ಬಾಗ್ದಾದ್: ಇರಾಕ್‌ನ ನಿನೆವೆಹ್ ಪ್ರಾಂತ್ಯದ ಹಮ್ದನಿಯಾ ಪ್ರದೇಶದಲ್ಲಿರುವ ಮದುವೆ ಹಾಲ್‌ನಲ್ಲಿ (Wedding Hall) ಭೀಕರ ಅಗ್ನಿ ದುರಂತ (Iraq Fire Accident) ಸಂಭವಿಸಿದ್ದು, 114 ಜನ ಮೃತಪಟ್ಟಿದ್ದಾರೆ. ಹಾಗೆಯೇ, 550ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನೂ ಹಲವು ಜನ ಅಗ್ನಿಯ ಕೆನ್ನಾಲಗೆಗೆ ಸಿಲುಕಿರುವ ಶಂಕೆ ಇರುವ ಕಾರಣ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದೂ ಹೇಳಿದ್ದಾರೆ. ದುರಂತದಲ್ಲಿ ಮದುಮಕ್ಕಳು ಕೂಡ ಮೃತಪಟ್ಟಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಮೊಸುಲ್ ನಗರದ ಹಮ್ದನಿಯಾ ಪ್ರದೇಶದಲ್ಲಿರುವ ಕ್ರಿಶ್ಚಿಯನ್ ಸಮುದಾಯದ ಹಾಲ್‌ನಲ್ಲಿ ಮದುವೆ ಪಾರ್ಟಿ ನಡೆಯುತ್ತಿತ್ತು. ಎಲ್ಲರೂ ಮದುವೆಯ ಸಂಭ್ರಮದಲ್ಲಿದ್ದರು. ಇದೇ ವೇಳೆ ಒಂದು ಅಗ್ನಿ ಕಡೆ ಅಗ್ನಿಯ ಸ್ಪರ್ಶವಾಗಿದೆ. ಇದಾಗುತ್ತಲೇ ಇಡೀ ಮದುವೆ ಹಾಲ್‌ಗೆ ಬೆಂಕಿ ಆವರಿಸಿದೆ. ಕೂಡಲೇ ಕಿರುಚಾಡುತ್ತ ಜನ ಹೊರಗೆ ಬರಲು ಯತ್ನಿಸಿದರಾದರೂ ಬಹುತೇಕ ಮಂದಿ ಅಗ್ನಿ ಕೆನ್ನಾಲಗೆಗೆ ಸಿಲುಕಿದರು. ಇಡೀ ಕಲ್ಯಾಣ ಮಂಟಪ ಸುಟ್ಟು ಕರಕಲಾಗಿದ್ದು, ಬಹುತೇಕ ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮನಕಲಕುವ ವಿಡಿಯೊ
BREAKING: Fire breaks out at wedding hall in northern Iraq, killing at least 100 people – INA pic.twitter.com/PvfJ1psHRN
— BNO News (@BNONews) September 26, 2023
ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ
ಅಗ್ನಿ ಅವಘಡ ಸಂಭವಿಸುತ್ತಲೇ ಹಲವು ಅಗ್ನಿ ಶಾಮಕ ವಾಹನಗಳು, ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ನಂದಿಸಲು ಯತ್ನಿಸಿದರಾದರೂ ಅಷ್ಟೊತ್ತಿಗಾಗಲೇ ಇಡೀ ಕಲ್ಯಾಣ ಮಂಟಪಕ್ಕೆ ಬೆಂಕಿ ಆವರಿಸಿತ್ತು. ಇಷ್ಟಾದರೂ ಸಿಬ್ಬಂದಿಯು 550 ಜನರನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ಸಾಗಿಸಿದ್ದಾರೆ. ಗಾಯಾಳುಗಳಲ್ಲಿ ಹೆಚ್ಚಿನ ಜನರಿಗೆ ಗಂಭೀರ ಗಾಯಗಳಾಗಿರುವುದರಿಂದ ಹಾಗೂ ಇನ್ನೂ ಹಲವು ಜನ ಕಲ್ಯಾಣ ಮಂಟಪದಲ್ಲಿ ಸಿಲುಕಿರುವ ಕಾರಣ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಸುಟ್ಟುಕರಕಲಾದ ವೆಡ್ಡಿಂಗ್ ಹಾಲ್
Photo of wedding hall in Iraq where a fire has killed at least 100 people
— Steve Lookner (@lookner) September 26, 2023
(from @SardarSattar) pic.twitter.com/wSpRQR53tm
ಇದನ್ನೂ ಓದಿ: Car blast : ಗ್ಯಾಸ್ ತುಂಬಿಸುವಾಗ ಅಗ್ನಿ ಅವಘಡ; ಧಗಧಗನೆ ಹೊತ್ತಿ ಉರಿದ ಒಮಿನಿ ಕಾರು
ಅಗ್ನಿ ಅವಘಡದಲ್ಲಿ ನೂರಾರು ಜನ ಮೃತಪಟ್ಟಿರುವುದಕ್ಕೆ ಇರಾಕ್ ಪ್ರಧಾನಿ ಮೊಹಮ್ಮದ್ ಶಿಯಾ ಅಲ್ ಸುದಾನಿ (Mohammed Shia al-Sudani) ಸಂತಾಪ ಸೂಚಿಸಿದ್ದು, ಘಟನೆಯನ್ನು ತನಿಖೆಗೆ ಆದೇಶಿಸಿದ್ದಾರೆ. ಹಾಗೆಯೇ, ಗಾಯಾಳುಗಳಿಗೆ ಚಿಕಿತ್ಸೆ, ಜನರ ರಕ್ಷಣೆಗೆ ಸಕಲ ರೀತಿಯ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮದುವೆ ಹಾಲ್‌ಅನ್ನು ಹಲವು ರೀತಿಯಲ್ಲಿ ಸಿಂಗರಿಸಿದ್ದು, ಅವುಗಳಿಗೆ ಬೆಂಕಿ ತಗುಲಿದ್ದೇ ಹೆಚ್ಚಿನ ಜನ ಮೃತಪಡಲು ಕಾರಣ ಎನ್ನಲಾಗಿದೆ. ಆದಾಗ್ಯೂ, ಅಗ್ನಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.