Site icon Vistara News

Japan Planes collide: ಜಪಾನ್‌ನಲ್ಲಿ ವಿಮಾನ ದುರಂತ; 6 ಕೋಸ್ಟ್ ಗಾರ್ಡ್ ಸಿಬ್ಬಂದಿ ಪೈಕಿ ಐವರು ಸಾವು

5 Of 6 Coast Guard Crew dead in Japan Planes collide

ಟೋಕಿಯೊ: ಟೋಕಿಯೋ ವಿಮಾನ ನಿಲ್ದಾಣದಲ್ಲಿ (Tokyo international Airport) ಇಳಿಯುತ್ತಿದ್ದ ವಿಮಾನವೊಂದು ನಿಂತಿದ್ದ ಕೋಸ್ಟ್ ಗಾರ್ಡ್ ಪ್ಲೇನ್‌ಗೆ ಡಿಕ್ಕಿಯಾದ ಘಟನೆಯಲ್ಲಿ, ವಿಮಾನದಲ್ಲಿದ್ದ ಕರಾವಳಿ ಕಾವಲು ಪಡೆಯ ಆರು ಸಿಬ್ಬಂದಿಯ ಪೈಕಿ ಐವರು ಮೃತಪಟ್ಟಿದ್ದಾರೆ(Japan Planes collide) ಎಂದು ಜಪಾನ್ ಸಾರಿಗೆ ಸಚಿವರು ತಿಳಿಸಿದ್ದಾರೆ(Japanese transport minister). ಬೆಂಕಿ ಹೊತ್ತಿ ಉರಿದ ವಿಮಾನವನ್ನು ಕೋಸ್ಟ್ ಗಾರ್ಡ್‌ನ Ma72 fixed-wing ಎಂದು ಗುರುತಿಸಲಾಗಿದೆ.

ಸೋಮವಾರ ಕೇಂದ್ರ ಜಪಾನ್‌ನಲ್ಲಿ ಪ್ರಬಲ ಭೂಕಂಪ ಸಂಭವಿಸಿದ ಒಂದು ದಿನದ ನಂತರ ಈ ಅಪಘಾತ ಸಂಭವಿಸಿದೆ. ಭೂಕಂಪದಲ್ಲಿ ಕನಿಷ್ಠ 30 ಜನರು ಮೃತಪಟ್ಟಿದ್ದು, ಅನೇಕ ಕಟ್ಟಡಗಳು ನೆಲಸಮವಾಗಿವೆ. ಕೇಂದ್ರ ಜಪಾನ್‌ನಲ್ಲಿ ಸಂಭವಿಸಿದ ಭಾರೀ ಭೂಕಂಪದ ನಂತರ ರಕ್ಷಣಾ ಪ್ರಯತ್ನಗಳಿಗೆ ಸಹಾಯ ಮಾಡಲು ಕೋಸ್ಟ್ ಗಾರ್ಡ್ ವಿಮಾನವನ್ನು ಸಿದ್ಧತೆ ನಡೆಸಿತ್ತಿತ್ತು. ಈ ವೇಳೆ, ಮತ್ತೊಂದು ವಿಮಾನ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿತ್ತು ಎಂದು ಸಚಿವರು ತಿಳಿಸಿದ್ದಾರೆ.

ಜಪಾನ್ ಏರ್‌ಲೈನ್ಸ್ ವಿಮಾನವು ರನ್‌ವೇಯಿಂದ ಜಾರಿ ಹೋಗುತ್ತಿದ್ದಾಗ ಭಾರೀ ಸ್ಫೋಟ ಸಂಭವಿಸಿ, ಬೆಂಕಿ ಹೊತ್ತಿಕೊಂಡಿದೆ. ಈ ಏರ್‌ಬಸ್ ವಿಮಾನದಲ್ಲಿದ್ದ ಎಂಟು ಮಕ್ಕಳು ಮತ್ತು 12 ಸಿಬ್ಬಂದಿ ಸೇರಿದಂತೆ ಎಲ್ಲಾ 379 ಮಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.

