ನವದೆಹಲಿ: ಅಕ್ರಮ ವಲಸಿಗರ ಹಾವಳಿಯನ್ನು ತಪ್ಪಿಸಲು ವಿವಾದಾತ್ಮಕ ಹೊಸ ವಿಧೇಯಕವನ್ನು ಬ್ರಿಟನ್ ಪ್ರಧಾನಿ ರಿಷಿ ಸುನಕ್(Rishi Sunak) ಅವರು ಜಾರಿ ಮಾಡಲು ಹೊರಟಿದ್ದಾರೆ. ಇನ್ನು ಮುಂದೆ ಅಕ್ರಮವಾಗಿ ಇಂಗ್ಲೆಂಡ್‌ನೊಳಗೆ ಬರುವವರಿಗೆ ಆಶ್ರಯ ನೀಡಲಾಗುವುದಿಲ್ಲ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ(UK Illegal Migrants Law:).
ಒಂದು ವೇಳೆ ನೀವು ಅಕ್ರಮವಾಗಿ ದೇಶದೊಳಗೆ ಬಂದಿದ್ದರೆ, ನಿಮಗೆ ಆಶ್ರಯ ಸಿಗುವುದಿಲ್ಲ. ನಿಮಗೆ ನಮ್ಮ ಆಧುನಿಕ ಸ್ಲೇವರಿ ಪ್ರೊಟೆಕ್ಷನ್‌ನ ಲಾಭಗಳು ದೊರೆಯುವುದಿಲ್ಲ. ನೀವು ಮಾನವ ಹಕ್ಕುಗಳನ್ನು ಕೇಳುವಂತಿಲ್ಲ ಮತ್ತು ಇಲ್ಲಿ ಇರುವಂತೆಯೂ ಇಲ್ಲ ಎಂದು ಟ್ವೀಟ್ ರಿಷಿ ಸುನಕ್ ಟ್ವೀಟ್ ಮಾಡಿದ್ದಾರೆ.
ಯಾರು ಅಕ್ರಮವಾಗಿ ದೇಶದೊಳಕ್ಕೆ ಬಂದಿದ್ದಾರೋ ಅವರನ್ನು ನಾವು ಪತ್ತೆ ಹಚ್ಚಿ ವಶಕ್ಕೆ ಪಡೆಯುತ್ತೇವೆ. ವಾರದೊಳಗೇ ಅವರನ್ನು, ಸುರಕ್ಷಿತವಾಗಿದ್ದರೆ ಅವರ ಮಾತೃದೇಶ ಇಲ್ಲವೇ ರವಾಂಡಾದಂಥ ಸುರಕ್ಷಿತ ಮೂರನೇ ರಾಷ್ಟ್ರಗಳಿಗೆ ಕಳುಹಿಸಿ ಕೊಡುತ್ತೇವೆ. ಒಮ್ಮೆ ನಿಮ್ಮನ್ನು ಹೊರ ಹಾಕಿದ ಮೇಲೆ ನಿಮ್ಮನ್ನು ನಿಷೇಧಿಸಲಾಗಿತ್ತದೆ. ಅಮೆರಿಕ ಮತ್ತು ಆಸ್ಟ್ರೇಲಿಯಾದಲ್ಲಿರುವಂತೆ ನೀವು ಮತ್ತೆ ಎಂದಿಗೂ ಬ್ರಿಟನ್‌ಗೆ ಪ್ರವೇಶ ಪಡೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: PM Rishi Sunak: ಕನ್ಸರ್ವೇಟಿವ್ ಪಕ್ಷದ ಚೇರ್ಮನ್ ನಧೀಮ್ ಜವಾಹಿಯನ್ನು ಕಿತ್ತುಹಾಕಿದ ಪಿಎಂ ರಿಷಿ ಸುನಕ್
ಈ ಸಂಬಂಧ ರಿಷಿ ಸುನಕ್ ಅವರ ಸರ್ಕಾರವು ಇಲ್‌ಲೀಗಲ್ ಮೈಗ್ರೇಷನ್ ಬಿಲ್ ಸಿದ್ಧಪಡಿಸುತ್ತಿದೆ. ಸಣ್ಣ ಬೋಟ್‌ಗಳ ಮೂಲಕ ಇಂಗ್ಲಿಷ್ ಕಾಲುವೆ ದಾಟಿ ದೇಶದೊಳಕ್ಕೆ ಅಕ್ರಮವಾಗಿ ಬಂದಿರುವ ವಿರುದ್ಧ ಈ ಬಿಲ್ ಸಮರ ಸಾರಲಿದೆ. ಹಾಗೆಯೇ ಇದು ವಿವಾದಕ್ಕೂಕಾರಣವಾಗಿದೆ.