Site icon Vistara News

Bangladesh Unrest: ಆಲ್‌ ಐಸ್‌ ಆನ್‌ ಬಾಂಗ್ಲಾದೇಶ್‌ ಹಿಂದೂಸ್‌; ರಫಾ.. ರಫಾ.. ಎಂದು ಬೊಬ್ಬಿಡುತ್ತಿದ್ದ ಸೆಲೆಬ್ರಿಟಿಗಳು ಈಗೇಕೆ ಸೈಲೆಂಟ್‌?

Bangladesh Unrest

ಢಾಕಾ: ಬಾಂಗ್ಲಾದೇಶದಲ್ಲಿ ಭುಗಿಲೆದ್ದಿರುವ ದಂಗೆ ಕ್ಷಣ ಕ್ಷಣಕ್ಕೂ ಭೀಕರವಾಗುತ್ತಿದೆ. ಅಲ್ಲಿನ ಜನರ ದುಸ್ಥಿತಿ ಕೇಳುವಂತಿಲ್ಲ. ಅದರಲ್ಲೂ ಬಾಂಗ್ಲಾದೇಶ(Bangladesh Unrest)ದಲ್ಲಿ ತಲೆದೋರಿರುವ ಅರಾಜಕತೆ ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಜೀವಕ್ಕೆ ಅಪಾಯವನ್ನು ತಂದೊಡ್ಡಿದೆ. ಅದಕ್ಕೆ ಪೂರಕ ಎನ್ನುವಂತೆ ಅಲ್ಲಿನ ಹಿಂದೂಗಳು ಸಹಾಯಕ್ಕಾಗಿ ಅಂಗಲಾಚುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ನಡುವೆ ಆಲ್‌ ಐಸ್‌ ಆನ್‌ ಬಾಂಗ್ಲಾದೇಶ್‌ ಹಿಂದೂಸ್‌(All eyes on Bangladesh Hindus) ಎಂಬ ಪರಿಕಲ್ಪನೆ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್‌ ಆಗುತ್ತಿದೆ.

ಏನಿದು ಹೊಸ ಟ್ರೆಂಡಿಂಗ್‌?

ಬಾಂಗ್ಲಾದೇಶದ ಹಿಂದೂಗಳು ಮತ್ತು ದೇವಾಲಯಗಳ ಮೇಲಿನ ದಾಳಿಯ ಬಗ್ಗೆ ಮೌನವಾಗಿರುವುದಕ್ಕೆ ಬಾಲಿವುಡ್ ಸೆಲೆಬ್ರಿಟಿಗಳನ್ನು ನೆಟ್ಟಿಗರು ಟೀಕಿಸುತ್ತಿರುವ ಪರಿಕಲ್ಪನೆ ‘ಎಲ್ಲಾ ಕಣ್ಣುಗಳು ಬಾಂಗ್ಲಾದೇಶ ಹಿಂದೂಗಳ ಮೇಲೆ’ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಿವೆ. ಕೆಲವು ತಿಂಗಳುಗಳ ಹಿಂದೆ ಇಸ್ರೇಲ್ ದಾಳಿಯನ್ನು ಖಂಡಿಸಿ ಪ್ಯಾಲೆಸ್ಟೈನ್‌ ಗೆ ಬೆಂಬಲ ಸೂಚಿಸಿ ಅನೇಕರು ಇನ್ ಸ್ಟಾ ಗ್ರಾಮ್ ನಲ್ಲಿ ‘ಆಲ್ ಐಸ್ ಆನ್ ರಫಾ’ ಘೋಷಣೆಯೊಂದಿಗೆ ಹಂಚಿಕೊಂಡಿದ್ದಾರೆ. ಇದನ್ನು ಇನ್ ಸ್ಟಾ ಗ್ರಾಮ್ ನಲ್ಲಿ ಹಂಚಿಕೊಂಡಿರುವವರ ಸಂಖ್ಯೆ 30 ಮಿಲಿಯನ್ ದಾಟಿತ್ತು. ಈ ಪೋಸ್ಟನ್ನು ಬಾಲಿವುಡ್‌ ತಾರೆಯರು ತಮ್ಮ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದರು.

ಇದೀಗ ಬಾಂಗ್ಲಾದಲ್ಲಿ ಹಿಂದೂಗಳ ಮನೆ ಮನೆಗೆ ನುಗ್ಗಿ ಕಿಡಿಗೇಡಿಗಳು ದಾಂಧಲೆ ಎಬ್ಬಿಸುತ್ತಿದ್ದರೂ, ಯಾರೋಬ್ಬರು ತುಟಿಕ್‌ ಪಿಟಿಕ್‌ ಅನ್ನದಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಳ ಚರ್ಚೆಯಾಗುತ್ತಿದೆ. ಸಿನಿತಾರೆಯರ ಏಕಪಕ್ಷೀಯ ನಡೆಗೆ ಹಲವು ಟೀಕೆ ವ್ಯಕ್ತಪಡಿಸಿದ್ದಾರೆ.

ಭಾರತೀಯ ನಟರಾದ ಆಲಿಯಾ ಭಟ್, ಪ್ರಿಯಾಂಕಾ ಚೋಪ್ರಾ ಕರೀನಾ ಕಪೂರ್ ಖಾನ್ ಮತ್ತು ವರುಣ್ ಧವನ್ ಸೇರಿದಂತೆ ಅನೇಕ ಬಾಲಿವುಡ್ ತಾರೆಯರು ಈ ಚಿತ್ರವನ್ನು ಹಂಚಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮ ಸಲಹೆಗಾರ ಮ್ಯಾಟ್ ನವರ್ರಾ ಅವರು “‘ಆಲ್ ಐಸ್ ಆನ್ ರಾಫಾ’ ಪೋಸ್ಟ್ ಬಗ್ಗೆ ಪ್ರತಿಕ್ರಿಯಿಸಿದ್ದರು.

ಇದನ್ನೂ ಓದಿ: Bangladesh Protest : ಆಘಾತಕಾರಿ ಬೆಳವಣಿಗೆ; ಬಾಂಗ್ಲಾದಲ್ಲಿ ಹಿಂದೂಗಳಿಗೆ ಜೀವ ಬೆದರಿಕೆ; ಕಣ್ಣೀರಿಡುತ್ತಿದ್ದಾರೆ ಮಹಿಳೆಯರು…

Exit mobile version