ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿರುವ ಇಂಗ್ಲೆಂಡ್ ವೀಸಾ ಕಚೇರಿಯ ಟಿವಿ ಸ್ಕ್ರೀನ್‌ನಲ್ಲಿ ಅಶ್ಲೀಲ ವಿಡಿಯೊ
(Adult Video) ಪ್ರಸಾರವಾಗಿ ಅಲ್ಲಿದ್ದ ಜನತೆ ಒಂದು ಕ್ಷಣ ಆಘಾತಕ್ಕೊಳಗಾದ ಘಟನೆ ನಡೆದಿದೆ. ಈ ದೃಶ್ಯ ಕೆಮರಾದಲ್ಲಿ ಸೆರೆಯಾಗಿದ್ದು, ವಿಡಿಯೊ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿ ವೈರಲ್ (Viral News) ಆಗಿದೆ.
ಗೆರ್ರಿಯ ವೀಸಾ ಕೇಂದ್ರದಲ್ಲಿ ಈ ಮುಜುಗರದ ಘಟನೆ ನಡೆದಿದೆ. ಮಹಿಳೆಯರು ಮತ್ತು ಭದ್ರತಾ ಸಿಬ್ಬಂದಿ ನೋಡುತ್ತಿರುವಂತೆಯೇ ಈ ದೃಶ್ಯ ಪ್ರಸಾರವಾಗಿದೆ. ಸ್ವಲ್ಪ ಹೊತ್ತಿನಲ್ಲಿ ಕಚೇರಿಯ ಸಿಬ್ಬಂದಿ ಟಿವಿ ಸ್ವಿಚ್ ಆಫ್ ಮಾಡಿದರು.
The UK visa office in Karachi, operated by Gerry's, accidentally displays an inappropriate video on the large screen. pic.twitter.com/ExGNjcMht0
— Ahmer Khan 🇵🇰 ✪ (@StellarTweeting) November 23, 2023
ಕರಾಚಿಯ ವೀಸಾ ಕಚೇರಿಗೆ ಆಗಮಿಸಿದ್ದ ಜನರಿಗೆ ಅನುಕೂಲವಾಗಲೆಂದು ಕಾರ್ಯವಿಧಾನವನ್ನು ಟಿವಿಯಲ್ಲಿ ಪ್ರದರ್ಶಿಸಲಾಗುತ್ತದೆ. ಅದರಂತೆ ದೃಶ್ಯ ಪ್ರಸಾರವಾಗಿತ್ತಿತ್ತು. ಈ ವಿಡಿಯೊವನ್ನು ಹೈಲೈಟ್ ಮಾಡಲು ಕೆಮೆರಾ ಜೂಮ್ ಮಾಡಲಾಗಿದೆ. ಆಗ ಇದ್ದಕ್ಕಿದ್ದಂತೆ ದೊಡ್ಡ ಸ್ಕ್ರೀನ್ ಮೇಲೆ ಅಶ್ಲೀಲ ವಿಡಿಯೊ ಪ್ರಸಾರವಾಗಿದೆ. ಇದನ್ನು ನೋಡುತ್ತಿದ್ದಂತೆ ಅಲ್ಲಿದ್ದವರು ಒಂದು ಕ್ಷಣ ಶಾಕ್‌ಗೆ ಒಳಗಾದರು.
ಹಿಂದೆಯೂ ನಡೆದಿತ್ತು
ಇದೇ ರೀತಿಯ ಘಟನೆ ಈ ಹಿಂದೆ ಭಾರತದಲ್ಲೂ ನಡೆದಿತ್ತು. ವರ್ಷಾರಂಭದಲ್ಲಿ ಬಿಹಾರದ ಪಾಟ್ನಾ ರೈಲ್ವೆ ಸ್ಟೇಶನ್ನ 10ನೇ ಪ್ಲಾಟ್ಫಾರ್ಮ್ನಲ್ಲಿ ಮೂರು ನಿಮಿಷಗಳ ಕಾಲ ಅಶ್ಲೀಲ ಚಿತ್ರ ಪ್ರದರ್ಶನವಾಗಿತ್ತು. ಅಲ್ಲಿದ್ದ ನೂರಾರು ಪ್ರಯಾಣಿಕರು ಮುಜುಗರಗೊಂಡಿದ್ದರೆ, ಕೆಲವರು ಅದನ್ನು ವಿಡಿಯೊ ಮಾಡಿ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಮಾಡಿದ್ದರು. ಅದರ ಬೆನ್ನಲ್ಲೇ ಈ ಟಿವಿ ಪರದೆ ಮೇಲೆ ಜಾಹೀರಾತು ಪ್ರಸಾರ ಮಾಡಲು ಗುತ್ತಿಗೆ ತೆಗೆದುಕೊಂಡಿದ್ದ ದತ್ತಾ ಸ್ಟುಡಿಯೊ ಕಂಪನಿ ಪ್ರೈವೇಟ್ ಲಿಮಿಟೆಡ್ ವಿರುದ್ಧ ರೈಲ್ವೆ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಈ ಮಧ್ಯೆ ಈ ಅಶ್ಲೀಲ ವಿಡಿಯೊ ಪ್ರಸಾರವಾದ ಬಗ್ಗೆ ಅಮೆರಿಕದ ಪೋರ್ನ್ ಸ್ಟಾರ್ ಕೇಂದ್ರಾ ಲಸ್ಟ್ ಖುಷಿ ವ್ಯಕ್ತಪಡಿಸಿ, ಇದು ತನ್ನದೇ ವಿಡಿಯೊ ಇರಬಹುದು ಎನ್ನಿಸುತ್ತದೆ ಎಂದಿದ್ದರು. ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿದ್ದರು. ನೆಟ್ಟಿಗರು ಕೇಂದ್ರಾ ಅವರ ಪೋಸ್ಟ್‌ಗೆ ಕಮೆಂಟ್ ಮಾಡಿ, ಪಕ್ಕಾ ಇದು ನಿಮ್ಮ ವಿಡಿಯೊವೇ. ಭಾರತದಲ್ಲಿ ಇನ್ಮುಂದೆ ನಿಮ್ಮ ವಿಡಿಯೊಗಳು ಸಖತ್ ಫೇಮಸ್ ಆಗಲಿವೆ ಎಂದಿದ್ದರು. ಈ ವಿಚಾರ ಮರೆಯುವ ಮುನ್ನವೇ ಇಂತಹದ್ದೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.