Site icon Vistara News

Adult Films: ಉದ್ಯಮದಲ್ಲಿ ಲೈಂಗಿಕ ದೌರ್ಜನ್ಯ: ದೂರಿದ ಪೋರ್ನ್ ತಾರೆ ತಿಂಗಳಲ್ಲಿ ಶವವಾಗಿ ಪತ್ತೆ

Thaina Fields

ಲಾಸ್‌ ಏಂಜಲೀಸ್:‌ ಪೋರ್ನ್‌ ಫಿಲಂ (Adult Films industry) ಉದ್ಯಮದಲ್ಲಿ ಸಿಕ್ಕಾಪಟ್ಟೆ ಲೈಂಗಿಕ ದೌರ್ಜನ್ಯ (Physical abuse, Sexual abuse) ನಡೆಯುತ್ತಿದೆ. ತಾನು ಅದರ ಬಲಿಪಶು ಎಂದು ಪೋರ್ನ್‌ ಸ್ಟಾರ್‌ (Porn Star) ಒಬ್ಬಾಕೆ ದೂರಿಕೊಂಡ ಕೆಲವೇ ಸಮಯದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಅಡಲ್ಟ್‌ ಫಿಲಂ ಸ್ಟಾರ್‌ ಥೈನಾ ಫೀಲ್ಡ್ಸ್ (24) (Thaina Fields) ಎಂಬಾಕೆ ಇತ್ತೀಚೆಗೆ ಪೆರುವಿನ ಟ್ರುಜಿಲ್ಲೊದಲ್ಲಿನ ಆಕೆಯ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಪೋರ್ನ್‌ ಉದ್ಯಮದಲ್ಲಿ ತೀವ್ರ ಲೈಂಗಿಕ ದೌರ್ಜನ್ಯ ಎದುರಿಸುತ್ತಿರುವ ತನ್ನ ಅನುಭವಗಳನ್ನು ಸಾರ್ವಜನಿಕವಾಗಿ ಹಂಚಿಕೊಂಡ ತಿಂಗಳುಗಳಲ್ಲಿಯೇ ಈಕೆಯ ಸಾವು ಸಂಭವಿಸಿದೆ. ಸಾವಿಗೆ ಕಾರಣ ಇನ್ನೂ ಬಹಿರಂಗವಾಗಿಲ್ಲ.

ಥೈನಾ ಫೀಲ್ಡ್ಸ್ ಪೆರು ದೇಶದ ಜನಪ್ರಿಯ ವಯಸ್ಕ ಚಲನಚಿತ್ರ ತಾರೆ. ʻಚಿನಿತಾʼ ಎಂದು ಕರೆಯಲ್ಪಡುವ ಈಕೆ ಅಡಲ್ಟ್‌ ಚಲನಚಿತ್ರೋದ್ಯಮದ ಪ್ರಮುಖ ವ್ಯಕ್ತಿ. ಕ್ಲೌನ್ ಪ್ರೋಗ್ರಾಂ ಚುಪೆಟಿನ್ ಟ್ರುಜಿಲ್ಲೊದಲ್ಲಿ ಭಾಗವಹಿಸುವ ಮೂಲಕ ಪೆರುವಿನ ಮನರಂಜನಾ ಉದ್ಯಮಕ್ಕೆ ಕಾಲಿಟ್ಟಿದ್ದರು. ನಂತರ ಹೆಸರುವಾಸಿ ಪೋರ್ನ್‌ ಫಿಲಂ ಕಂಪನಿ ಮಿಲಿ ಪೆರು (Mily Peru) ಸಹಯೋಗದ ಚಿತ್ರಗಳಲ್ಲಿ ನಟಿಸಿದ್ದರು.

