Site icon Vistara News

Assault in US: ಅಮೆರಿಕದಲ್ಲಿ ಚೂರಿ ಇರಿತ, ಭಾರತೀಯ ವಿದ್ಯಾರ್ಥಿ ಗಂಭೀರ

usa cop

ವಾಷಿಂಗ್ಟನ್: ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬನನ್ನು ಚೂರಿಯಿಂದ (knife attack, Assault in US) ಇರಿಯಲಾಗಿದೆ. ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದಾನೆ.

ಅಮೆರಿಕದ ಇಂಡಿಯಾನಾ ರಾಜ್ಯದ ವಾಲ್ಪಾರೈಸೊ ನಗರದ ಸಾರ್ವಜನಿಕ ಜಿಮ್‌ನಲ್ಲಿ 24 ವರ್ಷದ ಭಾರತೀಯ ವಿದ್ಯಾರ್ಥಿ ವರುಣ್‌ ಎಂಬಾತನಿಗೆ ದುಷ್ಕರ್ಮಿಯೊಬ್ಬ ಚಾಕುವಿನಿಂದ ಇರಿದಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ. ದಾಳಿಕೋರನನ್ನು ಜೋರ್ಡಾನ್‌ ಆಂಡ್ರಾಡ್ ಎಂದು ಗುರುತಿಸಲಾಗಿದೆ. ಘಟನೆಯ ನಂತರ ದಾಳಿಕೋರನನ್ನು ಬಂಧಿಸಲಾಯಿತು. ಮಾರಕ ಆಯುಧದಿಂದ ಹಲ್ಲೆ ಮಾಡಿದ ಮತ್ತು ಕೊಲೆ ಯತ್ನದ ಆರೋಪವನ್ನು ದಾಖಲಿಸಲಾಗಿದೆ.

“ವರುಣ್ ಮೇಲೆ ದಾಳಿಕೋರ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಗಾಯದ ತೀವ್ರತೆಯಿಂದಾಗಿ ಅವರನ್ನು ಅಂತಿಮವಾಗಿ ಫೋರ್ಟ್ ವೇಯ್ನ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಬದುಕುಳಿಯುವ ಸಾಧ್ಯತೆ ಶೂನ್ಯದಿಂದ ಐದು ಪ್ರತಿಶತದಷ್ಟು ಮಾತ್ರ ಇದೆ” ಎಂದು ವರದಿ ಹೇಳಿದೆ.

ದಾಳಿಕೋರ ಆಂಡ್ರಾಡ್ ಬೆಳಿಗ್ಗೆ ಜಿಮ್‌ಗೆ ಮಸಾಜ್ ಮಾಡಿಸಿಕೊಳ್ಳಲು ಬಂದಾಗ, ಅಲ್ಲಿ ನಿಗದಿತ ವ್ಯಕ್ತಿಯಲ್ಲದೆ ಬೇರೊಬ್ಬ ಇದ್ದುದನ್ನು ಕಂಡು ಕೆರಳಿ ದಾಳಿ ನಡೆಸಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಅಧಿಕಾರಿಗಳು ಈ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Actor Darshan: ನಟ ದರ್ಶನ್ ವಿರುದ್ಧ ಕೇಸ್‌ ದಾಖಲು; ನಾಯಿಗಳು ಕಚ್ಚಿದ್ದಕ್ಕೆ ವೈದ್ಯೆ ದೂರು

Exit mobile version