Site icon Vistara News

Asif Merchant: ಡೊನಾಲ್ಡ್‌ ಟ್ರಂಪ್‌ ಹತ್ಯೆಗೆ ಸಂಚು ರೂಪಿಸಿದ್ದ ಪಾಕಿಸ್ತಾನಿ ಪ್ರಜೆ ಅರೆಸ್ಟ್‌

Asif Merchant

ನವದೆಹಲಿ: ಕಳೆದ ತಿಂಗಳು ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌(Donald Trump) ಸೇರಿದಂತೆ ರಾಜಕಾರಣಿಗಳು ಮತ್ತು ಅಮೆರಿಕ ಸರ್ಕಾರದ ಅಧಿಕಾರಿಗಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನಿ ಪ್ರಜೆಯೊಬ್ಬನನ್ನು ಅರೆಸ್ಟ್‌ ಮಾಡಲಾಗಿದೆ. ಇರಾನ್‌ ಜೊತೆ ನಂಟು ಹೊಂದಿದ್ದ ಆಸಿಫ್‌ ಮರ್ಚೆಂಟ್‌(Asif Merchant) ಅರೆಸ್ಟ್‌ ಮಾಡಲಾಗಿದೆ. ಆದಾಗ್ಯೂ, ಕಳೆದ ತಿಂಗಳು ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿ ಡೊನಾಲ್ಡ್ ಟ್ರಂಪ್ ಅವರ ಹತ್ಯೆಯ ಯತ್ನಕ್ಕೂ ಆಸಿಫ್ ಮರ್ಚೆಂಟ್‌ನ ಯೋಜನೆಗೂ ಸಂಬಂಧವಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಇನ್ನೊಬ್ಬ ವ್ಯಕ್ತಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

US ನ್ಯಾಯಾಂಗ ಇಲಾಖೆಯ ಪ್ರಕಾರ, ಆಸಿಫ್ ಮರ್ಚೆಂಟ್(46), ಅಮೆರಿಕದಲ್ಲಿ ರಾಜಕಾರಣಿ ಅಥವಾ US ಸರ್ಕಾರಿ ಅಧಿಕಾರಿಯನ್ನು ಹತ್ಯೆ ಮಾಡಲು ಹಂತಕರನ್ನು ನೇಮಿಸಿಕೊಂಡಿದೆ. ಕ್ರಾಂತಿಕಾರಿ ಗಾರ್ಡ್‌ಗಳ ಕಮಾಂಡರ್ ಕಾಸ್ಸೆಮ್ ಸೊಲೈಮಾನಿಯನ್ನು ಅಮೆರಿಕ ಕೊಂದ ಪ್ರತೀಕಾರವಾಗಿ ಈ ದಾಳಿ ನಡೆದಿತ್ತು.

ಅಮೆರಿಕದಲ್ಲಿ ನಡೆದಿರುವ ರಾಜಕಾರಣಿಗಳು ಅಧಿಕಾರಿಗಳ ಹತ್ಯೆಗೆ ಸಂಚು ರೂಪಿಸಿದ್ದ ಪ್ರಕರಣದಲ್ಲಿ ಇರಾನ್‌ ಜೊತೆ ನಂಟು ಹೊಂದಿದ್ದ ವ್ಯಕ್ತಿಯನ್ನು ಅರೆಸ್ಟ್‌ ಮಾಡಲಾಗಿದೆ. ಸರ್ಕಾರಿ ಅಧಿಕಾರಿ ಅಥವಾ ಯಾವುದೇ ಯುಎಸ್ ಪ್ರಜೆಯನ್ನು ಕೊಲ್ಲಲು ವಿದೇಶಿ-ನಿರ್ದೇಶಿತ ಸಂಚು, ಇದು ನಮ್ಮ ರಾಷ್ಟ್ರೀಯ ಭದ್ರತೆಗೆ ಅಪಾಯವಾಗಿದೆ ಎಂದು FBI ನಿರ್ದೇಶಕ ಕ್ರಿಸ್ಟೋಫರ್ ವ್ರೇ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಯಾರಿಯವನು ಆಸಿಫ್‌ ಮರ್ಚೆಂಟ್‌?

ಇದನ್ನೂ ಓದಿ: Donald Trump: ಡೊನಾಲ್ಡ್‌ ಟ್ರಂಪ್‌ ಕಿವಿಗೆ ತಾಗಿದ್ದು ಬುಲೆಟ್‌ ಅಲ್ಲ? ಹಾಗಾದ್ರೆ ಏನದು? ಹುಸಿ ದಾಳಿಯ ಅನುಮಾನ ಏಕೆ?

Exit mobile version