ವಿಮಾನದ ಕಿಟಕಿಗಳಿಂದ ಭಾರೀ ಜ್ವಾಲೆಗಳು ಹೊರ ಬರುತ್ತಿರುವುದನ್ನು ವೈರಲ್ ಆದ ವಿಡಿಯೋದಲ್ಲಿ ಕಾಣಬಹುದಾಗಿದೆ. ಗ್ರೌಂಡ್ ಸ್ಟಾಫ್, ಬೆಂಕಿಯನ್ನು ನಂದಿಸುವ ಪ್ರಯತ್ನವನ್ನು ಮಾಡುತ್ತಿರುವುದನ್ನು ಕಾಣಬಹುದಾಗಿದೆ. ರನ್‌ವೇಯಲ್ಲೂ ಸುಟ್ಟು ಕರಕಲಾದ ಅವಶೇಷಗಳು ಕಂಡುಬಂದಿವೆ. ವರದಿಗಳ ಪ್ರಕಾರ, ಬೆಂಕಿಯನ್ನು ನಂದಿಸಲು 70 ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಲಾಗಿತ್ತು.

ಸದ್ಯದ ವರದಿಗಳ ಪ್ರಕಾರ ಯಾವುದೇ ಪ್ರಾಣಾಪಾಯ ಆಗಿಲ್ಲ. ಪ್ರಯಾಣಿಕರನ್ನು ಕೂಡಲೇ ಇಳಿಸಿ ಮಾರು ಮಾಡಲಾಗಿದೆ. ಸುದ್ದಿಸಂಸ್ಥೆಗಳು ತೋರಿಸಿದ ಕೆಲವು ವಿಡಿಯೋಗಳಲ್ಲಿ, ಬೆಂಕಿ ಹೊತ್ತಿ ಉರಿಯುತ್ತಾ ಓಡುತ್ತಿರುವ ವಿಮಾನವನ್ನು ತೋರಿಸಲಾಗಿದೆ.

ವಿಮಾನದಲ್ಲಿ 367 ಪ್ರಯಾಣಿಕರಿದ್ದರು. ಪ್ರಾಥಮಿಕ ವರದಿಗಳ ಪ್ರಕಾರ ಅಷ್ಟೂ ಮಂದಿ ಪಾರಾಗಿದ್ದಾರೆ. ಇನ್ನಷ್ಟು ವಿವರಗಳು ತಿಳಿಯಬೇಕಿವೆ. ನಿನ್ನೆ ಜಪಾನ್‌ನ ಕೆಲವು ಭಾಗಗಳಲ್ಲಿ 7.6 ರಿಕ್ಟರ್‌ ಮಾಪನದ ಭಾರಿ ಭೂಕಂಪ ಸಂಭವಿಸಿತ್ತು. ಪರಿಣಾಮ 24 ಮಂದಿ ಸತ್ತಿದ್ದರು. ನೂರಾರು ಮಂದಿ ಗಾಯಗೊಂಡಿದ್ದರು. ಹಲವು ಕಟ್ಟಡಗಳು ಧ್ವಂಸವಾಗಿವೆ. ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯಾಗಿದೆ. ಸಣ್ಣ ಪ್ರಮಾಣದ ಸುನಾಮಿ ಕೂಡ ಕಾಣಿಸಿಕೊಂಡು ಸಮುದ್ರ ತೀರದಲ್ಲಿ ಹಾನಿ ಎಸಗಿದೆ.

ಈ ಸುದ್ದಿಯನ್ನೂ ಓದಿ:Viral video: ಟೋಕಿಯೋ ನಿಲ್ದಾಣದಲ್ಲಿ ಎರಡು ವಿಮಾನ ಡಿಕ್ಕಿ, ಹೊತ್ತಿ ಉರಿದ ವಿಮಾನ, ವಿಡಿಯೋ ಇಲ್ಲಿದೆ

Exit mobile version