Site icon Vistara News

Bangladesh Election: ಬಾಂಗ್ಲಾದೇಶ ಸಾರ್ವತ್ರಿಕ ಚುನಾವಣೆಯಲ್ಲಿ ಇವಿಎಂ ಬದಲಿಗೆ ಬ್ಯಾಲೆಟ್ ಪೇಪರ್ ಬಳಕೆ!

ballot paper use instead of EVM in Bangladesh election

ಢಾಕಾ, ಬಾಂಗ್ಲಾದೇಶ: ಈ ವರ್ಷಾಂತ್ಯಕ್ಕೆ ಸಾರ್ವತ್ರಿಕ ಚುನಾವಣೆಯನ್ನು (Bangladesh Election) ನಡೆಸಲು ಬಾಂಗ್ಲಾದೇಶದ ಚುನಾವಣಾ ಆಯೋಗವು (EC) ನಿರ್ಧರಿಸಿದೆ. ಈ ಮೊದಲು ಎಲೆಕ್ಷನ್‌ಗೆ ವಿದ್ಯುನ್ಮಾನ ಮತಯಂತ್ರಗಳನ್ನು (Electronic Voting Machines – ಇವಿಎಂ) ಬಳಸಲು ಆಯೋಗ ಮುಂದಾಗಿತ್ತು. ಈಗ ತನ್ನ ನಿರ್ಧಾರವನ್ನು ಬದಲಿಸಿರುವ ಆಯೋಗವು, ವಿದ್ಯುನ್ಮಾನ ಮತಯಂತ್ರಗಳ ಬದಲಿಗೆ ಬ್ಯಾಲೆಟ್ ಪೇಪರ್ ಹಾಗೂ ಪಾರದರ್ಶಕ ಬ್ಯಾಲೆಟ್ ಬಾಕ್ಸ್‌ಗಳನ್ನು ಬಳಸಲು ಮುಂದಾಗಿದೆ. ಬಾಂಗ್ಲಾದೇಶ ಚುನಾವಣಾ ಆಯೋಗದ ಕಾರ್ಯದರ್ಶಿ ಈ ಮಾಹಿತಿಯನ್ನು ನೀಡಿದ್ದು, 300 ಸಂಸದೀಯ ಕ್ಷೇತ್ರಗಳಿಗೆ ಎಲೆಕ್ಷನ್ ನಡೆಯಲಿದೆ.

ಸಾರ್ವತ್ರಿಕ ಚುನಾವಣೆಯಲ್ಲಿ 300 ಸಂಸದೀಯ ಕ್ಷೇತ್ರಗಳ ಪೈಕಿ 150 ಕ್ಷೇತ್ರಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಲು ಬಾಂಗ್ಲಾದೇಶ ಚುನಾವಣಾ ಆಯೋಗ ನಿರ್ಧರಿಸಿತ್ತು. ಇದಕ್ಕಾಗಿ 8700 ಕೋಟಿ ಟಾಕಾ ವೆಚ್ಚದ ಪ್ರಸ್ತಾಪ ಸಲ್ಲಿಸಿತ್ತು. ಆದರೆ, ಅನುಷ್ಠಾನವು ಸಾಧ್ಯವಾಗಲಿಲ್ಲ. ಅಲ್ಲದೇ, ಬಳಕೆಯಾದ ವಿದ್ಯುನ್ಮಾನ ಮತಯಂತ್ರಗಳ ಮರು ಬಳಕೆಗೆ ಸರ್ಕಾರವು ಒಪ್ಪಿಗೆ ಕೂಡ ನೀಡಲಿಲ್ಲ. ಹಾಗಾಗಿ, ಆಯೋಗ ತನ್ನ ನಿರ್ಧಾರದಿಂದ ಹಿಂದೆ ಸರಿದಿದ್ದು, ಬ್ಯಾಲೆಟ್ ಪೇಪರ್ ಬಳಸಿಕೊಂಡು ಎಲೆಕ್ಷನ್ ನಡೆಸಲು ಮುಂದಾಗಿದೆ.

ಈ ವರ್ಷಾಂತಕ್ಕೆ ಇಲ್ಲವೇ ಮುಂದಿನ ವರ್ಷದ ಜನವರಿ ತಿಂಗಳಲ್ಲಿ ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಆದರೆ, ಪ್ರಮುಖ ಪ್ರತಿಪಕ್ಷವಾಗಿರುವ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ(BNP) ಮಾತ್ರ, ಸರ್ಕಾರವು ಅವಧಿ ಪೂರ್ವವೇ ಚುನಾವಣೆ ನಡೆಸುವ ಸಂಚು ರೂಪಿಸಿದೆ ಎಂದು ಆರೋಪಿಸಿದೆ.

ಇದನ್ನೂ ಓದಿ: ಬ್ಯಾಲೆಟ್ ಪೇಪರ್ ಪ್ರಿಂಟ್ ಮಾಡಲೂ ದುಡ್ಡಿಲ್ಲ, ಸ್ಥಳೀಯ ಚುನಾವಣೆಯನ್ನೇ ಮುಂದೂಡಿದ ಶ್ರೀಲಂಕಾ!

ಕೆಲವು ದಿನಗಳ ಹಿಂದೆ ಪಕ್ಷದ ವೇದಿಕೆಯಲ್ಲಿ ಮಾತನಾಡಿದ ಬಿಎನ್‌ಪಿ ಪಕ್ಷದ ಕಾರ್ಯದರ್ಶಿ ಜನರಲ್ ಮಿರ್ಜಾ ಫಖ್ರುಲ್ ಇಸ್ಲಾಮ್ ಅಲಮ್‌ಗಿರ್ ಅವರು, ಜನರನ್ನು ಮೋಸ ಮಾಡುವುದಕ್ಕಾಗಿ ಸರ್ಕಾರವು ಅವಧಿ ಪೂರ್ವ ಚುನಾವಣೆ ನಡೆಸಲು ಯೋಜಿಸಿದೆ ಎಂದು ಆರೋಪಿಸಿದರು.

Exit mobile version