Site icon Vistara News

Aruna Miller | ಭಾರತ ಮೂಲದ ಅರುಣಾ ಮಿಲ್ಲರ್‌ ಅಮೆರಿಕದ ಮೇರಿಲ್ಯಾಂಡ್‌ ಲೆಫ್ಟಿನೆಂಟ್‌ ಗವರ್ನರ್‌, ಇತಿಹಾಸ ಸೃಷ್ಟಿ

Aruna Miller

ವಾಷಿಂಗ್ಟನ್‌: ಅಮೆರಿಕದ ಮೇರಿಲ್ಯಾಂಡ್‌ ರಾಜ್ಯದ ಗವರ್ನರ್‌ ಆಗಿ ಭಾರತ ಮೂಲದ ಅರುಣಾ ಮಿಲ್ಲರ್‌ (Aruna Miller) (58) ಆಯ್ಕೆಯಾಗಿದ್ದಾರೆ. ಆ ಮೂಲಕ ಮೇರಿಲ್ಯಾಂಡ್‌ ಲೆಫ್ಟಿನೆಂಟ್‌ ಗವರ್ನರ್‌ ಆಗಿ ಆಯ್ಕೆಯಾದ ಭಾರತ ಮೂಲದ (Indian-American) ಮೊದಲಿಗರು ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ.

ಮೇರಿಲ್ಯಾಂಡ್‌ ಹೌಸ್‌ನ ಮಾಜಿ ಡೆಲಿಗೇಟ್‌ ಆಗಿರುವ ಇವರು 10ನೇ ಲಿಫ್ಟಿನೆಂಟ್‌ ಗವರ್ನರ್‌ ಆಗಿ ಆಯ್ಕೆಯಾಗಿದ್ದಾರೆ. ಪ್ರಮಾಣವಚನ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, “ಭಾರತದಲ್ಲಿ ಹುಟ್ಟಿ, ಅಮೆರಿಕಕ್ಕೆ ಬಂದು, ಎಂಜಿನಿಯರ್‌ ವೃತ್ತಿ ಆರಂಭಿಸಿ, ರಾಜಕಾರಣಿಯಾಗಿ, ಈಗ ಈ ಹಂತಕ್ಕೆ ತಲುಪಿರುವುದು ಸಂತಸ ತಂದಿದೆ” ಎಂದಿದ್ದಾರೆ.

ಆಂಧ್ರಪ್ರದೇಶ ಮೂಲದವರಾದ ಅರುಣಾ ಮಿಲ್ಲರ್‌ ಅವರ ಕುಟುಂಬಸ್ಥರು, ಅರುಣಾ 7 ವರ್ಷದವರಾಗಿದ್ದಾಗ ಅಮೆರಿಕಕ್ಕೆ ವಲಸೆ ಹೋಗಿದ್ದಾರೆ. ಇವರು ಡೆಮಾಕ್ರಟಿಕ್‌ ಪಕ್ಷದವರಾಗಿದ್ದಾರೆ. ಇವರ ತಂದೆ ಎಂಜಿನಿಯರ್‌ ಆಗಿದ್ದು, ಕುಟುಂಬ ಸಮೇತ ಅಮೆರಿಕಕ್ಕೆ ವಲಸೆ ಹೋಗಿದ್ದಾರೆ. ಹಾಗಾಗಿ, ಅರುಣಾ ಮಿಲ್ಲರ್‌ ಅಲ್ಲಿಯೇ ಶಿಕ್ಷಣ ಪಡೆದು, ಎಂಜಿನಿಯರ್‌ ಆಗಿದ್ದರು.

ಇದನ್ನೂ ಓದಿ | US Midterm Elections | ಅಮೆರಿಕ ಚುನಾವಣೆಯಲ್ಲಿ ಗೆದ್ದು ಇತಿಹಾಸ ಬರೆದ 23 ವರ್ಷದ ಭಾರತ ಮೂಲದ ನಬೀಲಾ ಸೈಯದ್

Exit mobile version