಮಸೀದಿಯನ್ನು ಧ್ವಂಸಗೊಳಿಸುವ ಜತೆಗೆ ಹಮಾಸ್‌ ಉಗ್ರರನ್ನು ಹತ್ಯೆಗೈಯಲಾಗಿದೆ” ಎಂದು ಇಸ್ರೇಲ್‌ ಸೇನೆ ಮಾಹಿತಿ ನೀಡಿದೆ. ಮಸೀದಿ ಧ್ವಂಸಗೊಂಡಿರುವ ಜತೆಗೆ ಹತ್ತಾರು ಉಗ್ರರು ಇಸ್ರೇಲ್‌ ದಾಳಿಗೆ ಹತರಾಗಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಇಸ್ರೇಲ್‌ ದಾಳಿಗೆ ಗಾಜಾ ನಗರವು ಬಹುತೇಕವಾಗಿ ನಾಶಗೊಂಡಿದೆ. ಗಾಜಾ ನಗರದಲ್ಲಿ ಲಕ್ಷಾಂತರ ನಿರಾಶ್ರಿತರಾಗಿದ್ದಾರೆ. ಸಾವಿನ ಸಂಖ್ಯೆ ಈಗ 4,300ಕ್ಕೆ ಏರಿಕೆಯಾಗಿದೆ. ಇದಲ್ಲದೆ ನಗರದಲ್ಲಿ ಶೇ.40ರಷ್ಟು ಮನೆಗಳು ಸಂಪೂರ್ಣವಾಗಿ ಹಾಳಾಗಿವೆ. ಗಾಯಗೊಂಡಿರುವ ಸಾವಿರಾರು ಜನರಿಗೆ ಚಿಕಿತ್ಸೆ ನೀಡಲು ಕೂಡ ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಒಟ್ಟಿನಲ್ಲಿ ಇಸ್ರೇಲ್‌ ಸತತ ದಾಳಿಗೆ ಹಮಾಸ್‌ ನಗರವು ಅಸ್ಥಿಪಂಜರದಂತಾಗಿದೆ.

ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version