ಲಂಡನ್: ಅಮೆರಿಕನ್ ಬುಲ್ಲಿ ಎಕ್ಸ್‌ಎಲ್ (American Bully XL Ban) ತಳಿಯ ನಾಯಿಯ ಮೇಲೆ ಇಂಗ್ಲೆಂಡ್ ಸರ್ಕಾರ (UK Government) ನಿಷೇಧ ಹೇರಲು ಮುಂದಾಗಿದೆ. ಇತ್ತೀಚೆಗಷ್ಟೇ, ಸೆಂಟ್ರಲ್ ಇಂಗ್ಲೆಂಡ್‌ನಲ್ಲಿ ಈ ನಾಯಿಯ ದಾಳಿಗೆ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಈ ಕಾರಣಕ್ಕಾಗಿಯೇ ಬ್ರಿಟನ್ ಪ್ರಧಾನಿ ರಿಷಿ ಸುನಕ್ (Britain PM Rishi Suank) ಅವರು ಅಮೆರಿಕನ್ ಬುಲ್ಲಿ ಎಕ್ಸ್‌ಎಲ್ ನಾಯಿಯನ್ನು ನಿಷೇಧಿಸುವ ನಿರ್ಧಾರವನ್ನು ಕೈಗೊಂಡು, ಜಾರಿ ಮಾಡಲು ಹೊರಟಿದ್ದಾರೆ.
ಅಮೆರಿಕನ್ ಎಕ್ಸ್‌ಎಲ್ ಬುಲ್ಲಿ ನಮ್ಮ ಸಮುದಾಯಗಳಿಗೆ, ವಿಶೇಷವಾಗಿ ಮಕ್ಕಳಿಗೆ ಸ್ಪಷ್ಟ ಮತ್ತು ಮಾರಣಾಂತಿಕವಾದ ಅಪಾಯವನ್ನು ತಂದೊಡ್ಡುತ್ತಿದೆ. ನಾವು ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಈ ತಳಿಯ ನಿಷೇಧಿಸಲು ನಾನು ತುರ್ತು ಸಲಹೆಯನ್ನು ನೀಡಿದ್ದೇನೆ ಎಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಹೇಳಿದ್ದಾರೆ.
ಎರಡು ನಾಯಿಗಳ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿಯ ರಕ್ಷಣೆಗಾಗಿ ಗುರುವಾರ ತುರ್ತು ಸೇವೆಗೆ ಕರೆ ಮಾಡಲಾಗಿತ್ತು. ಆದರೆ, ದುರದೃಷ್ಟವಶಾತ್, ನಾಯಿ ದಾಳಿಗಳಿಂದ ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗಿದೇ ಮೃತಪಟ್ಟಿದ್ದಾರೆ. ಅವರನ್ನು ಉಳಿಸಿಕೊಳ್ಳುವ ಯಾವುದೇ ಪ್ರಯತ್ನಗಳು ಕೈಗೂಡಲಿಲ್ಲ ಎಂದು ವೆಸ್ಟ್ ಮಿಡ್ಲ್ಯಾಂಡ್ಸ್ ಆಂಬ್ಯುಲೆನ್ಸ್ ಸೇವೆ ತಿಳಿಸಿದೆ.
ಈ ಸುದ್ದಿಯನ್ನೂ ಓದಿ: Street dog attack | 10 ವರ್ಷದ ಬಾಲಕಿ ಮೇಲೆ ಬೀದಿ ನಾಯಿ ದಾಳಿ, ಊಟಕ್ಕೆ ಹೋಗುತ್ತಿದ್ದಾಗ ಅಟ್ಯಾಕ್
ಈ ಘಟನೆಗೆ ಸಂಬಂಧಿಸಿದಂತೆ ಸ್ಟಾಫರ್ಡ್‌ಶೈರ್ ಪೋಲಿಸರು 30 ವರ್ಷದ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಈತ ತನ್ನ ನಾಯಿಗಳ ಮೇಲಿನ ನಿಯಂತ್ರಣ ಕಳೆದುಕೊಂಡ ಪರಿಣಾಮವೇ ಅವರು ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕ ದಾಳಿ ನಡೆಸಿದವು. ಈ ಘಟನೆಯನ್ನು ಕುರಿತು ಪೊಲೀಸ್ ತಂಡಗಳು ಇನ್ನೂ ತನಿಖೆ ನಡೆಸುತ್ತಿವೆ. ಸ್ಟಾಫರ್ಡ್‌ಶೈರ್ ಬುಲ್ ಟೆರಿಯರ್ ಕ್ರಾಸ್‌ಬ್ರೀಡ್ ಮತ್ತು ಅಮೇರಿಕನ್ ಬುಲ್ಲಿ ಎಕ್ಸ್‌ಎಲ್ ನಾಯಿಗಳ ದಾಳಿಯಲ್ಲಿ 11 ವರ್ಷದ ಬಾಲಕಿ ಗಾಯಗೊಂಡಿರುವ ಒಂದು ವಾರದೊಳಗೆ ಮತ್ತೊಬ್ಬ ವ್ಯಕ್ತಿ ಮೃತಪಟ್ಟಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ.