Site icon Vistara News

All Eyes on Rafah: ಪ್ಯಾಲೆಸ್ತೀನ್‌ಗೆ ಬೆಂಬಲಿಸಿ ರೋಹಿತ್‌ ಪತ್ನಿ ಪೋಸ್ಟ್‌; ಫುಲ್‌ ಟ್ರೋಲ್‌- ಏನಿದು ʼಆಲ್‌ ಐಸ್‌ ಆನ್‌ ರಫಾʼ?

All Eyes on Rafah

ನವದೆಹಲಿ: ಇಸ್ರೇಲ್-ಪ್ಯಾಲೆಸ್ಟೈನ್ ಯುದ್ಧ(Israel-Palestine War) ಮುಂದುವರೆದಿರುವಂತೆಯೇ, ಇನ್ಸ್ಟಾಗ್ರಾಮ್, ಫೇಸ್ಬುಕ್ ಮತ್ತು ಎಕ್ಸ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ “ಎಲ್ಲರ ಕಣ್ಣುಗಳು ರಫಾ ಮೇಲೆ ”(All Eyes on Rafah) ಎನ್ನುವ ಫೋಟೋ ವು ವೈರಲ್ ಆಗಿದೆ. ಇದರ ಬೆನ್ನಲ್ಲೇ ಈ ಫೋಟೋಗಳನ್ನು ಹಂಚಿಕೊಂಡು ಸಿನಿಮಾ ತಾರೆಯರು, ಸೆಲೆಬ್ರಿಟಿಗಳು ಪ್ಯಾಲೆಸ್ತೀನ್‌ ಪರವಾಗಿ ಧ್ವನಿ ಎತ್ತಿದ್ದಾರೆ. ಅದೇ ರೀತಿ ಕ್ರಿಕೆಟಿಗ ರೋಹಿತ್‌ ಶರ್ಮಾ(Rohit Sharma) ಪತ್ನಿ ರಿತಿಕಾ ಸಜ್ದೇಹ್‌ ಕೂಡ ಸಾಮಾಜಿಕ ಜಾಲತಾಣದಲ್ಲಿ ಆಲ್ ಐಸ್‌ ಆನ್‌ ರಫಾ ಫೋಟೋ ಶೇರ್‌ ಮಾಡಿ ಪ್ಯಾಲೆಸ್ತೀನ್‌ಗೆ ಬೆಂಬಲ ಸೂಚಿಸಿದ್ದರು. ಇದರ ಬೆನ್ನಲ್ಲೇ ಅವರು ಭಾರೀ ಟೀಕೆಗೆ ಗುರಿಯಾಗಿದ್ದು, ಆಕೆಗೆ ರಫಾ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲ ಎಂದು ನೆಟ್ಟಿಗರು ಜರಿದಿದ್ದಾರೆ.

ರಫಾ ಎಲ್ಲಿದೆ ಅನ್ನೋದಾದರೂ ಗೊತ್ತಿದೆಯೇ? ಕಾಶ್ಮೀರಿ ಪಂಡಿತರ ನರಮೇಧ, ಹಿಂದೂಗಳ ಮೇಲಿನ ದೌರ್ಜನ್ಯ, ಹಿಂಸಾಚಾರ, ಪಾಕಿಸ್ತಾನ, ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ನರಮೇಧ ಇವುಗಳ ಬಗ್ಗೆ ಮೌನವಹಿಸಿದ್ದಿರಿ. ಈಗ ಹೇಗೆ ಪ್ಯಾಲೆಸ್ತೀನ್‌ ಪರವಾಗಿ ಧ್ವನಿ ಎತ್ತಲು ಸಾಧ್ಯವಾಯ್ತು ಎಂದು ಪ್ರಶ್ನಿಸಿದ್ದಾರೆ. ಇನ್ನು ಟ್ರೋಲ್‌ ಆಗುತ್ತಿದ್ದಂತೆ ರಿತಿಕಾ ಪೋಸ್ಟ್‌ ಡಿಲೀಟ್‌ ಮಾಡಿದ್ದಾರೆ.

ಏನಿದು ಆಲ್ ಐಸ್ ಆನ್ ರಫಾ ಫೋಟೋ?

ಆಲ್ ಐಸ್ ಆನ್ ರಫಾ ಚಿತ್ರವು ಗಾಝಾದ ದಕ್ಷಿಣದಲ್ಲಿರುವ ರಾಫಾ ನಗರದ ನಿರಾಶ್ರಿತರ ಶಿಬಿರದಲ್ಲಿ ಡೇರೆಗಳನ್ನು ತೋರಿಸುತ್ತದೆ, ಅಲ್ಲಿ ಇಸ್ರೇಲ್ನಿಂದ ನಡೆಯುತ್ತಿರುವ ದಾಳಿಯ ನಂತರ ಅನೇಕ ಫೆಲೆಸ್ತೀನೀಯರು ಸ್ಥಳಾಂತರಗೊಂಡಿದ್ದಾರೆ. ಸ್ಥಳೀಯ ಅಧಿಕಾರಿಗಳ ಪ್ರಕಾರ, ಭಾನುವಾರ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ 45 ನಾಗರಿಕರು ಸಾವನ್ನಪ್ಪಿದ್ದಾರೆ. ಇದರ ನಂತರ ಈ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು.

