Site icon Vistara News

36 ಹರೆಯದ ರಷ್ಯನ್ ಗೆಳತಿ ಜತೆ ಸಂಬಂಧ ಅಧಿಕೃತಗೊಳಿಸಿದ 61 ವಯಸ್ಸಿನ ನಟ ಟಾಮ್ ಕ್ರೂಸ್!

61 year old actor Tom Cruise confirmed his relationship with Russian girlfriend

ನವದೆಹಲಿ: ಹಾಲಿವುಡ್ ಸೂಪರ್ ಸ್ಟಾರ್ ಟಾಮ್ ಕ್ರೂಸ್ (Hollywood Super Star Tom Cruise) ರಷ್ಯಾದ ಗೆಳತಿ ಎಲ್ಸಿನಾ ಖೈರೋವಾ (Russian Elsina Khayrova) ಅವರ ಜತೆಗಿನ ಸಂಬಂಧಕ್ಕೆ ಅಧಿಕೃತ ಮುದ್ರೆಯನ್ನು ಒತ್ತಿದ್ದಾರೆ ಎಂದು ಡೈಲಿ ಮೇಲ್ ವರದಿ ಮಾಡಿದೆ. ಡಿಸೆಂಬರ್‌ನಲ್ಲಿ ಮೊದಲ ಬಾರಿಗೆ ಇವರಿಬ್ಬರು ಒಟ್ಟಿಗೆ ಕಾಣಿಸಿಕೊಂಡ ಬಳಿಕ ಸಾಕಷ್ಟು ಊಹಾಪೋಹ ಸುದ್ದಿಗಳಿದ್ದವು. ಅವುಗಳಿಗೆ ಈಗ ಪೂರ್ಣ ವಿರಾಮ ನೀಡಿರುವ ಜೋಡಿ, ತಮ್ಮ ಸಂಬಂಧವನ್ನು ಬಹಿರಂಗಗೊಳಿಸಿದ್ದಾರೆ.

ಎಲ್ಸಿನಾ ಅವರ ಆಪ್ತ ವಲಯದಲ್ಲಿ ಎಲ್ಸಿನಾ ಮತ್ತು ಟಾಮ್ ಡೇಟಿಂಗ್ ಮಾಡುತ್ತಿರುವುದು ತಿಳಿದ ವಿಷಯವಾಗಿದೆ. ಕಳೆದ ಕೆಲವು ವಾರಗಳಿಂದ ಅವರು ತುಂಬಾ ಹತ್ತಿರವಾಗಿದ್ದಾರೆ. ಆದರೆ ಅವರು ತಮ್ಮ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಬಯಸುತ್ತಾರೆ ಎಂಬ ಕಾರಣದಿಂದ ಒಟ್ಟಿಗೆ ಛಾಯಾಚಿತ್ರ ಮಾಡದಂತೆ ಸಾಕಷ್ಟು ಕಾಳಜಿಯನ್ನು ತೆಗೆದುಕೊಳ್ಳುತ್ತಾರೆ. ಎಲ್ಸಿನಾ ಅವರ ಮನೆಯಲ್ಲಿ ಒಂದು ರಾತ್ರಿ ಟಾಮ್ ಕ್ರೂಸ್ ತಂಗಿದ್ದರು ಎಂಬ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ.

ಅವರು ಒಟ್ಟಿಗೆ ಸುತ್ತಾಡುವುದನ್ನು ಆನಂದಿಸುತ್ತಾರೆ ಮತ್ತು ಅವರ ಶ್ರೀಮಂತಿಕೆಯ ಹೊರತಾಗಿಯೂ, ಸಾಮಾನ್ಯ ದಂಪತಿಗಳು ಮಾಡುವ ಬಹಳಷ್ಟು ಕೆಲಸಗಳನ್ನು ಮಾಡುತ್ತಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಜೋಡಿ ಇತ್ತೀಚೆಗೆ ಲಂಡನ್‌ನ ಏರ್ ಆಂಬ್ಯುಲೆನ್ಸ್ ಚಾರಿಟಿಯನ್ನು ಬೆಂಬಲಿಸುವ ಚಾರಿಟಿ ಡಿನ್ನರ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿತ್ತು. ಪ್ರಿನ್ಸ್ ವಿಲಿಯಂ ಗೌರವ ಅತಿಥಿಯಾಗಿ ಭಾಗವಹಿಸಿದ್ದರು. ಇಬ್ಬರು ಲಂಡನ್‌ನ ಕೆಲವು ವಿಶೇಷವಾದ ರೆಸ್ಟೊರೆಂಟ್‌ಗಳಲ್ಲಿ ಊಟ ಮಾಡುವುದನ್ನು ಮತ್ತು ಆಕೆಯ ಮನೆಯ ಸಮೀಪವಿರುವ ಹೈಡ್ ಪಾರ್ಕ್‌ನಲ್ಲಿ ಒಟ್ಟಿಗೆ ನಡೆದಾಡುವುದನ್ನು ಸಹ ಕಂಡಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಲಂಡನ್‌ನ ಮೇಫೇರ್‌ನಲ್ಲಿ ಈ ಜೋಡಿಯು ಒಟ್ಟಿಗೆ ಪಾರ್ಟಿ ಮಾಡಿದ ಸುದ್ದಿಯಾದ ಬಳಿಕ ಸಂಬಂಧದ ಬಗ್ಗೆ ವದಂತಿಗಳು ಮೊದಲು ಡಿಸೆಂಬರ್ 2023ರಲ್ಲಿ ಹರಿದಾಡತೊಡಗಿದವು. ಈ ಕಾರ್ಯಕ್ರಮದ ಸಂಪೂರ್ಣ ಅವಧಿಯಲ್ಲಿ ಇಬ್ಬರೂ ಜೋಡಿಯಾಗಿಯೇ ಇದ್ದರು. ಮೇಫೇರ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಅತಿಥಿಯೊಬ್ಬರ ಪ್ರಕಾರ, ಅವರಿಬ್ಬರು ಒಟ್ಟಿಗೆ ಹೊರಡುವ ಮೊದಲು ಅವರು ಪ್ರೀತಿಯ ಸನ್ನೆಗಳನ್ನು ವಿನಿಮಯ ಮಾಡಿಕೊಳ್ಳುವುದನ್ನು ಮತ್ತು ನೃತ್ಯ ಮಾಡುವುದನ್ನು ನೋಡಿದ್ದಾರೆಂದು ವರದಿಯಲ್ಲಿ ತಿಳಿಸಲಾಗಿದೆ.

ಈ ಸುದ್ದಿಯನ್ನೂ ಓದಿ: Mission: Impossible: ಟಾಮ್ ಕ್ರೂಸ್ ನಟನೆಯ ಮಿಷನ್ ಇಂಪಾಸಿಬಲ್ 7 ಆನ್‌ಲೈನಲ್ಲಿ ಸೋರಿಕೆ!

Exit mobile version