ಟೆಲ್ ಅವಿವ್: ಇಸ್ರೇಲ್ ಮೇಲೆ ಹಮಾಸ್ ಬಂಡುಕೋರರು (Hamas Terrorists) ನಡೆಸಿದ ಭೀಭತ್ಸ ದಾಳಿಯ ಮತ್ತೊಂದು ಘಟನೆ ಬಹಿರಂಗವಾಗಿದೆ. ಬಂಡುಕೋರರು ಕನಿಷ್ಠ ಮಕ್ಕಳು ಮತ್ತು ಶಿಶುಗಳನ್ನು ಹತ್ಯೆಗೈದಿದ್ದಾರೆ(40 babies Killed). ಈ ಪೈಕಿ ಕೆಲವು ಮಕ್ಕಳ ಶಿರಚ್ಛೇದ ಮಾಡಲಾಗಿದೆ ಎಂದು ಇಸ್ರೇಲ್‌ನ ಐ24 ನ್ಯೂಸ್ ವರದಿ ಮಾಡಿದೆ. ಹಮಾಸ್ ದಾಳಿಯನ್ನು ಎದುರಿಸಲು ರಿಸರ್ವ್ ಸರ್ವೀಸ್ ಕರೆಯಿಸಿಕೊಳ್ಳುವಷ್ಟರಲ್ಲಿ ಈ ಹತ್ಯೆ ನಡೆದು ಹೋಗಿತ್ತು. ಆದರೆ, ಹತ್ಯೆಯ ದೃಶ್ಯಗಳು ನಿಮ್ಮ ಕಲ್ಪನೆಗೂ ಮೀರಿದ್ದಾಗಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ಮಧ್ಯೆ, ಈ ಕಾಳಗದಲ್ಲಿ ಮೃತಪಟ್ಟವರ ಸಂಖ್ಯೆ 3000ಕ್ಕೆ ಏರಿಕೆಯಾಗಿದೆ.
ಶಿರಚ್ಛೇದಗೊಂಡ ಶಿಶುಗಳನ್ನು ಕಂಡಿದ್ದೇವೆ ಎಂದು ಕೆಲವು ಸೈನಿಕರು ಹೇಳಿದ್ದಾರೆ. ಮಲಗಿದ್ದಾಗಲೇ ಇಡೀ ಕುಟುಂಬದ ಸದಸ್ಯರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಗರ್ನಿಗಳಿಂದ ಇದುವರೆಗೆ ಹತ್ಯೆಗೀಡಾದ ಸುಮಾರು 40 ಶಿಶುಗಳು ಮತ್ತು ಮಕ್ಕಳ ಶವಗಳನ್ನು ಹೊರ ತೆಗೆಯಲಾಗಿದೆ. ಅಕ್ಟೋಬರ್ 7ರಂದು ಹಮಾಸ್ ನಡೆಸಿದ ಭೀಕರ ದಾಳಿಯಲ್ಲಿ ಇದುವರೆಗೆ ಕನಿಷ್ಠ 900 ಇಸ್ರೇಲಿಗಳು ಮೃತಪಟ್ಟು, 2600ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.
ಇದಕ್ಕೂ ಮೊದಲು ಹಮಾಸ್ ಬಂಡುಕೋರರ ಮತ್ತೊಂದು ಭೀಭತ್ಸ ಕೃತ್ಯವನ್ನು ಮಾಧ್ಯಮಗಳು ವರದಿ ಮಾಡಿದ್ದವು. ಕಿಬ್ಬತ್ಜ್ ಗಡಿ ಸಮೀಪ ಇರುವ ಕಫಾರ್ ಅಜ್ಜಾ ಪ್ರದೇಶಕ್ಕೆ ಇಸ್ರೇಲ್ ಡಿಫೆನ್ಸ್ ಫೋರ್ಸ್(ಐಡಿಎಫ್) ಅಂತಾರಾಷ್ಟ್ರೀಯ ಪತ್ರಕರ್ತರನ್ನು ಕರೆದುಕೊಂಡು ಹೋಗಿ ಹಮಾಸ್ ಉಗ್ರರ ಭಯಂಕರ ಕೃತ್ಯವನ್ನು ತೋರಿಸಿತ್ತು. ದಾಳಿಯ ವೇಳೆ 70 ನಿವಾಸಿಗಳನ್ನು ಹಮಾಸ್ ಬಂಡುಕೋರ ಹತ್ಯೆ ಮಾಡಿದ್ದರು.
ಈ ಸುದ್ದಿಯನ್ನೂ ಓದಿ: ಮೋದಿಗೆ ಇಸ್ರೇಲ್ ಪಿಎಂ ಫೋನ್ ಕಾಲ್!, ಇಸ್ರೇಲ್‌ಗೇ ಬೆಂಬಲ ಎಂದ ಭಾರತ
ಇದು ಯುದ್ಧ ಅಲ್ಲವೇ ಅಲ್ಲ, ಇದು ರಣರಂಗವಂತೂ ಅಲ್ಲ. ಇದೊಂದು ಹತ್ಯಾಕಾಂಡ ಎಂದು ಇಸ್ರೇಲ್ ಡೆಫೆನ್ಸ್ ಫೋರ್ಸ್ ಜನರಲ್ ಇಟಾಯಿ ವೆರುವ್ ತಿಳಿಸಿದ್ದಾರೆ. ಶಿಶುಗಳು, ತಾಯಂದಿರು ಮತ್ತು ಅವುಗಳ ತಂದೆ, ಅವರ ಮಲಗುವ ಕೋಣೆಗಳಲ್ಲಿ ಮತ್ತು ಅವರ ಸಂರಕ್ಷಿತ ಕೊಠಡಿಗಳಲ್ಲಿ ಹೇಗೆ ಕೊಂದಿದ್ದಾರೆ ಎಂಬುದನ್ನು ನೋಡಿದ್ದೀರಿ ಎಂದು ವೆರುವ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.
ಈ ರೀತಿಯ ಕೃತ್ಯವನ್ನು ನಾನು ನನ್ನ ಜೀವಮಾನದಲ್ಲೇ ನೋಡಿಲ್ಲ. ಯುರೋಪಿನ ಹತ್ಯಾಕಾಂಡ ಸಮಯದಲ್ಲಿ ನಮ್ಮ ಅಜ್ಜಿ, ಅಜ್ಜಂದಿರು ಯಾವ ರೀತಿಯ ಹಿಂಸೆಯನ್ನು ಅನುಭವಿಸಿದ್ದಿರಬಹುದು ಎಂದು ಊಹೆ ಮಾಡಿಕೊಳ್ಳುತ್ತಿದ್ದೆವು. ಇತ್ತೀಚಿನ ಇತಿಹಾಸದಲ್ಲಿ ನಾವು ಇಂಥ ಭೀಭತ್ಸ ಭಯೋತ್ಪಾದನೆಯನ್ನು ನೋಡಿಯೇ ಇಲ್ಲ ಎಂದು ಐಡಿಎಫ್ ಜನರಲ್ ಹೇಳಿದ್ದಾರೆ.