ನವದೆಹಲಿ: ಬ್ರಿಟನ್ ಪಿಎಂ ರಿಷಿ ಸುನಕ್ ಅವರ ಪತ್ನಿಯೂ ಆಗಿರುವ ಭಾರತೀಯ ಮೂಲದ ಅಕ್ಷತಾ ಮೂರ್ತಿ ಅವರು ಬ್ರಿಟನ್‌ನ ಏಷ್ಯನ್ ರಿಚ್ ಲಿಸ್ಟ್ 2022ರ (UK’s Asian Rich List) ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅಕ್ಷತಾ ಅವರು ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಅವರ ಪುತ್ರಿಯಾಗಿದ್ದಾರೆ. ಹಿಂದೂಜಾ ಕುಟುಂಬದವರು ಅಗ್ರಸ್ಥಾನದಲ್ಲಿರುವ ಈ ಪಟ್ಟಿಯಲ್ಲಿ ಇದೇ ಮೊದಲ ಬಾರಿಗೆ ರಿಷಿ-ಅಕ್ಷತಾ ಜೋಡಿ ಕಾಣಿಸಿಕೊಂಡಿದೆ.
ಇಂಗ್ಲೆಂಡ್‌ನಲ್ಲಿರುವ ಏಷ್ಯನ್ ಟಾಪ್ 20 ಶ್ರೀಮಂತರ ಪಟ್ಟಿಯಲ್ಲಿ ರಿಷಿ ಮತ್ತು ಅಕ್ಷತಾ 17ನೇ ಸ್ಥಾನದಲ್ಲಿದ್ದಾರೆ. ಇವರ ಆಸ್ತಿ ಮೌಲ್ಯ ಒಟ್ಟು 790 ಪೌಂಡ್ಸ್. ಅಂದರೆ, ಸುಮಾರು 7800 ಕೋಟಿ ರೂಪಾಯಿ. ನಂಬರ್ 1 ಸ್ಥಾನದಲ್ಲಿರುವ ಹಿಂದುಜಾ ಫ್ಯಾಮಿಲಿ ಆಸ್ತಿ ಮೌಲ್ಯ 30.5 ಬಿಲಿಯನ್ ಪೌಂಡ್ಸ್. ಅಂದರೆ ಸುಮಾರು 3 ಲಕ್ಷ ಕೋಟಿ ರೂಪಾಯಿ. ಕಳೆದ ವರ್ಷ 3 ಬಿಲಿಯನ್ ಪೌಂಡ್ಸ್ ಇತ್ತು. ಅದೀಗ ಮತ್ತೆ ಹೆಚ್ಚಾಗಿದೆ.
ಈ ವರ್ಷದ ಪಟ್ಟಿಯ ಒಟ್ಟು ಸಂಪತ್ತು 113.2 ಶತಕೋಟಿ ಪೌಂಡ್‌ಗಳಷ್ಟಿದೆ (ಸುಮಾರು 11 ಲಕ್ಷ ಕೋಟಿ ರೂ.), ಕಳೆದ ವರ್ಷಕ್ಕಿಂತ 13.5 ಶತಕೋಟಿ ಪೌಂಡ್‌ಗಳ ಹೆಚ್ಚಳವಾಗಿದೆ. ಬುಧವಾರ ರಾತ್ರಿ ವೆಸ್ಟ್‌ಮಿನಿಸ್ಟರ್ ಪಾರ್ಕ್ ಪ್ಲಾಜಾ ಹೊಟೇಲ್‌ನಲ್ಲಿ ನಡೆದ 24ನೇ ವಾರ್ಷಿಕ ಏಷ್ಯನ್ ಬಿಸಿನೆಸ್ ಅವಾರ್ಡ್ಸ್‌ನಲ್ಲಿ ಲಂಡನ್‌ನ ಮೇಯರ್ ಸಾದಿಕ್ ಖಾನ್ ಅವರು ಹಿಂದೂಜಾ ಗ್ರೂಪ್‌ನ ಸಹ-ಅಧ್ಯಕ್ಷ ಗೋಪಿಚಂದ್ ಹಿಂದುಜಾ ಅವರ ಪುತ್ರಿ ರಿತು ಛಾಬ್ರಿಯಾ ಅವರಿಗೆ ‘ಏಷ್ಯನ್ ಶ್ರೀಮಂತರ ಪಟ್ಟಿ 2022’ ನ ಪ್ರತಿಯನ್ನು ನೀಡಿದರು.
ಇದನ್ನೂ ಓದಿ | Rishi Sunak | ಅಕ್ಷತಾ ಮೂರ್ತಿಗೆ ಇನ್ಫೋಸಿಸ್‌ನಿಂದ 64 ಕೋಟಿ ರೂ. ಡಿವಿಡೆಂಡ್