Site icon Vistara News

US Flights Grounded | ಅಮೆರಿಕದಲ್ಲಿ ಭಾರಿ ತಾಂತ್ರಿಕ ದೋಷ, ಎಲ್ಲ ವಿಮಾನ ಹಾರಾಟ ಸ್ಥಗಿತ, ಭಾರತದ ಪ್ರಯಾಣಿಕರಿಗೂ ತೊಂದರೆ

US Flights Grounded

ವಾಷಿಂಗ್ಟನ್‌: ಅಮೆರಿಕದ ವಿಮಾನಯಾನ ನಿಯಂತ್ರಣ ಸಂಸ್ಥೆಯ (FAA) ಕಂಪ್ಯೂಟರ್‌ ಸಿಸ್ಟಮ್‌ನಲ್ಲಿ ಭಾರಿ ಪ್ರಮಾಣದ ತಾಂತ್ರಿಕ ದೋಷ ಕಂಡುಬಂದಿದ್ದು, ಅಮೆರಿಕದಾದ್ಯಂತ ಎಲ್ಲ ವಿಮಾನಗಳ ಹಾರಾಟ (US Flights Grounded) ಸ್ಥಗಿತಗೊಂಡಿದೆ. ಇದರಿಂದ ಭಾರತಕ್ಕೆ ಆಗಮಿಸಬೇಕಿದ್ದ ಸಾವಿರಾರು ಪ್ರಯಾಣಿಕರಿಗೂ ತೊಂದರೆಯಾಗಿದೆ ಎಂದು ತಿಳಿದುಬಂದಿದೆ.

ಅಮೆರಿಕದಾದ್ಯಂತ ಎಫ್‌ಎಎ ಸಿಸ್ಟಮ್‌ನಲ್ಲಿ ಲೋಪ ಕಾಣಿಸಿದೆ. ಇದರಿಂದಾಗಿ ಪೈಲಟ್‌ಗಳು ಸೇರಿ ವಿಮಾನದ ಸಿಬ್ಬಂದಿಗೆ ಒದಗಿಸುತ್ತಿದ್ದ ಸಕಲ ಮಾಹಿತಿ ಸ್ಥಗಿತಗೊಂಡಿದೆ. ಇದರಿಂದಾಗಿ ಅಮೆರಿಕದಲ್ಲಿ ಹಾರಾಟ ನಡೆಸಬೇಕಿದ್ದ ಸುಮಾರು 1,100 ವಿಮಾನಗಳ ಹಾರಾಟ ಸ್ಥಗಿತಗೊಂಡಿದೆ. ಇದರಿಂದಾಗಿ ಭಾರತ ಸೇರಿ ಜಗತ್ತಿನಾದ್ಯಂತ ವಿಮಾನ ಸೇವೆ ವ್ಯತ್ಯಯ, ಪ್ರಯಾಣಿಕರಿಗೆ ತೊಂದರೆ ಆಗಿದೆ.

ವಿಮಾನಗಳ ಟ್ರ್ಯಾಕಿಂಗ್‌ ಸಂಸ್ಥೆ ಫ್ಲೈಟ್‌ ಅವೇರ್‌ (FlightAware) ಮಾಹಿತಿ ಪ್ರಕಾರ, ಅಮೆರಿಕದ ಕಾಲಮಾನದ ಪ್ರಕಾರ ಬೆಳಗ್ಗೆ 5.30ರ ವೇಳೆಗೆ 400 ವಿಮಾನಗಳ ಹಾರಾಟ ಸ್ಥಗಿತಗೊಂಡಿದೆ. ಇದಾದ ಬಳಿಕವೂ ಸಮಸ್ಯೆ ಬಗೆಹರಿಯದ ಕಾರಣ ನೂರಾರು ವಿಮಾನಗಳು ಹಾರಾಟ ನಡೆಸುತ್ತಿಲ್ಲ. ತಂತ್ರಜ್ಞರು ಸಮಸ್ಯೆ ಬಗೆಹರಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿಳಿಸಿದೆ.

ಇದನ್ನೂ ಓದಿ | Bomb Threat | ಬಾಂಬ್‌ ಬೆದರಿಕೆ ಹಿನ್ನೆಲೆ 244 ಜನರಿದ್ದ ಮಾಸ್ಕೊ-ಗೋವಾ ವಿಮಾನ ಗುಜರಾತ್‌ನಲ್ಲಿ ತುರ್ತು ಭೂಸ್ಪರ್ಶ

Exit mobile version