ನವದೆಹಲಿ: ಅಫಘಾನಿಸ್ತಾನವನ್ನು(Afghanistan) ತಾಲಿಬಾನ್ (Taliban) ತನ್ನ ನಿಯಂತ್ರಣಕ್ಕೆ ತೆಗೆದುಕೊಂಡ ಬಳಿಕ ಮಹಿಳೆಯರು ಮತ್ತು ಹುಡುಗಿಯರಿಗೆ ಜಗತ್ತಿನಲ್ಲೇ ಅತಿ ಹೆಚ್ಚು ದಮನಕಾರಿ ರಾಷ್ಟ್ರವಾಗಿ ಬದಲಾಗಿದೆ ಎಂದು ವಿಶ್ವ ಸಂಸ್ಥೆ(United Nation) ಹೇಳಿದೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಹಿನ್ನೆಲೆಯಲ್ಲಿ ಯುಎನ್ ಮಿಷನ್ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಅಫಘಾನಿಸ್ತಾನದಲ್ಲಿ ಮಹಿಳೆಯರು ತಮ್ಮ ಮೂಲಭೂತಗಳಿಂದ ವಂಚಿತರಾಗಿದ್ದಾರೆ ಎಂದು ಹೇಳಿದೆ.
ಯುಎನ್ ಮಿಷನ್ ಬಿಡುಗಡೆ ಮಾಡಿರುವ ಅಧಿಕೃತ ಹೇಳಿಕೆಯಲ್ಲಿ, ಹೊಸ ತಾಲಿಬಾನ್ ನಾಯಕರು ಹೊಸ ಹೊಸ ನಿಯಮಗಳನ್ನು ಜಾರಿಗೆ ಮಾಡುವುದರಲ್ಲಿ ಹೆಚ್ಚು ಗಮನಕರಿಸಿದ್ದಾರೆ. ಈ ನಿಯಮಗಳಿಂದಾಗಿ ಮಹಿಳೆಯರು, ಹೆಣ್ಣು ಮಕ್ಕಳು ಮನೆಯಲ್ಲೇ ಬಂಧಿಯಾಗಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ತಿಳಿಸಲಾಗಿದೆ.
ವಿಶ್ವ ಸಂಸ್ಥೆಯ ವಿಶೇಷ ಪ್ರತಿನಿಧಿ ಹಾಗೂ ಅಫಘಾನಿಸ್ತಾನದಲ್ಲಿ ವಿಶ್ವ ಸಂಸ್ಥೆಯ ಅಸಿಸ್ಟನ್ಸ್ ಮಿಷನ್ ಮುಖ್ಯಸ್ಥರಾಗಿರುವ ರೋಜಾ ಇಸಕೋವ್ನಾ ಒಟುನ್‌ಬಯೇವಾ, ಅಫಘಾನಿಸ್ತಾನದಲ್ಲಿ ಮಹಿಳೆಯರ ಹಕ್ಕಗಳನ್ನು ಕಸಿಯುವಂಥ ನಿಯಮಗಳನ್ನು ಇತ್ತೀಚೆಗೆ ಜಾರಿಗೆ ತರಲಾಗಿದ್ದು, ಆ ಬಗ್ಗೆ ತಮ್ಮ ಖಂಡನೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Taliban Rule | ಸಾರ್ವಜನಿಕವಾಗಿ ಕಳ್ಳರ ಕೈ ಕತ್ತರಿಸಿದ ತಾಲಿಬಾನ್
ಕಾಬೂಲ್‌ನಲ್ಲಿ ವಿಶ್ವ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು, ಭದ್ರತಾ ಸಮಿತಿಯಲ್ಲಿ ಮಾತನಾಡಿ, ತಾಲಿಬಾನ್ ಅಧೀನದಲ್ಲಿರುವ ಅಫಘಾನಿಸ್ತಾವು ಮಹಿಳಾ ಹಕ್ಕುಗಳಿಗಾಗಿ ವಿಶ್ವದ ಅತ್ಯಂತ ದಮನಕಾರಿ ದೇಶವಾಗಿ ಉಳಿದಿದೆ ಎಂದು ಹೇಳಿದರು.