ಥೈನಾ ಪೋರ್ನ್‌ ಉದ್ಯಮದಲ್ಲಿ ತಾನು ಪಟ್ಟ ಮಾನಸಿಕ ಆತಂಕ, ತನ್ನ ಮಾನಸಿಕ ಸಮಸ್ಯೆ ಹಾಗೂ ಅದಕ್ಕಾಗಿ ಕೌನ್ಸೆಲಿಂಗ್‌ ಪಡೆದುದರ ಬಗ್ಗೆಯೂ ಮಾತನಾಡಿದ್ದಾರೆ. “ನಮ್ಮೆಲ್ಲರಿಗೂ ಮಾನಸಿಕ ಆಘಾತಗಳಿವೆ. ನಾನು ಡಿಸ್ಟೀಮಿಯಾ ಮತ್ತು ಒಬ್ಸೆಸಿವ್-ಕಂಪಲ್ಸಿವ್ ಡಿಸಾರ್ಡರ್‌ನಿಂದ ಬಳಲುತ್ತಿದ್ದೇನೆ. ನನಗೆ ಸೈಕೋಸಿಸ್ ಇದೆ. ಅದಕ್ಕಾಗಿ ನಾನು ನಿದ್ರೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ಚಿಕಿತ್ಸೆ ಮತ್ತು ಔಷಧಿಗಳು ನನಗೆ ಚೆನ್ನಾಗಿರಲು ಸಹಾಯ ಮಾಡಿವೆ” ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತನ್ನ ಅಕಾಲಿಕ ಮರಣದ ಎಂಟು ತಿಂಗಳ ಮೊದಲು ಆಕೆ, ಪೋರ್ನ್‌ ಉದ್ಯಮದಲ್ಲಿ ತಾವು ಅನುಭವಿಸುತ್ತಿರುವ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡಿದ್ದಾರೆ. “ಈ ಜಾಲ ತುಂಬಾ ಪ್ರಬಲವಾಗಿದೆ. ಆರಂಭದಲ್ಲಿ ನಾನು ಕೇಸು ಹಾಕದಿರಲು ನಿರ್ಧರಿಸಿದ್ದೆ. ಪೋರ್ನ್‌ ಕಂಟೆಂಟ್‌ ನೀಡಲು ಪ್ರಾರಂಭಿಸಿದ ನಂತರ ನಾನು ಅಪಾರ ಲೈಂಗಿಕ ಕಿರುಕುಳ ಮತ್ತು ನಿಂದನೆಯನ್ನು ಅನುಭವಿಸಿದ್ದೇನೆ. ಮೊದಲಿಗೆ ಅನೇಕರು ನನ್ನನ್ನು ಕೆಲಸಕ್ಕೆ ನೇಮಿಸಿಕೊಳ್ಳುವ ಮೂಲಕ ನನ್ನೊಂದಿಗೆ ಅವರು ಬಯಸಿದ್ದೆಲ್ಲಾ ಮಾಡಬಹುದು ಎಂದು ಭಾವಿಸಿದ್ದರು. ಆ ದಿನಗಳಲ್ಲಿ ನಾನು ಮನೆಗೆ ಬಂದು ಅಳುತ್ತಿದ್ದೆ” ಎಂದಿದ್ದಾರೆ.

“ನಾನು ಇನ್ನಷ್ಟು ಸ್ಟ್ರಾಂಗ್‌ ಆಗಬೇಕು ಎಂದು ಅವರು ಹೇಳುತ್ತಿದ್ದರು. ನಾನು ಅದನ್ನು ಬಿಟ್ಟುಬಿಟ್ಟೆ. ಹೀಗೆ ನನಗೆ ಹಲವು ಬಾರಿ ಸಂಭವಿಸಿದೆ. ಸಮಾಜವೇ ಅಕ್ಷರಶಃ ಹೊಲಸಾಗಿರುವಾಗ ಪೋರ್ನ್‌ ಉದ್ಯಮದಲ್ಲಿ ಮಹಿಳೆಯಾಗಿ ಈಸಿ ಜೈಸುವುದು ತುಂಬಾ ಕಷ್ಟ” ಎಂದಿದ್ದಾರೆ.

ಇದನ್ನೂ ಓದಿ: Porn Websites: ನಿಷೇಧ ಬದಲಿಗೆ ಪೋರ್ನ್ ವೆಬ್‌ಸೈಟ್ಸ್ ನಾರ್ಮಲ್ ಮಾಡಿ! ಪೋರ್ನ್‌ಹಬ್ ಮಾಲೀಕನ ಸಲಹೆ

Exit mobile version