ರಫಾ ಮೇಲೆ ಎಲ್ಲರ ಕಣ್ಣು ಅರ್ಥ

‘ರಫಾ ಮೇಲೆ ಎಲ್ಲರ ಕಣ್ಣುಗಳು’ ಚಿತ್ರವು ನಡೆಯುತ್ತಿರುವ ಯುದ್ಧದ ಬಗ್ಗೆ ಜಾಗೃತಿ ಮೂಡಿಸಲು ಕರೆ ನೀಡುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಆಕ್ರಮಿತ ಫೆಲೆಸ್ತೀನ್ ಪ್ರದೇಶಗಳ ಕಚೇರಿಯ ನಿರ್ದೇಶಕ ರಿಕ್ ಪೀಪರ್ಕಾರ್ನ್ ಅವರ ಹೇಳಿಕೆಯಿಂದ ಈ ಘೋಷಣೆ ಹುಟ್ಟಿಕೊಂಡಿದೆ ಎಂದು ತೋರುತ್ತದೆ. ಫೆಬ್ರವರಿಯಲ್ಲಿ, “ಎಲ್ಲರ ಕಣ್ಣುಗಳು ರಫಾ ಮೇಲೆ ಇವೆ” ಎಂದು ಅವರು ಹೇಳಿದರು. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ನಗರವನ್ನು ಸ್ಥಳಾಂತರಿಸುವ ಯೋಜನೆಗೆ ಆದೇಶಿಸಿದ ಸ್ವಲ್ಪ ಸಮಯದ ನಂತರ ಈ ಬೆಳವಣಿಗೆ ನಡೆದಿದೆ.

ರಫಾವನ್ನು ಹಮಾಸ್‌ ಉಗ್ರರ ಕಟ್ಟ ಕಡೇಯ ಭದ್ರಕೋಟೆ ಎಂದಿರುವ ನೆತನ್ಯಾಹು, ಅದನ್ನು ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿರುವುದಾಗಿ ತಿಳಿಸಿದ್ದರು. ಈ ಪ್ರದೇಶದಲ್ಲಿ ಸುಮಾರು 14 ದಶಲಕ್ಷಕ್ಕೂ ಹೆಚ್ಚು ಫೆಲೆಸ್ತೀನೀಯರು ಆಶ್ರಯ ಪಡೆದಿದ್ದು, ಇಸ್ರೇಲ್‌ ನಡೆಸಿದ ದಾಳಿಯಲ್ಲಿ 45ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು. ಪ್ಯಾಲೆಸ್ಟೈನ್ ಮೇಲಿನ ಇಸ್ರೇಲ್‌ನ ಇತ್ತೀಚಿನ ದಾಳಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕವಾಗಿ ಖಂಡಿಸಲಾಗುತ್ತಿದೆ. ಈ ಸಾಲಿನಲ್ಲಿ ಹಲವು ಭಾರತೀಯ ಸೆಲೆಬ್ರಿಟಿಗಳು ಸಹ ಸೇರಿದ್ದಾರೆ.

ಇದನ್ನೂ ಓದಿ:Aditi Prabhudeva: ತಾಯಿಯಾದ ಬಳಿಕ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟ ಅದಿತಿ ಪ್ರಭುದೇವ!

ರಫಾ ಮೇಲಿನ ಇತ್ತೀಚಿನ ಇಸ್ರೇಲ್​​ ದಾಳಿಯು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಅನೇಕರು ಗಾಜಾದಲ್ಲಿ ಶೀಘ್ರ ಕದನ ವಿರಾಮಕ್ಕೆ ಕರೆ ನೀಡಿದ್ದಾರೆ. ಪ್ಯಾಲೆಸ್ಟೈನ್ ಜನರನ್ನು ಬೆಂಬಲಿಸಿ ಮಾತನಾಡಿದವರಲ್ಲಿಸೌತ್ ಸ್ಟಾರ್ ನಟಿ ಸಮಂತಾ ರುತ್ ಪ್ರಭು ಕೂಡ ಒಬ್ಬರು. ಇಸ್ರೇಲ್‌ನ ಕ್ರಮಗಳನ್ನು ಖಂಡಿಸುವ ಬರಹವನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿ ಸೆಕ್ಷನ್​ನಲ್ಲಿ ಶೇರ್ ಮಾಡಿದ್ದಾರೆ.

Exit mobile version