Site icon Vistara News

Balochistan Blast | ಬಲೂಚಿಸ್ತಾನದಲ್ಲಿ ಬಾಂಬ್‌ ದಾಳಿ, ಪಾಕ್‌ನ ಐವರು ಯೋಧರ ಸಾವು, 12 ಜನಕ್ಕೆ ಗಾಯ

Balochistan Blast

ಕ್ವೆಟ್ಟಾ: ಪಾಕಿಸ್ತಾನದ ಬಲೂಚಿಸ್ತಾನದ (Balochistan Blast) ಪ್ರಾಂತ್ಯದಲ್ಲಿ ಬಾಂಬ್‌ ದಾಳಿ ನಡೆದಿದ್ದು, ಪಾಕ್‌ನ ಐವರು ಸೈನಿಕರು ಮೃತಪಟ್ಟಿದ್ದಾರೆ. ಹಾಗೆಯೇ, 12 ಜನ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೊಹ್ಲು ಜಿಲ್ಲೆಯ ಕೊಹನ್‌ ಪ್ರದೇಶದಲ್ಲಿ ಸುಧಾರಿತ ಸ್ಫೋಟಕ ಸಾಧನಗಳನ್ನು ಸ್ಫೋಟಿಸಲಾಗಿದೆ. ಅಪರಿಚಿತ ವ್ಯಕ್ತಿಗಳು ಪೊಲೀಸ್‌ ಚೆಕ್‌ಪಾಯಿಂಟ್‌ಗಳ ಮೇಲೆ ಗ್ರೆನೇಡ್‌ ಎಸೆದಿದ್ದಾರೆ. ಇದರಲ್ಲಿ ಮೂವರು ಪೊಲೀಸರು ಸೇರಿ ಎಂಟು ಜನ ಗಾಯಗೊಂಡಿದ್ದಾರೆ.

ಇದೇ ರೀತಿ ಹಲವೆಡೆ ದಾಳಿ ನಡೆಸಲಾಗಿದ್ದು, ಐವರು ಸೈನಿಕರು ಮೃತಪಟ್ಟಿದ್ದಾರೆ. ದಾಳಿ ಕುರಿತು ಬಲೂಚಿಸ್ತಾನ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದಾಗ್ಯೂ, ದಾಳಿ ಮಾಡಿದವರು ಯಾರು ಎಂಬುದರ ಕುರಿತು ಇದುವರೆಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.

ಇದನ್ನೂ ಓದಿ | Bombing In Afghan | ಆಫ್ಘನ್‌ನಲ್ಲಿ ಮದರಸಾ ಮೇಲೆ ಬಾಂಬ್‌ ದಾಳಿ, 17 ಜನ ಸಾವು

Exit mobile version