ವಾಷಿಂಗ್ಟನ್: “ಕಲಿಕೆಗೆ ವಯಸ್ಸಿನ ಹಂಗಿಲ್ಲ” ಎಂಬ ಮಾತಿದೆ. ಜೀವನ ಪೂರ್ತಿ ಕಲಿಯುವುದು ಸಾಕಷ್ಟಿರುತ್ತದೆ. ಇಂತಹ ಮಾತುಗಳಿಗೆ ನಿದರ್ಶನ ಎಂಬಂತೆ, ಅಮೆರಿಕದಲ್ಲಿ 89 ವರ್ಷದ ಮಹಿಳೆಯೊಬ್ಬರು ಅವಿರತವಾಗಿ ಶ್ರಮ ವಹಿಸಿ ಸ್ನಾತಕೋತ್ತರ ಪದವಿ (US Woman Master Degree) ಪಡೆದಿದ್ದಾರೆ.
ಜೋನ್ ಡೋನೊವನ್ ಅವರು ಸೌತರ್ನ್ ನ್ಯೂ ಹ್ಯಾಂಪ್‌ಶೈರ್ ವಿಶ್ವವಿದ್ಯಾಲಯದಿಂದ ಮಾಸ್ಟರ್ ಆಫ್ ಆರ್ಟ್ಸ್ ಆ್ಯಂಡ್ ಕ್ರಿಯೇಟಿವ್ ರೈಟಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇತ್ತೀಚೆಗೆ ಅವರಿಗೆ ಪದವಿ ಪ್ರದಾನ ಮಾಡಿದ್ದು, ಕುಟುಂಬಸ್ಥರೊಂದಿಗೆ ಪಾರ್ಟಿ ಮಾಡುವ ಮೂಲಕ ಸಂತಸ ಹಂಚಿಕೊಂಡಿದ್ದಾರೆ. “ನಾನು ಪದವಿ ಪಡೆದಿದ್ದು ಖುಷಿಯಾಗಿದೆ. ಸಂತಸ ಉಕ್ಕಿ ಬಂದಿದೆ” ಎಂದು ಡೋನೊವನ್ ತಿಳಿಸಿದ್ದಾರೆ.
ಡೋನೊವನ್ ಅವರು 16ನೇ ವಯಸ್ಸಿನಲ್ಲಿ ಶಾಲಾ ಶಿಕ್ಷಣ ಮುಗಿಸಿದ್ದು, ಮನೆಯಲ್ಲಿ ಹಣಕಾಸು ತೊಂದರೆ ಇದ್ದ ಕಾರಣ ಓದುವ ಮನಸ್ಸಿದ್ದರೂ ಉನ್ನತ ಶಿಕ್ಷಣದಿಂದ ದೂರ ಉಳಿದಿದ್ದರು. ಆದರೆ, ಮದುವೆಯಾಗಿ, ಮಕ್ಕಳಾಗಿ, ಮಕ್ಕಳೆಲ್ಲ ಉತ್ತಮ ರೂಪಿಸಿಕೊಂಡ ಕಾರಣ 84ನೇ ವಯಸ್ಸಿನಲ್ಲಿ ಡೋನೊವನ್ ಅವರಿಗೆ ಮತ್ತೆ ಕಲಿಯುವ ಇಚ್ಛೆ ತೋರಿದ್ದಾರೆ. ಅದರಂತೆ ಪದವಿ ಮುಗಿಸಿ, ಈಗ ಸ್ನಾತಕೋತ್ತರ ಪದವಿಯನ್ನೂ ಪೂರ್ಣಗೊಳಿಸಿದ್ದಾರೆ. ಆ ಮೂಲಕ ಛಲವೊಂದಿದ್ದರೆ ಸಾಕು, ಯಾವುದನ್ನು ಬೇಕಾದರೂ ಸಾಧಿಸಬಹುದು ಎಂಬುದನ್ನು ತೋರಿಸಿದ್ದಾರೆ.
ಇದನ್ನೂ ಓದಿ | IND VS SL | ಜಿಮ್ನಲ್ಲಿ ವರ್ಕೌಟ್ ಜತೆಗೆ ನೃತ್ಯ ಮಾಡಿದ ರೋಹಿತ್ ಶರ್ಮಾ; ವಿಡಿಯೊ ವೈರಲ್